೧೬೩ ಇ ಒ ರಾಯರು ವಿಜಯ ಕಾಲಿಗೆ ಅಪಜಯವಾದುದರಿಂದ, ತೋಫಖಾನನಿಗೆ ಇದ್ದ ಧೈರವೂ ತಗ್ಗಿ ಹೋಯಿತು. ಆದರೂ ತನ್ನ ದುರ್ಗವು ದಕ್ಷಿಣ ಹಿಂದುಸ್ಥಾನದಲ್ಲೆಲ್ಲಾ ಅತಿ ಬಲಿಷ್ಠವಾದುದರಿಂದ ಶತುವಿಗೆ ಅದು ದುರ್ಭವ್ಯವಾಗಿರುವು ದೆಂದು ಧೈಯ್ಯ ತಂದುಕೊಂಡನು. ಆದುದರಿಂದ ತನ್ನ ದುರ್ಗದಲ್ಲಿ ಕೆಲವರೇ ಸೈನಿಕರಿದ್ದರೂ ಸ್ಥಲದ ಮಾಹಾತ್ಮದಿಂದ ರಾಯರ ಸೈನ್ಯವನ್ನೂ ಇದಿರಿಸು ವುದು ಕಷ್ಟವಲ್ಲವೆಂದು ಮನಸ್ಸಿನಲ್ಲಿ ದೃಢಮಾಡಿಕೊಂಡಿದ್ದನು. ಯುದ್ಧಕ್ಕೆ ಅನುಕೂಲಿಸದ ಪುರುಷರನ್ನೂ ಮಕ್ಕಳನ್ನೂ ಉನ್ನತವಂಶಸಂಭೂತರಾದ ಸ್ತ್ರೀಯರನ್ನೂ ಸಹ ದುರ್ಗದಿಂದ ಕಳುಹಿಸಿ, ಪಕ್ಕದ ಗ್ರಾಮಗಳಲ್ಲಿ ವಾಸ ಮಾಡಿಕೊಂಡಿರಬೇಕೆಂದು ಆಜ್ಞಾಪಿಸಿದನು. ಹೀಗೆಮಾಡುವುದರಿಂದ ದುರ್ಗ ದಲ್ಲಿದ್ದ ಆಹಾರವಸ್ತುಗಳು ಹೆಚ್ಚು ಕಾಲ ಬರುವುವೆಂದೂ ಒಂದುವೇಳ ದುರ್ಗವು ಶತ್ರುವಶವಾದರೆ ಆ ಸ್ತ್ರೀಯರ ಗೌರವವನ್ನು ಉಳಿಸಿದಂತಾಗು ವುದೆಂದೂ ಖಾನನು ಯೋಚಿಸಿ ಹಾಗೆ ಆಜ್ಞಾಪಿಸಿದನು, ಆ ಸಂದರ್ಭ ದಲ್ಲಿ ಆ ದುರ್ಗದ ನಿವಾಸಿಗಳಲ್ಲಿ ಬಗೆಬಗೆಯ ಭಾವಗಳೂ ಕ್ರಿಯೆಗಳೂ ಕಾಣಿಸಿಕೊಳ್ಳುತ್ತಿದ್ದುವು, ಭೇರಿಯ ಶಬ್ದವನ್ನು ಕೇಳಿದಮಾತ್ರಕ್ಕೆ ಹೆದರುತ್ತಿದ್ದ ಅಂಜುಕುಳಿಗಳು ಸಿಕ್ಕಿದವರೊಡನೆಲ್ಲಾ ಹಲುಬಿಗೋಳಾಡುತ್ತಾ ತಮ್ಮ ಕಷ್ಟವನ್ನು ಹೇಳಿಕೊಳ್ಳತ್ತಿದ್ದರು. ಮೊದಲು ಧೈಯ್ಯದಿಂದಿದ್ದ ಕೆಲವರು ಈ ಗೋಳಾಟವನ್ನು ಕೇಳಿ ಪುಕ್ಕಲರಾಗುತ್ತಿದ್ದರು. ಮತ್ತೆ ಕೆಲವರು ಮನಸ್ಸನ್ನು ದೃಢಮಾಡಿಕೊಂಡು ಅಂತಹವರನ್ನು ಸಮಾಧಾನ ಪಡಿಸುತ್ತಿದ್ದರು. ಅದೇ ಸಮಯದಲ್ಲಿ ಉಪಾಯದಿಂದ ತಾನು ಸಂಗ್ರಹಿಸಿದ್ದ ವರ್ತೂ ಮಾನವನ್ನು ಮಾಲತಿಯು ಅನಂಗಸೇನೆಗೆ ತಿಳಿಸಿ ದುರ್ಗದ ಹೊರಕ್ಕೆ ಹೊರಡಲು ಸಿದ್ಧಳಾಗಬೇಕೆಂದು ಸೂಚಿಸಿದಳು. ಅನಂಗಸೇನೆಯು ಮಾಲ ತಿಯ ಮಾತುಗಳನ್ನು ಕೇಳಿ ಆಶ್ಚಯ್ಯಪಡುತ್ತಿದ್ದಳು. ಆಗ ಮಾಲತಿಯು m
ಪುಟ:ರಾಯಚೂರು ವಿಜಯ ಭಾಗ ೧ .djvu/೨೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.