ಎಂಟನೆಯ ಪ್ರಕರಣ Mwwwwmv ಎಂಟನೆಯ ಪ್ರಕರಣ ಮೊಸ.. ಮಧು ತಿಷ್ಠತಿ ಜಿಹ್ವಾಗ್ರೇ ಹೃದಿ ತಿಷ್ಠತಿ ಕರ್ತರೀ ಪ್ರಹರೇಶ್ವರನು ವಿಜಯಸಿಂಹನ ಅನುಮತಿಯನ್ನು ಪಡೆದು ಮನೆ ಯನ್ನು ಬಿಟ್ಟು ಹೊರಟಕಡಲೆ, ಅವನಿಗೆ ಕೆಲವರು ಕಾಣಿಸಿಕೊಂಡರು. ಅವರನ್ನು ಕರೆದುಕೊಂಡು ಆ ಗೃಹದ ಬೇರೊಂದು ಭಾಗದಲ್ಲಿದ್ದ ಆಲೋ ಚನಾಮಂದಿರಕ್ಕೆ ಹೋಗಿ ಕುಳಿತುಕೊಂಡನು. ಸ್ವಲ್ಪ ಹೊತ್ತಿನಲ್ಲೇ ಅಲ್ಲಿ ಗೆ ಮುಕಾಂಬೆಯ ಬಂದು ಸೇರಿದಳು, ವಿಜಯಸಿಂಹನಲ್ಲಿ ಮುಕ್ಕಾಂಬೆಗೆ ಅನುರಾಗವಿದ್ದುದು ಅಲ್ಲಿ ಯಾರಿಗೂ ತಿಳಿದಿರಲಿಲ್ಲ. ಆದುದರಿಂದ ಅಲ್ಲಿದ್ದವ ರೆಲ್ಲರೂ ಈ ಕೆಳಗೆ ಕಂಡಂತೆ ಧಾರಾಳವಾಗಿ ಸಂಭಾಷಿಸತೊಡಗಿದರು:- ಪಹರೇ-“ ರಾಮಯಾವಾತ್ಯರ ! ಕಟುಕನ ಅಂಗಡಿಗೆ ಕುರಿ ಬಂದಂತೆ ವಿಜಯಸಿಂಹನು ಈ ದಿನ ನಮ್ಮ ಬಳಿಗೆ ಬಂದಿರುವನು, ಇವನು ವಿಜಯನಗರಕ್ಕೆ ಅತಿ ಕರೆಯಿಂದ ಹಿಂದಿರುಗುತ್ತಿದ್ದಾಗ ಅವನಿಗೆ ಮರುಳು ಮಾಡಿ ಇಲ್ಲಿಗೆ ಕರೆದುಕೊಂಡುಬಂದು, ನಮ್ಮ ಕಡೆಗೆ ಸೇರಿಸಿಕೊಳ್ಳಬೇ ಕಂದು ಸರ್ವಪ್ರಯತ್ನವನ್ನೂ ಮಾಡಿನೋಡಿದೆನು ನನ್ನ ಆಸೆಯು ಕೈ ಗೂಡಲಾಗದು, ಆದುದರಿಂದ ಅವನನ್ನು ದವಸದನಕ್ಕೆ ಸಾಗಕಳುಹಿಸು ವುದೇ ಯಕವೆಂದು ತೋರುವುದು " ರಾಮಯ-“ ನೀನು ಹೇಳುವುದೇನೋ * ಸರಿ. ವಿಜಯಸಿಂಹನು ಬಹಳ ಪರಾಕ್ರಮಶಾಲಿ; ಇಂತಹವನನ್ನು ಕೊಲ್ಲುವುದಕ್ಕೆ ಪ್ರತಿ ಯಾಗಿ ನಮ್ಮ ವಶಪಡಿಸಿಕೊಂಡರೆ, ನನಗೆ ಬಹಳ ಲಾಭವುಂಟೆಂದು ಭಾವಿಸಿ, ಸಾವೊಪಾಯದಿಂದ ಅವನನ್ನು ನನ್ನ ಕಡೆಗೆ ಮಾಡಿಕೊಳ್ಳಬೇ ಕೆಂದು ನಿನಗೆ ಹೇಳಿದ್ದೆನು, ಇದು ಸಾಧ್ಯವಲ್ಲದುದರಿಂದ, ಅವನನ್ನು ಕಡೆಗಾ ಣಿಸುವುದು ಆವಶ್ಯಕವೆಂದು ಕಾ೪ುವುದು. " ಪ್ರಹರೇ- ಮಂತ್ರಿ ಶ್ರೇಷ್ಠರೆ ! ಆ ಹೊತ್ತು ಆ ದುರಾತ್ಮನು ಹೊಡೆದ ಏಟು ನನಗೆ ಇನ್ನೂ ಬಾಧಿಸುತ್ತಿದೆ. ಅವನಿಗೆ ಆ ಸಾಲವನ್ನು ತೀರಿಸಬೇಕೆಂದು ನನಗೆ ಬಹಳ ಆಸೆ ಇರುವುದು, ಅವನಿಗೆ ನಿದ್ದೆ ಹತ್ತಿದ
ಪುಟ:ರಾಯಚೂರು ವಿಜಯ ಭಾಗ ೧ .djvu/೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.