ಕಾಯುವಿಜಯ ೬೭ newwwx ಕೂಡಲೆ ಅವನನ್ನು ಕಡಿದು ತುಂಡುತುಂಡು ಮಾಡಿ ಬಾವಿಯೊಳಕ್ಕೆ ಹಾಕಿ ಬಿಡಬೇಕೆಂದು ನಿರ್ಧರಿಸಿದೇನೆ. ಇದಕ್ಕೆ ತಮ್ಮ ಅಭಿಪ್ರಾಯವೇನು ? " ಎಂದು ಕೇಳಿದನು. ಮುಕ್ಕಾಂಬೆ-“ ನನಗೆ ಒಂದು ಸಂಶಯವುಂಟಾಗಿರುವುದು, ನಮ್ಮ ಮನೆಯಲ್ಲಿ ಇಂತಹ ಕಾವನ್ನು ಎಷ್ಟೇ ಗುಟ್ಟಾಗಿ ಮಾಡಿದರೂ ಜನರಿಗೆ ತಿಳಿದುಬಿಡದೆ ಹೋಗುವುದಿಲ್ಲ, ಒಂದುವೇಳೆ ಹಾಗೆ ತಿಳಿದುಹೋದರೆ, ನಮ್ಮೆಲ್ಲರಿಗೂ ಹಾನಿಯುಂಟಾಗುವುದು. ಆದುದರಿಂದ ಇನ್ನೂ ಚೆನ್ನಾಗಿ ಯೋಚಿಸಿ ಅಂತಹ ಕಾರ್ಯವನ್ನು ಮಾಡುವುದು ಕ್ಷೇಮವೆಂದು ನನಗೆ ತೋರುವುದು, ” ರಾಮಯ-“ ಸಣ್ಣವಳಾದರೂ, ಮುಕ್ಕಾಂಬೆಯು ಹೇಳುವ ಈ ಮಾತುಗಳು ಬಹಳ ಯುಕ್ತವಾದುವು. ವಿಜಯಸಿಂಹನು ಇಲ್ಲಿಗೆ ಬಂದಿರುವ ವೃತ್ತಾಂತವು ಚಕ್ರವರ್ತಿಗಳಿಗೂ ಮಂತ್ರಿಗೂ ಗೊತ್ತಿದೆ. ಈಗ ಅವನನ್ನು ' ಕೊಂದರ ಸಂಶಯವು ನಮ್ಮ ಮೇಲೆಯೇ ನಾಟಕೊಳ್ಳುವುದು. " ಮುಕ್ಕಾಂಬೆ-“ ಆದುದರಿಂದ ವಿಜಯಸಿಂಹನಿಗೆ ಮತ್ತೂ ನಂಬಿಕೆ ಹುಟ್ಟಿಸಲು, ಈ ಸಾರಿ ಅವನನ್ನು ಬಿಟ್ಟುಬಿಟ್ಟರೆ, ಅವನು ಆಗಾಗ ನಿಸ್ಸಂ ಶಯವಾಗಿ ಇಲ್ಲಿಗೆ ಬರುತ್ತಿರುವನು, ಸಮಯಕಾದಿದ್ದು ಒಂದುವೇಳ - ನಮ್ಮ ಕೆಲಸವನ್ನು ಮಾಡಿಕೊಳ್ಳಬಹುದು. " - ಪಹರೇ- ' ಮುಕ್ತಾಂಬೆ ! ಹೀಗೆ ಪುಕ್ಕಲುತನದಿಂದ ಕೈಗೆ ಸಿಕ್ಕಿ ರುವ ಹಗೆಯನ್ನು ಬಿಟ್ಟು ಬಿಡುವುದಕ್ಕೆ ನನಗೆ ಸ್ವಲ್ಪವೂ ಇಷ್ಟವಿಲ್ಲ." ರಾಮಯ- ಪ್ರಹರೇಶ್ವರ ! ಅವನನ್ನು ಈಗ ಬಿಟ್ಟುಬಿಡುವುದು ನನಗೂ ಸಮ್ಮತವಿಲ್ಲ. ಈಗ ಒಂದು ಕೆಲಸಮಾಡು. ನೀನೂ ಅವನ ಬಳಿ ಮಲಗಿಕೊಂಡಿರು. ಅವನಿಗೆ ನಿದ್ದೆ ಹತ್ತಿದ ಕೂಡಲೆ, ರುದ್ರದೇವಾದಿ ಗಳು ವೇದವನ್ನು ಮರೆಸಿಕೊಂಡು ಬಂದು, ಮೊದಲು ನಿನ್ನನ್ನು ಬಂಧಿಸಿ ಕೆಡವುವರು, ಬಳಿಕ ವಿಜಯಸಿಂಹನನ್ನು ಕಟ್ಟಿ ಹಿಡಿದುಕೊಂಡುಹೋಗಿ ಕೈವಮಠದಲ್ಲಿ ಕೊಂದುಬಿಡುವರು, ಹೀಗೆ ಮಾಡಿದರೆ, ಪಹರೇಶರನಿಗೆ ಆಗದವರು ಯಾರೋ ಬಂದು ಅವನನ್ನು ಕಟ್ಟಿ ಕೆಡವಿ ವಿಜಯಸಿಂಹನನ್ನು
ಪುಟ:ರಾಯಚೂರು ವಿಜಯ ಭಾಗ ೧ .djvu/೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.