ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೫

ಬರುತ್ತವೆ. (ಅಂದರೆ- ಸಂಗೀತಗಾರನೆಂಬ ಪೂರ್ವರಂಗದ ಹಾಡು ಗಾರನೂ, ಭಾಗವತನೆಂಬ ಕಥಾಭಾಗದ ಹಾಡುಗಾರನೂ ಸೇರಿ ಇಲ್ಲಿ ಭಾಗವತನೆಂದಿದೆ), ದೇವತಾಸ್ತುತಿ, ಕೋಡಂಗಿಯ ಸಂವಾದ, ಕಥಾನುಸಾರ, ಪಾತ್ರ ಪರಿಚಯ, ಪಾತ್ರಗಳ ಜೊತೆಗೆ ಆಡುವ ಮಾತು. ಹೀಗೆ ವಿವಿಧ ಹಂತಗಳಲ್ಲಿ ಭಾಗವತನು ಮಾತಾಡುತ್ತಾನೆ. ಇಲ್ಲೆಲ್ಲ ಭಾಗವತನು ಪ್ರದರ್ಶನದ ನಿರ್ದೇಶಕನಾಗಿ, ಚಾಲಕನಾಗಿ, ಪಾತ್ರದ ಅಂತರಂಗವಾಗಿ, ಬುದ್ಧಿಯಾಗಿ ಮತ್ತು ಕಲ್ಪಿತ ಪಾತ್ರಗಳಾಗಿ ವ್ಯವಹರಿಸುತ್ತಾನೆ.

ಪೂರ್ವರಂಗಕ್ಕೆ ಸಂಬಂಧಿಸಿದ ಭಾಗವತನ ಮಾತುಗಳ ಕುರಿತು ಈಗಾಗಲೇ ಹೇಳಿದೆ. ಕಥಾಪ್ರದರ್ಶನದಲ್ಲಿ ಭಾಗವತನು ಆಡುವ ಮಾತುಗಳು ಪೂರ್ವರಂಗದಂತೆ, ಆಚರಣಾತ್ಮಕವಲ್ಲ.

'ಕಥಾನುಸಾರ'ವೆಂದರೆ ಪ್ರಾಯಃ ಪೂರ್ವಕಥಾಸಾರ. ಆ ಆ ದಿನ ಆಡುವ ಪ್ರಸಂಗಕ್ಕೆ ಮೊದಲಿನ ಕತೆಯನ್ನು ಭಾಗವತನು ಸಂಕ್ಷೇಪವಾಗಿ ವಚನರೂಪದಲ್ಲಿ, ಅಂದರೆ ತುಸು ರಾಗವಾಗಿ ಹೇಳಿ, ಪ್ರಸಂಗದ ಮೊದಲ ದೃಶ್ಯವನ್ನು ಎತ್ತಿಕೊಳ್ಳುವುದು ಹಿಂದಿನ ಪದ್ಧತಿ, ಉದಾ: ಕರ್ಣಪರ್ವ ಪ್ರಸಂಗದ ಆಟವಾದರೆ, ಪಾಂಡವ ಕೌರವರ ಜನನದಿಂದ ತೊಡಗಿ, ದ್ರೋಣಪರ್ವದ ವರೆಗಿನ ಕತೆಯನ್ನು ಹೇಳುತ್ತಿದ್ದರು. ಅದು ಕಥೆಗೆ ಸಂಬಂಧಿಸಿರುತ್ತದೆ. ಇದಕ್ಕೆ ಪಾರಿಭಾಷಿಕವಾಗಿ ಕಥಾನುಸಾರವೆಂದು ಹೆಸರು. ಇದು ಈಗ ಬಳಕೆಯಲ್ಲಿ ಇಲ್ಲ. ಮೊದಲಾಗಿ ಕಥಾನುಸಾರ: ಆ ಬಳಿಕ ಪ್ರತಿಯೊಂದು ಪಾತ್ರವನ್ನು ಪರಿಚಯಿಸುವ ಕೆಲಸ ಅವನ ಮಾತುಗಳ ಮೂಲಕ ಆಗಬೇಕು. ಪಾತ್ರದ ಪ್ರವೇಶ ನೃತ್ಯವಾಗಿ, ಪಾತ್ರವು ಪೀಠವನ್ನೇರಿದೊಡನೆ ಭಾಗವತನು-

ಭಾಗವತ: ರಾಜರಾಜಾಧೀಶ, ರಾಜನಕ್ಷತ್ರಚಂದ್ರೋದಯ.
ಪಾತ್ರ: ಬಲ್ಲಿರೇನಯ್ಯಾ
ಭಾಗವತ: ಇರುವಂಥಾ ಸ್ಥಳ?
ಪಾತ್ರ: ..... ಪುರಕ್ಕೆ ಯಾರಂತ ಕೇಳಿದ್ದೀರಿ.
ಭಾಗವತ: ..... ಮಹಾರಾಜರಂತ ಕೇಳಿದ್ದೇವೆ.
ಪಾತ್ರ: ನಾವೇ ಸರಿ.