ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ | ೩
(ಈ ಪರಾಕು ಹೇಳುವಿಕೆ ರಂಗದಿಂದ ಲುಪ್ತವಾಗಿ ಹಲವು ದಶಕಗಳು
ಸಂದಿವೆ)
ಇದೇ ರೀತಿಯಲ್ಲಿ ಹರಕೆ ಬಯಲಾಟದಲ್ಲಿ ಆಟವು ಮುಗಿದು,
ಆಡಿಸುವ ಹರಕೆದಾರನು ಮೇಳಕ್ಕೆ ವೀಳ್ಯವನ್ನು ಕೊಡುವ ಸಂದರ್ಭದಲ್ಲಿ
ಆಟ ಆಡಿಸಿದವನನ್ನು ಮತ್ತು ದೇವರನ್ನು ಹೊಗಳುವ ಮಾತುಗಳಿವೆ.
ಇವು ತಿಟ್ಟುಗಳಿಗನುಗುಣವಾಗಿ, ತುಸು ವ್ಯತ್ಯಾಸಗಳನ್ನೂ ಹೊಂದಿವೆ.
(ಒಂದು ಉದಾ : ಅರ್ತಿಗಾರರು, ಮೋಜುಗಾರರು, ಕುಶಾಲುಗಾರರು-
ಮಹಾರಾಜಶ್ರೀ... ಅವರು ಕೊಟ್ಟ ಪಟ್ಟೆಸೀರೆ ಸಹಿತ ವೀಳ್ಯ...
ಶಿವಾರ್ಪಣಮಸ್ತು).
ಇನ್ನು, ಸಭಾಲಕ್ಷಣ ಅಥವಾ ಪೂರ್ವರಂಗವೆಂಬ ವಿಭಾಗದಲ್ಲಿ
ಬರುವ ಮಾತುಗಳ ವಿಚಾರ, ಈ ವಿಭಾಗದ ಪ್ರದರ್ಶನದಲ್ಲಿ ಭಾಗವತ,
ಕೋಡಂಗಿಗಳು, ಶಿವಪಾರ್ವತಿ ವೇಷಗಳು ಮತ್ತು ಕಟ್ಟುಹಾಸ್ಯಗಳೆಂಬ
'ಪ್ರರೋಚನ' ಪಾತ್ರಗಳು ಮಾತುಗಳನ್ನಾಡುತ್ತಾರೆ. ಇವು ಯಕ್ಷಗಾನದ
ಪರಿಭಾಷೆಯ 'ಅರ್ಥಗಾರಿಕೆಗಳಲ್ಲ. ಅಂದರೆ, ಕಥಾಪ್ರದರ್ಶನದಲ್ಲಿ
ಬರುವ; ಪಠ್ಯ-ಅರ್ಥ ಸಂಬಂಧವು ಇಲ್ಲಿಲ್ಲ. ಈ ಪೂರ್ವರಂಗದ
ಮಾತುಗಳ ಪೈಕಿ ಕೋಡಂಗಿ-ಭಾಗವತರ ಸಂವಾದ, ಶಿವಪಾರ್ವತಿ-
ಕೋಡಂಗಿ ಸಂವಾದಗಳಲ್ಲಿ ಬರುವ ಮಾತುಗಳು ನಿಶ್ಚಿತವಾದುವು. ಅವು
ಕಟ್ಟುಕಟ್ಟಲೆಯಂತೆ, ಪ್ರತಿದಿನವೂ ಒಂದೇ ಬಗೆಯಾಗಿರುತ್ತವೆ. ಒಂದು
ಉದಾ :
.
ಕೋಡಂಗಿ : ಹರಹರ ಶಂಭೋ ಪರಾಕು ನಂಜಿನ ಮಾಸೋಮಿ ಗುಡ್ಡೆ
ಬೆಟ್ಟದ ಈಸರ ದೇವರ ಪಾದಕ್ಕೆ ನಮಸ್ತೆ ಹಸ್ತೇ ಹಸ್ತ.
ಈಶ್ವರ : ಸುಖಿಯಾಗಿರು ಕಂಡ್ಯಾ ಭಕ್ತನೇ
ಕೋಡಂಗಿ : ಬಂದವರೆಲ್ಲಾ ಹೇಳೋದು ಹಾಂಗೇ, ನಮ್ಮ ಕರ್ಮ
ಧೂಳಿಲಿ ಹೊರಳಾಡೋದು ಹೀಂಗೇ, ಹರಕು ಬಟ್ಟೆ ಬೂದಿಪುರ್ಸರ
ಆಶೀರ್ವಾದ... ನೀವು ಯಾರು...?
ಈಶ್ವರ : ಎಲಾ ಭಕ್ತನೇ, ಕೈಲಾಸ ಪರ್ವತಕ್ಕೆ ಯಾರೂಂತ ಕೇಳಿದ್ದೀ?
ಕೋಡಂಗಿ : ಸರಾಸರಿ, ಪತ್ತೆಯಾಯ್ತು- ಬೂದಿಗುಡ್ಡೆ ಪರ್‌ಮೇಸರಾಂತ
ಕೇಳಿದ್ದೆ... ಇತ್ಯಾದಿ.
ಪುಟ:ವಾಗರ್ಥ.pdf/೧೭
ಈ ಪುಟವನ್ನು ಪ್ರಕಟಿಸಲಾಗಿದೆ