ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೯೯
ಪರಂಪರೆಯ ಮಿತಿ - ಪರಿವರ್ತನೆಯ ಬಯಕೆ

ಹೀಗೆ ಶೈಲಿ ಮತ್ತು ಚೌಕಟ್ಟುಗಳನ್ನು ಒಪ್ಪಿಕೊಂಡರೂ, ಕಲೆ ಯೆಂಬುದು ಕೇವಲ ತಾಂತ್ರಿಕತೆಯ ಜಡರೂಪವಾಗಬೇಕಿಲ್ಲ. ಸೃಷ್ಟಿಶೀಲ ನಾದವನಿಗೆ ಈ ಶೈಲಿ, ಚೌಕಟ್ಟುಗಳಲ್ಲಿರುವ ಅದ್ಭುತ ಸಾಧ್ಯತೆಗಳು ಗೋಚರಿಸುವ ಹಾಗೆಯೇ ಅದರ ಮಿತಿಗಳೂ ಕಾಣಿಸುತ್ತವೆ. ಪ್ರತಿಭೆಗೂ, ಸಿದ್ಧವಾದ ಚೌಕಟ್ಟಿಗೂ ಒಂದು ಘರ್ಷಣೆ ನಡೆಯುತ್ತ ಇರುತ್ತದೆ. ಈ ಘರ್ಷಣೆಯ, ಜಗ್ಗಾಟದ ಫಲವು ಮೂಡಿಬರುವ ಹೊಸ ಸೃಷ್ಟಿ ಸಫಲವೆ, ಅಲ್ಲವೆ ಎಂಬ ಪ್ರಶ್ನೆಯನ್ನು ನಾವು ವಿವೇಕದಿಂದ, ಹೊಣೆಗಾರಿಕೆಯಿಂದ ಇದಿರಿಸಬೇಕಾಗುತ್ತದೆ.

ಶೈಲಿ ಪರಂಪರೆಗಳು ಕಲೆಯ ವ್ಯಾಕರಣಗಳು. ಅವನ್ನು ಬೇಕಾದಂತೆ ತಿರುಚಿ ಹೊಸತನ್ನು ಸಾಧಿಸುತ್ತೇನೆಂದರೆ, ಬರಿಯ ಬದಲಾವಣೆ ಎನಿಸೀತೆ ಹೊರತು, ಕಲಾತ್ಮಕವಾದ ನಾವೀನ್ಯವಾಗಲಾರದು. ಶೈಲಿಯೇ ಕಲೆ ಯಲ್ಲ, ವ್ಯಾಕರಣ ಪ್ರಾವೀಣ್ಯವೇ ಕಾವ್ಯರಚನೆಯಲ್ಲಿ ನಿಜ. ಆದರೆ, ಯಾವುದೇ ಹೊಸತನವು, ಒಟ್ಟಾರೆ ಕಲಾಸಂದರ್ಭಕ್ಕೆ, ಚೌಕಟ್ಟಿಗೆ ಹೊಂದಿಕೆಯಾಗಿದೆಯೆ? ಅದು, ಪರಂಪರೆಯ ವ್ಯವಸ್ಥಿತವಾದ ಪರಿಜ್ಞಾನ ದಿಂದ ಪುಷ್ಟಿ ಪಡೆದು ಬಂದಿದೆಯೆ? ಎಂಬ ಪ್ರಶ್ನೆ ಯಕ್ಷಗಾನದಂತಹ ಕಲೆಯ ಸಂದರ್ಭದಲ್ಲಿ ತುಂಬ ಮುಖ್ಯವಾದ ಪ್ರಶ್ನೆ. ಹೊಸ ಪ್ರಯೋಗವು ಗಂಭೀರವಾದ ಚಿಂತನದಿಂದ ಕೂಡಿ, ಕಲೆಯ ಸಾಧ್ಯತೆ ಯನ್ನು ವಿಸ್ತರಿಸಿದೆಯೆ? ಅನವಶ್ಯಕವಾದ, ಕಲಾಪೂರ್ಣವಲ್ಲದ ಅಂಶ ಗಳನ್ನು ಮೀರಿ ನಿಲ್ಲಲು ಯತ್ನಿಸಿ, ಯಶಸ್ವಿಯಾಗಿದೆಯೆ? ಎಂಬುದೂ ಅಷ್ಟೇ ಮುಖ್ಯ. ಬದಲಾವಣೆಯನ್ನೆಲ್ಲ ನವೀನ ಪ್ರಯೋಗವೆಂದು ಸಮರ್ಥಿಸುವುದು ಸುಲಭದ ದಾರಿ. ಪ್ರಾಯೋಗಿಕ ರಂಗ (experi- mental theatre) ಸೃಷ್ಟಿ ತುಂಬ ಕಠಿಣವಾದ ಸಂಗತಿ.

ಮುಗ್ಧ ಪರಂಪರಾಪ್ರಿಯತೆ ಮತ್ತು ಸುಲಭರಾಜಕ ನಾವೀನ್ಯ- ಇವೆರಡೂ ಅಪಾಯಕಾರಿಗಳೇ. ಪರಂಪರೆಯ ಬಗ್ಗೆ ಸಮಗ್ರ ದೃಷ್ಟಿ ಇಲ್ಲದಿದ್ದಾಗ- ಪರಂಪರೆ ಎಂಬ ಸಭಾಕಲಾಶ ಕುಣಿತ, ಪರಂಪರೆ ಎಂದರೆ ಬಣ್ಣದ ವೇಷಗಳು, ಪರಂಪರೆ ಎಂದರೆ ಇಂತಿಂತಹ ಭಾಗವತರ ಶೈಲಿ- ಎಂಬ ಪಾರ್ಶ್ವಿಕ ನೋಟಗಳು ಬರುತ್ತವೆ. ಹಾಗೆಯೇ ವಿವೇಕಶೂನ್ಯ ವಾದ, ನಾವೀನ್ಯವನ್ನು ಆಕ್ಷೇಪಿಸಿದಾಗ "ಹೊಸತು ಬೇಡವೆಂದರೆ ಹೇಗೆ?