ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿ ತ ವಿ ಜ ಯ ನಾ ಟ ಕ ೦ , v೫ (ಯೋಚಿಸಿ) ಮಂತ್ರಿಯೆ, ನಿನ್ನೆ ರಾತ್ರಿ ಒಬ್ಬ ಕನ್ನಿಕೆಯು ಈ ಸ್ಮಶಾನ ದಲ್ಲಿರುವ ಕಾಳಿ ದೇವಾಲಯಕ್ಕೆ ಬಂದಿದ್ದಳಲ್ಲ. ಆಕೆಯಾರು, ಹೇಳಬಲ್ಲೆಯಾ ? ಕುಶಲಮತಿ, ಅಕೆಯೇ ನಮ್ಮ ಮಹಾರಾಜನ ಮಗಳು. ವಸಂತಮಿತ್ರ. ಇನ್ನು ನೀನು ಹೋಗಿ ವಿವಾಹಕ್ಕೆ ತಕ್ಕ ಕಾರಗಳನ್ನು ಸಿದ್ಧಗೊಳಿಸಬಹುದು; ನಾನು ಖಂಡಿತವಾಗಿಯೂ ವಿವಾ ಹಕ್ಕೆ ಒಪ್ಪಿರುವೆನು. ನಡೆ. (ಮಂತ್ರಿಯು ಹೊಗುವನು. ಸಭೆಯ ಕೆಡೆಗೆ ತಿರುಗಿ) ಆಹಾ ! ಎಂತಹ ಮೋಸವಾಗುತ್ತಿತ್ತು, ಸ್ಮಶಾನದಲ್ಲಿ ಕಂಡ ಸ್ತ್ರೀಯನ್ನು ಆ ನೀಕಳಾದ ಆನಂದವತಿಯೆಂದು ಛಾಂತಿ ವಟ್ಟೆನಲ್ಲ! ಆಕೆಯ ಭಕ್ತಿಗೆ ಕಾಳಿಯು ಪ್ರತ್ಯಕ್ಷಳಾಗಿರುವುದರಿಂದ ಆ ಯುವತಿಯ ದೆ.ಗ್ಯಳೆ ಸರಿ. ಈಗ ಒಂದು ಯೋಜನೆಯು ಮನಸ್ಸಿಗೆ ಹೊಳಿಯಿತು. ಏನೆಂದರೆ, ಆಕೆಯನ್ನು ನಾನು ಮದುವೆ ಮಾಡಿಕೊಂಡು, ಆಕೆಯಿಂದಲೇ ನನ್ನ ಮಿತ್ರನನ್ನು ಬದುಕಿ ಸಿಕೊಳ್ಳಬಹುದಲ್ಲವೆ ! ದೇವರು ನನಗೆ ಈಗ ಸರಿಯಾದ ಮಾರ್ಗವನ್ನು ತೋರಿಸಿದನು. ಜಾಗ್ರತೆಯಾಗಿ ಹೋಗಿ ವಿವಾಹ ವನ್ನು ಮಾಡಿಕೊಳ್ಳುವೆನು. (ಹೋಗುವನು.) (ಕರ್ಪೂರಮಂಜರಿ, ಕಲವಾಣಿಯರ ಪ್ರವೇಶ.) ಕರ್ಪೂರಮಂಜರಿ, ಸಖಿ, ಎಲ್ಲಿಗೆ ಹೋಗುತ್ತಿರುವೆ ? ಕಲವಾಣಿ. ನಮ್ಮ ಮಹಾರಾಜನ ಮಗಳನ್ನು ಒಬ್ಬ ಯುತಿಗೆ ಕೊಟ್ಟು ವಿವಾಹವಾಗುವುದೆಂದು ಕೇಳಿದೆ. ಈ ಲೋಕಾರಕರ ವಾದ ಮಹೋತ್ಸವವನ್ನು ನೋಡಲು ಹೋಗುತ್ತಿರುವೆನು. ಕರ್ಪೂರಮಂಜರಿ, ಯತಿಗೆ ವಿವಾಹವೆಂದರೇನು? ರಾಜನಮಗೆ ಳನ್ನು ಯತಿಗೆ ಕೊಡುವುದಂದರೇನು ; ನಿಜವಾಗಿಯೂ ಹೇಳು. ಕಲರ್ವಾಣಿ, ಪೂರ್ವದಲ್ಲಿ ಯತಿಯಾದ ಅರ್ಜುನನಿಗೆ, ರಾಜಕನ್ಯ ಯಾದ ಸುಭದ್ರೆಯನ್ನು ಕೊಟ್ಟು ವಿವಾಹವಾಗಲಿಲ್ಲವೆ ? ಹಾಗೆಯೇ ಈಗಲೂ ಎಂದು ತಿಳಿ, ಭ ಶಿ'