M೨ ಕರ್ಣಾಟಕ ಗ್ರಂಥಮಾಲೆ ಮೂವತ್ತೆರಡನೆಯ ಪ್ರಕರಣ. ಪ ರಾ ಭವ. - ೪ ಣ ಕಿ ಮುಹಾವಾಹಿನೀ ಸಮೇತರಾದ ಕೃಷ್ಣದೇವರಾಯರು ತಟ್ಟನೆ ಬಂದು ರಾಯರನ್ನು ಮುತ್ತಿದಾಗ, ಆ ದುರ್ಗನಿವಾಸಿಗಳು ಎಷ್ಟು ತತ್ತರಿಸು ತಿದ್ದರೋ, ಅವರು ರಾಯರನ್ನು ತಟ್ಟನೆ ಬಿಟ್ಟು ಹೊರಟ ದಿನ ಅವರು ಅಷ್ಟು ಸಂತೋಷಪಡುತ್ತಿದ್ದರು. ರಾಯರು ಹೊರಟುಹೋದುದಕ್ಕಾಗಿ ಹಲವರು ಹಲವು ವಿಧವಾಗಿ ಊಹಿಸಿಕೊಳ್ಳುತ್ತಿದ್ದರು. ಮಹಮ್ಮ ದೀಯರು ಒಟ್ಟುಗೂಡಿ ತಿರುಗಿ ಯುದ್ಧಕ್ಕೆ ಬರುವರೆಂದು ಹೆದರಿ ಓಡಿ ಹೋದರೆಂದು ಕೆಲವರೂ ದುರ್ಗವು ಅಸಾಧ್ಯವೆಂದು ತಿಳಿದು ನಿರಾಶೆ ಯಿಂದ ಹಿಂತಿರುಗಿದರೆಂದು, ಕೆಲವರೂ, ಆದಿಲ್‌ಪಹನೊಡನೆ ವೈರವನ್ನು ಕಟ್ಟಿಕೊಳ್ಳಬಾರದೆಂದು ಯೋಚಿಸಿ ಹೊರಟುಹೋದರೆಂದು ಮತ್ತೆ ಕೆಲ ವರೂ ಯೋಚಿಸಿಕೊಂಡರು. ಅಷ್ಟೇ ಹೊರತು ತಮ್ಮ ದುರ್ಗದ ಸಹಾ ಯಕ್ಕೆ ಬರುತ್ತಿದ್ದ ಆದಿಲ್‌ಪಹನನ್ನು ಓಡಿಸುವುದಕ್ಕೆ ರಾಯರು ಹೋಗಿ ರುವರೆಂದು ಯಾರೂ ಯೋಚಿಸಲಿಲ್ಲ. ಜನರಂತೂ, ಚಕ್ರವರ್ತಿ ಕೃಷ್ಣ ದೇವರಾಯರು ಹೊರಟೇಹೋದರೆಂದು ಸಂತೋಷಪಟ್ಟರು. ತೊಫಲ್ ಖಾನನೂ ಸಹ ರಾಯರ ಕಾಟವು ಸದ್ಯಕ್ಕೆ ತಪ್ಪಿತೆಂದು ಸಂತೋಷಪಟ್ಟು ಕೊಳ್ಳುತ್ತಿದ್ದನು. ಆದರೂ ಅವನು ಯುದ್ಧ ಸನ್ನದ್ಧತೆಯಲ್ಲಿ ಅಜಾಗ ರೂಕನಾಗಲಿಲ್ಲ. ರಾಯರಿಗೂ ಆದಿಲ್‌ಪಹನಿಗೂ ನಡೆದ ಯುದ್ಧದ ಮತ್ತು ಅದರ ಫಲಿತಾಂಶದ ವೃತ್ತಾಂತವು ಸ್ವಲ್ಪ ಕಾಲದಲ್ಲಿ ದುರ್ಗಕ್ಕೆ ಮುಟ್ಟಿತು. ಮಹಾಸೇನಾಸಮೇತನಾದ ಆದಿಲ್‌ಪಹನಂತಹ ಪರಾಕ್ರಮ 8 ಣ
ಪುಟ:ರಾಯಚೂರು ವಿಜಯ ಭಾಗ ೧ .djvu/೨೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.