೧೬೪ ಕರ್ಣಾಟಕಗ್ರಂಥಮಾಲೆ ದುರ್ಗದಲ್ಲಿದ್ದ ಉತ್ತಮಸ್ತ್ರೀಯರನ್ನು ದುರ್ಗದ ಹೊರಕ್ಕೆ ಹೋಗುವಂತೆ ಖಾನನೇ ಆಜ್ಞಾಪಿಸಿದ್ದುದನ್ನು ತಿಳಿಸಿ, ತಾವು ಹೋಗುವಾಗ ತಮಗೆ ಬಾಧೆ ಯುಂಟಾಗದಂತೆ ಔಷಧವನ್ನು ಕೊಟ್ಟು ಉಪಕಾರಮಾಡಿದ್ದ ವೈದ್ಯನನ್ನು ಸಹಾಯಕ್ಕೆ ಕರೆತರುವುದಾಗಿಯೂ ತಿಳಿಸಿದಳು ಹೊರಡುವುದಕ್ಕೆ ಎಲ್ಲವೂ ಸಿದ್ಧವಾದಾಗ ಮಾಲತಿಯು " ಅಮ್ಮಾ ಕಾಲಕಾಲಕ್ಕೆ ನಮಗೆ ಅನ್ನವನ್ನು ತಂದುಕೊಡುತ್ತಿರುವ ಸೇವಕಳಿಗೆ ಏನಾದರೂ ಬಹುಮಾನ ಕೊಡಬೇಕಲ್ಲವೆ?” ಎಂದು ಕೇಳಿದಳು. ಅನಂಗ-“ ಆಹಾ ! ಏನನ್ನಾದರೂ ಕೊಡಲೇಬೇಕು, ಇಲ್ಲದಿದ್ದರೆ ನಾನು ನೀಚ೪ಾದ ಕೃತಪ್ಪುಳಾಗುವೆನು, ಏನುಬೇಕಾಗಿದ್ದರೂ ಕೊಡಲು ಸಿದ್ದಳಾಗಿರುವೆನು.' - ಮಾಲತಿಹಾಗಾದರೆ ನಿನು ಧರಿಸುತ್ತಿರುವ ಒಳ್ಳೆಯ ಸೀರೆ ಯನ್ನು ಕೊಟ್ಟರೆ ಚೆನ್ನಾಗಿರುವುದು.” ಅನಂಗ- ಇದು ಬಹಳ ಬೆಲೆಯುಳ್ಳ ನೀರೆ. ಆದರೂ ಇದನ್ನು ಈಕೆಗೆ ಸಂತೋಷದಿಂದ ಕೊಡುವೆನು ” ಎಂದು ಹೇಳಿ ಆಗತಾನೆ ಅಲ್ಲಿಗೆ ಅನ್ನವನ್ನು ತಂದಿದ್ದ ಸೇವಕಿಗೆ ಕೊಟ್ಟುಬಿಟ್ಟಳು. ಮಾಲತಿ- (ಪರಿಚಾರಿಕೆಯನ್ನು ನೋಡಿ) ಎಲೇ ! ನೀನು ಎಷ್ಟು ಅದೃಷ್ಟಶಾಲಿನಿ ! ನಾನು ಎಷ್ಟೋ ವರ್ಷಗಳಿಂದ ಈಕೆಯ ಸೇವೆಯನ್ನು ಮಾಡುತ್ತಿದ್ದರೂ ನನಗೆ ಸಹ ಇಂತಹ ಸೀರೆಯನ್ನು ಕೊಟ್ಟಿಲ್ಲ ' ಎಂದು ಹೇಳಿದಳು. ಪರಿಚಾರಿಕೆಯು ಆ ಮಾತುಗಳನ್ನು ಕೇಳಿ ಬಹಳ ಸಂತೋಷಪಟ್ಟು 6 ತಾಯಿ ! ನನಗೆ ಅಪ್ರಣೆಯಾದರೆ ಹೋಗಿಬರುವನು ಎಂದಳು. ಅನಂ ಗಸೇನೆಯು ಆ ಮಾತನ್ನು ಕೇಳಿ ಆ ಸೀರೆಯನ್ನು ಅವಳು ಅಲ್ಲಿಯೆ ಉಟ್ಟುಕೊಳ್ಳುವಂತೆ ನಿರ್ಬಂಧಿಸಿದಳು. ಆ ಪರಿಚಾರಿಕೆಯು ಹಾಗೆಯೇ 3 m
ಪುಟ:ರಾಯಚೂರು ವಿಜಯ ಭಾಗ ೧ .djvu/೨೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.