ತಿ ಕಾಯ ರುಎಜಯ ದಿ | m) ಗಳಲ್ಲಿಯ ವಿಜಯಿಯಾಗಿ ಬಹುಮಾನವನ್ನು ಪಡೆಯುವನೆಂದು ನಿಲ್ಲ ಬಿ.ಸಿ ದರು, ಆತನನ್ನು ಕಂಡಕೂಡಲೆ ಇದುವರೆಗೂ ಜಯಶಾಲಿಯಾಗಿದ್ದ ಮುದು ದೇವನಿಗೂ ಸಹ ಹಸ್ತಗತವಾಗಿದ್ದ ಬಹುಮತಿಯು ತಪ್ಪಿ ಹೋಗುವುದೆಂಬ ಶಂಕೆಯು ತಲೆದೋರಿತು, ಅಷ್ಟರಲ್ಲಿ ಆ ವೀರನು ಮಹಾರಾಜರವರ ಅನು ಮತಿಯನ್ನು ಪಡೆದು ತನ್ನ ಖಡ್ಗವನ್ನು ತಿರುಗಿಸಲಾರಂಭಿಸಿದನು. ಇಪ್ಪತ್ತು ಮಂದಿ ಅವನಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರೂ, ಪ್ರತಿಯೊಂದು ಕಲ್ಲೂ ಕತ್ತಿಗೆ ತಾಕಿ ಕೆಳಗೆ ಬೀಳುತ್ತಿದ್ದಿತೇ ವಿನಾ, ಒಂದಾದರೂ ಆತನ ಮೈಯನ್ನು ಸೋಕಲಿಲ್ಲ. ಆತನ ಈ ಬಗೆಯ ಕರಲಾಘವವನ್ನು ಕಂಡು ಪ್ರೇಕ್ಷಕರಲ್ಲಿ ಹಲವರು ವಿಸ್ಮಯಾವಿಷ್ಟ ಚಿತ್ತರಾದರು. ಅಲ್ಲಿದ್ದ ವೀರರ ಕೆಲವರನ್ನು ಈರ್ಷ್ಯಾನಲವು ವೇದಿಸುತ್ತಿದ್ದಿತು, ಅನಂತರ ಆ ವೀರನ ಬಿಲ್ಲು ಬಾಣಗಳನ್ನು ತೆಗೆದುಕೊಂಡು ದೂರದಲ್ಲಿದ್ದ ಗುರಿಯನ್ನು ಬಂದೇ ಒಂದು ಬಾಣದಿಂದ ಕತ್ತರಿಸಿ ಕೆಡವಿದನು. ಮಹಾರಾಜರೂ ನಿಷ್ಪಕ್ಷಪಾತಿಗ ೪ಾದ ಅನೇಕ ಪ್ರೇಕ್ಷಕರೂ ರುದ್ರದೇವನ ಕೈಚಳಕಕ್ಕಿಂತಲೂ ಈ ನೂತನವೀರನದೇ ಮೇಲಾದುದೆಂದು ನಿರ್ಧರಿಸಿದರು, ಮತ್ಸರಗಸ್ತರಾದ ಕೆಲವರಿಗೂ, ತಮ್ಮ ದೇಶದ ವೀರನಾದ ರುದ್ರದೇವನಿಗೆ ಸಲ್ಲುತ್ತಿದ್ದ ಬಹು ಮಾನವು ವಿದೇಶೀಯನಾದ ಈ ನೂತನವೀರನಿಗೆ ದೊರಕುವುದಲ್ಲಾ ಎಂಬ ದುರಾಗ್ರಹದಿಂದ ದಗ್ಧಮಾನಸರಾದ ಮತ್ತೆ ಕೆಲವರಿಗೂ, ನಾನವ್ಯಕ್ತಿಯ ಕಾರಗಳಲ್ಲಿ ಇಲ್ಲದಿದ್ದ ಕೆಲವು ಹುಳುಕುಗಳು ಕಾಣುತ್ತಿದ್ದುವು. ಆದರA ಮಹಾರಾಜರವರು ಇಂತಹ ಕರುಬರ ಆಕ್ಷೇಪಣೆಗಳಿಗೆ ಕಿವಿಗೊಡಲಿಲ್ಲ. ಅಂತೂ ಮಲ್ಲಯುದ್ಧದಲ್ಲಿ ವಿಜಯಿಯಾದಾತನೇ ಬಹುಮಾನರ್ಹನಾಗುವ ನೆಂದು ಹೇಳಿದ್ದುದರಿಂದ ರುದ್ರದೇವನೂ ನೂತನವೀರನೂ ಆ ಯುದ್ಧಕ್ಕೆ ಸಿದ್ದರಾದರು. ಅವರಿಬ್ಬರೂ ಮತ್ತಭಗಳಂತ ಒಬ್ಬನ ಇದಿರಿಗೆ ಮತ್ತೊ ನು ನಿಂತು ಭುಜಸ್ಪಾಲನಗಳಿಂದಲೂ, ಊತುಸ್ಸಾಲನಗಳಿಂದಲೂ ಪ್ರೇಕ್ಷಕರ ದೃಷ್ಟಿಗಳನ್ನು ತಮ್ಮ ಕಡೆಗೆ ಆಕರ್ಷಿಸಿ ಒಬ್ಬರನ್ನೊಬ್ಬರು ಬಗೆಬಗೆಯ ಪಟ್ಟುಗಳಿಂದ ಬಿಗಿದು ಹಿಡಿದು ವಿವಿಧಚಿತ್ರಗತಿಗಳಿಂದ ಪ್ರೇಕ್ಷಕ ರಿಗೆ ಹರ್ಷೋತ್ಕರ್ಷವನ್ನುಂಟುಮಾಡುತ್ತಿದ್ದರು. ಅಲ್ಲಿದ್ದವರಲ್ಲಿ ಕೆಲವರು ರುದ್ರದೇವನ ಪಕ್ಷವನ್ನೂ ಮತ್ತೆ ಕೆಲವರು ನೂತನವೀರನ ಪಕ್ಷವನ್ನೂ
ಪುಟ:ರಾಯಚೂರು ವಿಜಯ ಭಾಗ ೧ .djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.