ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ ತ ಮಿ ತ ವಿ ಜಿ ಯ ನಾ ಟ ಕ ೦. ಸೌಗಂಧಿಕ, ಆನೀಚಸ್ತಿಯು ನಿನಗೆ ಗುಟ್ಟಿನಲ್ಲಿ ಹೇಳಿದುದನ್ನೆ ನೀನು ನನಗೆ ಹೇಳಿದರೂ ನಂಬದೆ ನಿನ್ನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿಸಿ ಎಷ್ಟು ತೊಂದರೆಯನ್ನುಂಟುಮಾಡಿದಾಗೂ ಅದನ್ನು ಮನ ಸ್ಪಿಗೆ ತಂದುಕೊಳ್ಳದೆ, ನನ್ನ ಶವವನ್ನು ಹೊತ್ತುಕೊಂಡು ಬಂದು ನನಗೆ ಜೀವವನ್ನು ಕೊಟ್ಟು ಕಾಪಾಡಿದೆಯಲ್ಲ. ನಿನ್ನ ಉಪಕಾರಕ್ಕೆ ನಾನು ಏನು ಕೊಟ್ಟು ಕೃತಾರ್ಥನಾಗಲಿ. ನನ್ನ ಅಪರಾಧವನ್ನು ಮನ ಸ್ಪಿನಲ್ಲಿಡದೆ ಕ್ಷಮಿನಿ ಕಾಪಾಡು. ಈಕೆಯಾರು ? ವಸಂತಮಿತ್ರ, ನಿನ್ನ ಪ್ರಾಣವನ್ನು ಕಾಪಾಡಲು ನಾನು ಈಕೆಯನ್ನು ಮದುವೆಯಾಗಿರುವೆನು. ಈಕೆಯು ಕಾಳಿ೦ವರದಿಂದ ನಿನ್ನನ್ನು ಬದು ಕಿಸಿದಳು. ಸೌಗಂಧಿಕ, ಅಮ್ಮ, ಪ್ರಾಣದಾನಮಾಡಿದ ನೀನೇ ನನ್ನ ಮಾತೆಯು (ಎಂದು ನಮಸ್ಕರಿಸುವನು.) ಶುಭಾಂಗಿ, ಸೌಗಂಧಿಕನೆ, ಕೇಳು ; ಸ್ನೇಹಿತನು ತನ್ನ ಮಿತ್ರನಿಗೆ ಒಳ್ಳೇದಾಗಲೆಂದು ಸ್ವಲ್ಪ ಕೆಲಸಕ್ಕೂ ಅಲಕ್ಷ್ಯಮಾಡದೆ ತುಂಬಾ ಶ್ರಮೆ ಯನ್ನು ತೆಗೆದುಕೊಳ್ಳುವನು. ಅಂತಹ ಮಿತ್ರನನ್ನು ಅವಿವೇಕದಿಂದ ತಿರಸ್ಕರಿಸಿಬಿಡುವನೆಂಬುವುದಕ್ಕೆ ನೀನೇ ದೃಷ್ಟಾಂತವಾಗಿದ್ದೀಯೆ. ಒಳ್ಳೇಸ್ನೇಹಿತನಿಗೆ ಸಮಾನವಾದ ವಸ್ತುವು ಪ್ರಪಂಚದಲ್ಲೇ ಇಲ್ಲ. ಒಂದುವೇಳೆ ನಮ್ಮ ಗುಣಗಳೂ, ಕಾಠ್ಯಗಳೂ ಹೇಯವಾಗಿದ್ದರೂ ಅವು ಗಳನ್ನು ಆತನು ತನ್ನ ಮನಸ್ಸಿಗೆ ತಂದುಕೊಳ್ಳದೆ, ನಮಗೆ ಸಕಾಲಗ ಳಲ್ಲಿ ಬುದ್ದಿ ವಾದಗಳನ್ನು ಹೇಳಿ, ಸತ್ಕಾರಗಳನ್ನೇ ಮಾಡಿ ತೊಂದರೆ ಯಿಂದ ಕಾಪಾಡುವನು. ಸ್ನೇಹವೆಂಬ ತೋಟಕ್ಕೆ ರಕ್ಷಣೋಪಾಯ ವೆಂ ಕೃಪ್ತಿಯನ್ನೆಸಗಿ, ಪ್ರಯೋಜನಗಳೆಂಬ ಹಣ್ಣುಗಳನ್ನು ಬೆಳೆ ಯದೆ ಪಾಳುಮಾಡುವುದು ಸರಿಯಲ್ಲ.

  • ವಸಂತಮಿತ್ರ, ಸ್ನೇಹಿತನೆ, ಇನ್ನು ನನ್ನ ಹೆಂಡತಿಯೊಡನೆ ನಮ್ಮ ಊರಿಗೆ ಹೋಗೋಣ ಬಾ. (ಎಂದು ಹೊರಡುವರು.)