ಶಾಯ ರುವಿಜಯ ೧೭೫ ದುದರಿಂದ ಅವನೂ ಒಬ್ಬ ಪ್ರಯಾಸಕನೆಂದು ನಿರ್ಧರಿಸಿ ಈ ರೀತಿಯಲ್ಲಿ ಸಂಭಾಷಣೆಯನ್ನು ಆರಂಭಿಸಿದನು '- ರುದ-* ಅಯ್ಯಾ, ನೀ ಇವ್ರು ಯಾರು ? ಎಲ್ಲಿಗೆ ಹೋಗುವಿರಿ ? " ನಾರ್ಗಸ್ಥ- ನಮ್ಮದು ಅಗೋ ಅಲ್ಲಿ ಕಾಣುತ್ತಿರುವ ಹಳ್ಳಿ ; ಕಾರ್ಯಾರ್ಥವಾಗಿ ರಾಯೂರಿಗೆ ಹೋಗಿ ಹಿಂತಿರುಗುತ್ತಿದೇನೆ. ನೀವು ಯಾರು ? ಎಲ್ಲಿಗೆ ಹೋಗುತ್ತಿರುವಿರಿ. ? ೨ ರುದ್ರ-* ನಾನು ರಾದd ರಿನ ನಿವಾಸಿ. ಒಂದು ಆಯು ನಗಿ ' ಐ ರಾಯರ ಬಳಿಗೆ ಹೋಗುತ್ತಿರುವೆನು, ಈ ರಾತ್ರಿ ಹಳ್ಳಿಯಲ್ಲಿ ತಂಗಿದ್ದು, ನಾಳೆ ಬೆಳಗ್ಗೆ ನನ್ನ ಕೆಲಸದಮೇಲೆ ಹೊರಡಬೇಕೆಂದಿರುವೆನು. ಇಳಿದು ಕೊಳ್ಳಲು ಅಲ್ಲಿ ಸ್ಥಳವು ಸಿಕ್ಕುವುದೇ ? ೨೪ ಮಾರ್ಗಸ್ಥ-“ ಸಿಕ್ಕುವುದು ; ನಿಮ್ಮದು ಯಾವ ಜಾತಿ ? ಹೇಳಿದರೆ ನಿಮಗೆ ಸ್ಥಳವು ಯಾವಕಡೆ ಸಿಕ್ಕುವುದೆಂದು ಹೇಳುವೆನು.” ರುದ್ರ-“ ನಾನು ರೆಡ್ಡಿ ವಂಶದವನು. ಈಗ ನಾನು ಈ ಸ್ಥಿತಿಯ ಆದ್ದರೂ ನಮ್ಮ ಪೂರ್ವಿಕರು ದುರ್ಗಾಧಿಪತ್ಯವನ್ನು ನಡೆಯಿಸುತ್ತಿದ್ದರು." ಮಾರ್ಗಸ್ಥ- ರೆಡ್ಡಿಗಳ ಪ್ರಖ್ಯಾತಿಯನ್ನು ನಾನು ಕೇಳಿರುವೆನು. ನಮ್ಮ ಊರಲ್ಲಿ ರೆಡ್ಡಿ ಕುಲದವರು ಇರುವರು. ಯಾವುದೋ ಕೆಲಸ ಕ್ಕಾಗಿ ಕೆಲವು ದಿನಗಳ ಹಿಂದೆ ಅವರು ನಮ್ಮ ಊರಿಗೆ ಬಂದಿರುವರು. ನೀವು ಈ ರಾತ್ರೆ ಅಲ್ಲಿ ಆತಿಥ್ಯವನ್ನು ಹೊಂದಿ ಮುಂದಕ್ಕೆ ಪ್ರಯಾಣ ಮಾಡುವುದು ಉಚಿತವೆಂದು ತೋರುವುದು.12 ರುದ್ರ-+ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಬಿಡು ವಿರಾ ? 99 ಮಾರ್ಗಸ್ಥ-“ ಓಹೋ ! ಅದಕ್ಕೇನು ? ಆಗಲಿ »
ಪುಟ:ರಾಯಚೂರು ವಿಜಯ ಭಾಗ ೧ .djvu/೩೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.