ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೧೦೫

ಸಮಗ್ರ ರಂಗಭೂಮಿಯಾಗಿ, ಪಾರಂಪರಿಕವಾಗಿರುವ ಯಕ್ಷಗಾನವನ್ನು ನೋಡುವಾಗ, ಇದನ್ನು ಮೀರಿದ ಅವಾಸ್ತವ ದೃಷ್ಟಿ ನಮಗೆ ಬೇಕು. ಯಕ್ಷಗಾನ ಕತೆಯಾಗಲಿ, ಅದರ ರಂಗಭಾಷೆಯಾಗಲಿ ಅವಾಸ್ತವ ತಂತ್ರದ ಮೂಲಕ, ಅದರದ್ದಾದ ಭಾಷೆಯಲ್ಲಿ ಮಾತಾಡುತ್ತದೆ. ಇದರಿಂದಾಗಿ ನಮ್ಮಲ್ಲಿ ವಾಸ್ತವ-ಅವಾಸ್ತವಗಳ ಒಂದು ಸತತ ಸಂವಾದ ನಡೆಯುತ್ತದೆ. ಯಕ್ಷಗಾನದಲ್ಲಾದರೂ ವಾಸ್ತವ ದೃಷ್ಟಿಯಿಂದ ನೋಡ ಬಹುದಾದ ಮುಖಗಳೂ ಇವೆ. ಅಲ್ಲದೆ, ಅವಾಸ್ತವ ರಮ್ಯ ಚೌಕಟ್ಟಿ ನೊಳಗೆಯೇ ತರ್ಕವೂ, ನೈಜವೂ ಕೆಲಸಮಾಡಬೇಕಾಗುತ್ತದೆ. ಆದರೆ ತೀರ ಮೂಗೆತ್ತರಿಸಿ, ಕಾವ್ಯಮೀಮಾಂಸೆಯ ಸೂಕ್ಷ್ಮಗಳನ್ನು ಭಾಷಾಶುದ್ಧಿ ಯಂತಹ ವಿಷಯಗಳನ್ನು ಯಾವಾಗಲೂ ನಾವು ಇಲ್ಲಿ ಅಪೇಕ್ಷಿಸ ಬೇಕಿಲ್ಲ. ಆರೆಂಟು ಗಂಟೆಗಳ ಕಾಲ ಜನರನ್ನು ರಂಜಿಸಬೇಕಾದ, ಆಡು ಮಾತಿನ ಅಂಶಗಳನ್ನೂ ಒಳಗೊಂಡಿರುವ ಪ್ರದರ್ಶನಕ್ಕೆ ಶಿಕ್ಷಿತ ದೃಷ್ಟಿಯ (elitist) ವಿಮರ್ಶೆಯನ್ನು ಎಲ್ಲೆಂದರಲ್ಲಿ ನಾವು ಅನ್ವಯಿಸಬೇಕಿಲ್ಲ.

ಚಾರಕನು ದೇವೇಂದ್ರನೊಡನೆ ಹಾಸ್ಯ ಮಾಡಬಹುದೆ? ಕೃಷ್ಣ- ರುಕ್ಮಿಣಿಯರ ಸಂವಾದದಲ್ಲಿ ಮಕರಂದನೆಂಬ ಹಾಸ್ಯ ಪಾತ್ರವು ಬಾಯಿ ಹಾಕಿ ವಿನೋದ ಮಾಡಬಹುದೆ? ಎಂಬಿತ್ಯಾದಿ ಪ್ರಶ್ನೆಗಳು, ನಮ್ಮ ದೃಷ್ಟಿದೋಷದಿಂದ ಬರುವಂತಹವು. ಇಲ್ಲಿ ಹಾಸ್ಯಪಾತ್ರವೂ ಸೇರಿ, ಸಾಧಿತವಾಗುವ ನಾಟಕಕ್ರಿಯೆ, ರಂಜನೆಗಳು, ಅವು ಕಟ್ಟಿಕೊಡುವ ಅರ್ಥವು ಮುಖ್ಯ. ರಾಮನ ಪಾತ್ರವು ಗಂಭೀರವಾಗಿ ಮಿತಭಾಷಿ ಯಾಗಿರಬೇಕು ಎಂಬ ಅಭಿಪ್ರಾಯವನ್ನು ಒಪ್ಪಿಯೂ, ಯಕ್ಷಗಾನದ ರಾಮನು ಎಷ್ಟು ಗಂಭೀರ, ಎಷ್ಟು ಮಿತಭಾಷಿ ಎಂಬ ಹೊಸ ಹದವನ್ನು ನಾವು ಕಂಡುಕೊಳ್ಳಬೇಕು.

ಆಶಯ ವಿಮರ್ಶೆ

ಯಕ್ಷಗಾನವು ಜಾತಿವ್ಯವಸ್ಥೆ, ಶಾಪ ವರಗಳ ಕತೆ, ಪೌರಾಣಿಕ ಮೌಲ್ಯಗಳನ್ನು ಒಪ್ಪಿಕೊಳ್ಳುವುದರಿಂದ ಅದು 'ಪ್ರತಿಗಾಮಿ' ಎಂಬ ನಿರ್ಣಯವೂ ಹೀಗೆಯೇ. ಕತೆಯಲ್ಲಿ ಹೆಚ್ಚು ಲೌಕಿಕವಾದ, ಜೀವನಪರ ವಾದ ಆಶಯ, ವ್ಯಾಖ್ಯಾನ ಇರಬೇಕಾದುದು ನಿಜ, ಅಪೇಕ್ಷಣೀಯ. ಆದರೆ, ಕತೆಯ ಎಲ್ಲ ವಿವರವನ್ನೂ, ಪ್ರೇಕ್ಷಕ ಗಂಭೀರವಾಗಿ ತೆಗೆದು ಕೊಳ್ಳುತ್ತಾನೆ ಎಂಬುದೂ ನಿಜವಲ್ಲ. ಪುರಾಣದ ಅವಾಸ್ತವವನ್ನು