ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಗಾಯ ರುಎಚಯ - ದಿ. ಸೇರಬೇಕೆಂದು ನಿರ್ಧರಿಸಿ ಅತ್ತ ಕಡೆಯೇ ನೋಡುತ್ತಿದ್ದನು. ಅಷ್ಟರಲ್ಲಿ ಮಂಗಳವಾದ್ಯಘೋಷವು ಕೇಳಬಂದಿತು, ಜನರು ಇದನ್ನು ಕೇಳಿ ಅದೇನಿರಬಹುದೆಂದು ತರ್ಕವಿತರ್ಕಗಳನ್ನು ಮಾಡಿಕೊಳ್ಳುತ್ತಾ, ಕುತೂಹ ಲಿತಾಂತರಂಗರಾಗಿ ನೋಡುತ್ತಿದ್ದರು. ಆಗ ರಾಜಾಧಿರಾಜರಾದ ಶ್ರೀಕೃಷ್ಣ ದೇವರಾಯರು ತುರಗಿಷ್ಟಗಳನ್ನು ಹೂಡಿದ್ದ, ಒಂದು ರಥದಲ್ಲಿ ಕುಳಿತು ಕತಿಪಯಸೇವಕಪರಿತರಾಗಿ ಅಲ್ಲಿಗೆ ಬಿಜಮಾಡಿ ತಮಗಾಗಿ ಏರ್ಪಡಿಸಿದ್ದ ಉನ್ನತಾಸನವನ್ನಲಂಕರಿಸಿದರು. ಬಳಿಕ ಆ ದಿನದ ಕಾಠ್ಯಗಳು ಉಪಕ್ರಮವಾದುವು. ಮೊದಲು, ಪರೀಕ್ಷಾರ್ಥವಾಗಿ ಬಂದಿದ್ದವರು ತಮ್ಮ ಖಡ್ಗಗಳನ್ನು ಹಿಡಿದು ಸಾಧಕ ವಾಡಿದರು, ಆದರೆ ಹೀಗೆ ಸಾಧಕವಾಡುವುದರಲ್ಲಿ ಒಂದು ಚಮತ್ಕಾರವಿ ದ್ವಿತು, ಜನರು ತಮ್ಮ ಮೇಲೆ ಎಸೆಯುತ್ತಿದ್ದ ಕಲ್ಲುಗಳನ್ನು ಮೇಲೆ ಬಿಳಿಸಿ ಕೊಳ್ಳದಂತೆ ಸಾಧಕವಾಡುತ್ತಿದ್ದವರು ಕ ತಿಗಳನ್ನು ತಿರುಗಿಸಬೇಕಾಗಿ ದ್ವಿತು, ಅವರಲ್ಲಿ ಯಾರು ಈ ಕಟ್ಟಗೆ ತಪ್ಪದಂತೆ ಸಂಧಕ ಮಾಡಬಲ್ಲವ ರಾಗಿದ್ದರೋ ಅವರೇ ಜಯಶಾಲಿಗಳದು ನಿರ್ಣಯವಾಗುತ್ತಿದ್ದಿತು. ಇದ ರಲ್ಲಿ ಉತ್ತೀರ್ಣರಾದವರು ಬ೪ ಕ ಬಿಲ್ಲು ಬಾಣಗಳನ್ನು ಹಿಡಿದು ೭:೦ದು ಅಕ್ಷವನ್ನು ಭೇದಿಸಬೇಕಾಗಿದ್ದಿತು, ಇದರಲ್ಲಿ ಅನೇಕರು ಪರಾಜಿತರಾ ದರು. ಮೊದಲನೆಯ ಪಂಥದಲ್ಲಿ ಗೆದ್ದವನು ಇದರಲ್ಲಿ ಯ ವಿಜಯಿ ಯಾದನು. ಇದಾದ ಬಳಿಕ ಕಾಯಶಕ್ತಿಯ ಪರೀಕ್ಷೆಗಾಗಿ ನಿಯಾನ್ ವಾ ಗಿದ್ದ ಮಲ್ಲಯುದ್ದಗಳ ತಿ ಮಹಾರಾಜರ ಅನುಮತಿಯಂತೆ ಪುರಂಭವಾದುವು ಕೂಡಲೆ ಇಬ್ಬರು ಪುರುಷರು ಅಖಾಡಕ್ಕೆ ಬಂದು ವಿಚಿತ್ರಗತಿಗ%ಂದೆ ಸುತ್ತುತ್ತಾ ತಮ್ಮ ಬಲಾತಿಶಯಗಳನ್ನು ತೋರಿಸುತ್ತಾ, ಪ್ರೇಕ್ಷಕರ ಮನಸ್ಸನ್ನು ತಮ್ಮ ಕಡೆಗೆ ಆಕರ್ಷಿಸಿ, ಮಲ್ಲಯುದ್ದಕ್ಕೆ ಮೊದಲುಮಾಡಿದರು. ಈ ಇಬ್ಬರು ಮಲ್ಲರಲ್ಲಿ ಒಬ್ಬನು, ಪಠಕರಿಗೆ ಪೂರ್ವದಲ್ಲಿ ಪರಿಚಿತನಾಗಿ ರುವ ರುದ್ರದೇವನು ; ಮತ್ತೊಬ್ಬನ ಹೆಸರು ಶಂಕರರೆಡ್ಡಿ, ಇಬ್ಬರಿಗೂ ಮಲ್ಲಯುದ್ದಕ್ಕೆ ಪ್ರಾರಂಭವಾದ ಸ್ವಲ್ಪ ಹೊತ್ತಿನೊಳ ಗಾಗಿ ರುದ್ರದೇವನೆ ವಿಜಯಿಯಾದನು, ಹಿಂದೆ ನಡೆದ ಎರಡು ಪಂಥಗಳಲ್ಲಿಯ ಈತನೇ ಜಯಶಾಲಿಯಾಗಿದ್ದುದರಿಂದ ಪ್ರೇಕ್ಷಕರ ಪ್ರೋತ್ಸಾಹಪೂರ್ವಕವಾದ ಪ್ರಶಂ ಸಾಶಬ್ದಗಳೂ ಕರತಲಧ್ವನಿಗಳೂ ದಿಗ್ವಿವರಗಳನ್ನು ವ್ಯಾಪಿಸಿದುವು. ಬ ಬ (y