ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫o ಕರ್ಣಾಟಕ ಗ್ರಂಥಮಾಲೆ ಈ ಪತ್ರವನ್ನು ಬರೆದಿರುವೆನು. ರಾಮಯನಿಗೆ ಸಹಾಯಮಾಡುವುದಾ ದರೆ ನಾನು ತಮ್ಮೊಡನೆ ಏಕೀಭವಿಸಲಾರೆನೆಂದು ಖಿನ್ನನಾಗಿರುವ, ತಮ್ಮ ಮಿತ್ರ, ಮ ಲ ಮ ಲ ಖಾ ೯, ೨ ಮೊದಲೇ ಅಂಕುರಿಸಿದ್ದ ಸಂಶಯದ ಬೀಜವು ಈಗ ಮತ್ತೂ ಚೆನ್ನಾಗಿ ಅಭಿವೃದ್ದಿಯಾಯಿತು. “ ರಾಮಯನು ವಲಮಲಖಾನನಿಗೆ ತೋರಿ ಸಿದ ಸ್ತ್ರೀ ಯಾರು ? ಅದರಿಂದ ಅವನಿಗೆ ಏನು ಪರಾಭವವಾಗಿರಬಹುದು? ಎಂದು ಕೇಳಿದನು. “ ತುರುಷ್ಕಿಷ್ಟರೇ ! ಆಕೆಯು ಅನಂಗಸೇನೆಯೇ ಆಗಿರಬೇಕು ; ಬೇಟೆಗಾರನು ದಪ್ಪ ಮೃಗಗಳನ್ನು ಹಿಡಿಯುವುದಕ್ಕಾಗಿ ಬೇರೇ ಮೃಗ ಗಳನ್ನು ಉಪಯೋಗಿಸುವಹಾಗೆ ಮಹಮ್ಮದೀಯರನ್ನು ನಾಶಪಡಿಸುವುದ ಕ್ಯಾಗಿ ಅನಂಗಸೇನೆಯ ಸಹಾಯವನ್ನು ರಾವಯನು ಸಂಪಾದಿಸಿಕೊಂಡಿರು ವಂತಿದೆ. ರಾಮವನು, ಈಕೆ ಎನ್ನು ಮಲಮುಲಖಾನನಿಗೆ ಮದುವೆ ಮಾಡಿಸುವುದಾಗಿ ಆಕೆಹುಟ್ಟಿಸಿ ಕರೆದುಕೊಂಡು ಹೋಗಿರಬಹುದು, ಅಲ್ಲಿ ಮಲಮಲಖಾನನಿಗೆ ಪರಾಭವ ಉಂಟಾಗಲು, ಆತನು ಈಗ ತಮ್ಮನ್ನು ಎಚ್ಚರಿಸಿರುವನು ” ಎಂದು ಫಕೀರನು ವಿವರಿಸಿದನು. ಮಹನೀಯರೆ ! ಇದರಿಂದ ರಾಮಯಮುಂತಿಯು ಮೋಸಗಾರ ನೆಂದು ಭಾವಿಸುವುದು ಹೇಗೆ ? ನನ್ನ ನಿಮಿತ್ತವಾಗಿಯೇ ಈ ಕಾಂತೆಯನ್ನು ಪರಸ್ಥಳದಿಂದ ತಂದುಕೊಟ್ಟಿರುವನು. ರಾಮಯಮಂತ್ರಿಯು ಮಾಡಿದ ದಂಡನೆಯು ಯುಕ್ತವಾದುದೇ, ರಾಮಯಮಂತ್ರಿಷು ದಯದಿಂದ ಆತ ನನ್ನು ಪ್ರಇಸಕೀ ತವಾಗಿ ಹೋಗಗೊಡಿಸಿದನೆಂದು ತೋರುವುದು, ನಾನೇ ಆಗಿದ್ದರೆ ಅವನನ್ನು ಕೊಂದುಬಿಡುತ್ತಿದ್ದೆನು ” ಎಂದು ಖಾನನು ಹೇಳಿದನು.