ಅ೭ಳಿ ಕಣೆ ಆಗ್ರಂಥಮಾಲೆ ೧np #\ //s 99 ಕ ತನ್ನಲ್ಲಿ ಮುಕ್ತಾಂಬೆಗೆ ಅನುರಾಗವು ನಿಲ್ಲಲಾರದೆಂದು ಯೋಚಿಸಿ ೨೨ ಓ ಯುವತಿಶ್ರೇಷ್ಠಳೇ ! ಇನ್ನು ನನಗೆ ಹೆಚ್ಚಾಗಿ ಹೇಳಬೇಡ, ಎಷ್ಟು ಕಷ್ಟ ವಾದರೂ ಈ ಕೆಲಸವನ್ನು ಮಾಡುವೆನು. ನಾನು ಶತ್ರುಗಳ ಕೈಗೆ ಸಿಕ್ಕಿ ಬಿದ್ದರೆ ನಿಮಗೆಲ್ಲಾ ವ್ಯಸನವುಂಟಾಗುವುದೆಂದು ಸಂದೇಹಿಸಿ ಹಾಗೆ ಹೇಳಿ ದೆನೇ ಹೊರತು, ನನ್ನ ಪ್ರಾಣ ಮೇಲಿನ ಆಸೆಯಿಂದಲ್ಲ ೨೨ ಎಂದು ರುದ್ರ ದೇವನು ಹೇಳಿದನು. “ ರುದ್ರದೇವ ! ಇನ್ನೆಷ್ಟೇ ಅಪಕಾರಗಳನ್ನು ಮೂಡಿದ್ದರೂ, ಈಗ ನೀನು ದೂತನಾಗಿ ಹೋಗುವುದರಿಂದ, ರಾಜಧರ್ಮವಿದರಾದ ರಾಯರು ನಿನಗೆ ಯಾವ ಕೇಡನ್ನೂ ಮಾಡಲಾರರು. ಆದುದರಿಂದ ಈ ಕಾಗದವನ್ನು ಧೈಯ್ಯ ದಿಂದ ತೆಗೆದುಕೊಂಡು ಹೋಗು, ಆದರೆ ರಾಮಯಮಂತ್ರಿಗೆ ಮಾತ್ರ ತಿಳಿ ಸಕೂಡದು ” ಎಂದು ಮುಕ್ತಾಂಬೆಯು ಹೇಳಿ ಕಳುಹಿಸಿದಳು. ರುದ್ರದೇವನು ಕಾಗದವನ್ನು ತೆಗೆದುಕೊಂಡು ದುರ್ಗದಿಂದ ಹೊರಕ್ಕೆ ಹೋಗುತ್ತಿರಲು ದ್ವಾರಪಾಲಕನು ಅವನನ್ನು ತಡೆದನು, ಆದರೆ ದುರ್ಗಾಧ್ಯಕ್ಷ ನ ಅಪ್ಪಣೆಯಮೇರೆಗೆ ಬಿಜಾಪುರಕ್ಕೆ ಹೋಗುತ್ತಿರುವುದಾಗಿ ತಿಳಿಸಲು, ರುದ್ರ ದೇವನ ಪರಿಚಯವು ಅವರಿಗಿದ್ದುದರಿಂದ ನಂಬಿ ಅವನನ್ನು ಮುಂದಕ್ಕೆ ಹೋಗ ಗೊಟ್ಟರು. ಇನ್ನು ಮುಂದಕ್ಕೆ ನಿರಾತಂಕವಾಗಿ ಪ್ರಯಾ ಣವಾಡುತ್ತಾ ಕೃಷ್ಣಾ ನದೀ ತೀರದಲ್ಲಿ ಪಾಳೆಯವನ್ನು ಬಿಟ್ಟು ಕೊಂಡಿದ್ದ ರಾಯರಬಳಿಗೆ ಹೋಗುತ್ತಿದ್ದನು. ಹೀಗೆ ಬಂದುಕೊಶ ಹೋಗಲಾಗಿ ಕತ್ತಲೆಯು ದಟ್ಟವಾ ಗುತ್ತ ಬಂತು. ಅಂತಹ ರಾತ್ರಿಯಲ್ಲಿ ಶತ್ರುಗಳ ಪಾಳೆಯಕ್ಕೆ ಪ್ರಯಾಣಮಾ ಡುವುದು ಸರಿಯಲ್ಲವೆಂದು ಭಾವಿಸಿ ಸವಿಾಪದಲ್ಲಿದ್ದ ಒಂದು ಹಳ್ಳಿಯಲ್ಲಿ ರಾತ್ರಿಯನ್ನು ಕಳೆದು ಬೆಳಗ್ಗೆ ರಾಯರಬಳಿಗೆ ಹೋಗಬೇಕೆಂದು ಯೋಚಿಸಿ ಕೊಳ್ಳುತ್ತಿದ್ದನು. ಆಗ ತಂದೆ ಯಾರೋ ಒಬ್ಬ ಮಾರ್ಗಸ್ಟನು ಬರುತ್ತಿ ಸ್ಟಂತೆ ಕಂಡುಬಂತು. ಅವನ ಕೈಯಲ್ಲಿ ಯಾವ ಆಯುಧವೂ ಇರಲಿಲ್ಲವಾ (7)
ಪುಟ:ರಾಯಚೂರು ವಿಜಯ ಭಾಗ ೧ .djvu/೩೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.