ಆರನೆಯ ಪ್ರಕರಣ ಓn wwwmmmwwwmwwwmmmmmmmywwwx ಮುಕ್ತಾಂಬೆ-' ನನ್ನ ಅಭಿಪ್ರಾಯವೂ ತಮ್ಮ ಅಭಿಪಯದಂತ ಯೇ ಇರುವುದು. ನಾನು ಈ ವಿಷಯವನ್ನು ಕುರಿತು ಎಷ್ಟು ಹೇಳಿದರೂ ಕೇಳದೆ, ನಮ್ಮ ಪಹರೇಶ್ವರಸನೃತಿಗಳು ಆ ಸಮಜರನ್ನು ಇದಿರಿಸುವ ಪ್ರಯತ್ನವನ್ನು ಮಾಡುತ್ತಿರುವರು.” - ವಿಜಯಸಿಂಹ- ಏನು ! ಕೃಷ್ಣದೇವರಾಯರು ನಿಮ್ಮ ದುರ್ಗವನ್ನು ನಿಮಗೆ ಬಿಟ್ಟು ಕೊಡುವರೆಂದು ಕೇಳಿದ್ದೆನಲ್ಲಾ! ?' ಮುಕ್ತಾಂಬೆ-“ ನಮ್ಮ ಮಂತ್ರಿಗಳು ಬಿಜಾಪುರ ಮೊದಲಾದ ರಾಜ್ಯ ಗಳ ಅಧಿಪತಿಗಳ ಸಹಾಯದಿಂದ ವಿಜಯನಗರರಾಜ್ಯ ತೇಜಃಪುಂಜವನ್ನು ಆರಿಸಬೇಕೆಂದು ಯತ್ನಿಸುತ್ತಿರುವರು. ೨ ವಿಜಯ - ಅದು ವ್ಯರ್ಥಾಭಿಲಾಷೆ, ವಿಜಯನಗರ ಸಾಮ್ರಾಜ್ಯತೇಜಃ ಪುಂಜವನ್ನು ಆರಿಸಲು ಯತ್ನಿಸುವುದೂ ಶಶವಿವಾಣವನ್ನು ಸಂಪಾದಿಸಲು ಯತ್ನಿಸುವುದೂ ಒಂದೇ, ೨ ಮುಕ್ಕಾಂಬೆ-“ ನನಗೆ ಅದು ಗೊತ್ತು, ನಾನು ಎಷ್ಟು ಹೇಳಿದರೂ ಅವರು ಕೇಳದಿರುವರು, ನನ್ನ ಪ್ರೇಯಃಕಾಂಕ್ಷಿಗಳಾದವರನ್ನು ನಿರಾಕರಿ ಸುವುದು ಸರಿಯಲ್ಲವೆಂದು ಸುಮ್ಮನಿರುವೆನು, ಅಮಾತ್ಯಾದಿಗಳ ಪ್ರಯತ್ನವು ಸಾಗದಿದ್ದರೆ ಆಗ ಸಮೋಪಾಯವನ್ನು ಅವಲಂಬಿಸಬಹುದು, ಉದಾರ ಬೆತ್ತರಾದ ಚಕ್ರವರ್ತಿಯವರು ನಿಮ್ಮ ವಿಷಯದಲ್ಲಿ ಹೇಗಿರುವರು ? ? - ವಿಜಯ“ ಸುಂದು ! ನಾನು ಆ ಸಾರ್ವಭೌಮರ ಮಹಾನುಗ್ರಹ ಕೈ ಪಾತ್ರನಾಗಿರುವೆನೆಂದು ನಿನಗೆ ತಿಳಿಸಲು ಬಹಳ ಸಂತೋಷವಾಗುವುದು. ನನ್ನನ್ನು ಅವರು ವಿಶೇಷಗೌರವದಿಂದ ಕಾಣುತ್ತಿರುವರು, ಆಹೊತ್ತು ಮಂತ್ರಿಪುಂಗವರನ್ನು ಅಪಾ ಮದಿಂದ ತಪ್ಪಿಸಿದಾಗಿನಿಂದಲೂ, ಅವರು ನನ್ನನ್ನು ತಮ್ಮ ಮಗನಂತೆಯೇ ನೋಡಿಕೊಳ್ಳುತ್ತಿರುವರು. ?? - ಮುಕ್ತಾಂಬೆ- ನಿಮ್ಮ ಸಂದರ್ಶನವನ್ನು ಪಡೆದು ನಿಮ್ಮ ವೃತ್ತಾಂತ ವನ್ನು ಕೆಳದುದರಿಂದ ಬಹಳ ಸಂತೋಷವಾಯಿತು, ಹಿಂದೆ ನನ್ನ ವಿಷಯ ದಲ್ಲಿ ತಮಗೆ ಉಂಟಾದ ಅನುರಾಗವು ಹೇಗಿರುವುದೆ ಪರಿಕ್ಷಿಸಬೇಕೆಂದು ನೆನೆದು ತಮ್ಮನ್ನು ಇಲ್ಲಿಗೆ ಬರಹೇಳಿದೆನು, ನಾನು ಹಾಗೆ ಬರಹೇಳಿದುದು ದುಡುಕೆಂದು ಈಗ ತೋರುವುದು, ಆದರೂ ತಾವು ಹೊರಟ ಮುಹೂರ್ತವು
ಪುಟ:ರಾಯಚೂರು ವಿಜಯ ಭಾಗ ೧ .djvu/೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.