ಈ ಪುಟವನ್ನು ಪ್ರಕಟಿಸಲಾಗಿದೆ

೬ / ವಾಗರ್ಥ

ಭಾಗವತ: ಬಂದಂತಹ ಕಾರ್ಯ | ಒಡ್ಡೋಲವಾಗಲು ಕಾರಣ?
ಪಾತ್ರ: ಅನೇಕವಿದೆ. ಕೇಳಿರಿ । ಆ ವಿಚಾರ ಕೇಳಿರಿ.

ಇದೇ ರೀತಿ, ರಾಕ್ಷಸ ಪಾತ್ರವಾದರೆ, 'ಭಳಿರೇ ರಾಕ್ಷಸ ಕುಲೋದ್ಧಾರಕ' ಎಂದು ಆರಂಭಿಸಿ ಪರಿಚಯದ ಮಾತು ಇರುತ್ತದೆ. ಸ್ವಂತ ಒಡ್ಡೋಲಗವುಳ್ಳ ಪಾತ್ರಗಳಿಗೆ ಮಾತ್ರ ಪರಿಚಯ ಕ್ರಮವಿರು ತ್ತದೆ. ಒಂದು ಪಾತ್ರ ರಂಗದಲ್ಲಿದ್ದಾಗ ಬರುವ ಇನ್ನೊಂದು ಪಾತ್ರ ವಾದರೆ, ಪರಿಚಯ ಕ್ರಮವಿಲ್ಲ. (ಉದಾ: ಧರ್ಮರಾಜನ ಒಡ್ಡೋಲಗಕ್ಕೆ ಪ್ರವೇಶಿಸುವ ಅಭಿಮನ್ಯು, ರಾಜನು ಕರೆದಾಗ ಬರುವ ಮಂತ್ರಿ, ಸೇನಾಪತಿ ಇತ್ಯಾದಿ). ಉದ್ಭವವಾಗುವ ಪಾತ್ರಗಳಿಗೂ ಇಲ್ಲ. (ಉದಾ: ಭಸ್ಮಾಸುರ, ವೀರಭದ್ರ). ಸಾಮಾನ್ಯವಾಗಿ ಸ್ತ್ರೀಪಾತ್ರಗಳಿಗೂ ಇಲ್ಲ. ಹೆಣ್ಣು ಬಣ್ಣದ ವೇಷ (ರಾಕ್ಷಸ ಸ್ತ್ರೀ)ದೊಂದಿಗೆ ಮಾತಾಡುವಾಗ, ಹಾಸ್ಯ ಮಿಶ್ರಿತವಾಗಿ ಪರಿಚಯಿಸುವ ಕ್ರಮವಿದೆ.

ಭಾಗವತನ ಮಾತಿನ ಮುಂದಿನ ಹಂತವು ಪಾತ್ರದ ಪೀಠಿಕೆಯೊಡನೆ ಆಡುವ ಮಾತುಗಳದ್ದು. ಇಲ್ಲಿ ಪಾತ್ರದ ಮಾತುಗಳಿಗೆ ಹೂಂಗುಡುವಿಕೆ, ಸೂಚನೆ, ಉದ್ಗಾರ, ಪ್ರತಿಕ್ರಿಯೆ ಮೊದಲಾದ ಅಂಶಗಳಿರುತ್ತವೆ. ಪಾತ್ರವು ಪೀಠಿಕೆ (ಪ್ರವೇಶ ಸ್ವಗತ) ಹೇಳುವಾಗ ಹೂಂಗುಡುವುದು ಭಾಗವತನ ಕರ್ತವ್ಯವೆಂದು ಸಂಪ್ರದಾಯ. ಅಲ್ಲದೆ, ಮಧ್ಯೆ ಪ್ರಶ್ನೆ, ಪ್ರತಿಕ್ರಿಯೆಗಳ ಮೂಲಕ ಮಾತಿಗೆ ಚಾಲನೆ ಕೊಡಬೇಕು. 'ಓಹೋ', 'ಆಹಾ', ಅಲ್ಲವೆ?' ಮೊದಲಾದುವು ಹೂಂಕಾರದ ರೂಪಗಳೇ. 'ಮತ್ತೆ?', 'ಮುಂದೇನು ಮಾಡಿದಿರಿ?', 'ಯಾಕೆ ಹಾಗಾಯ್ತು?' ಮುಂತಾದುವು ಪ್ರಚೋದನೆ, ಸೂಚನೆಗಳು. ಹಿಂದಿನ ಸೂಚನೆಯನ್ನೆ ನೆನಪಿಸುವುದು, ಪ್ರಶ್ನೆ ಕೇಳು ವುದು ಇದರ ಮುಂದಿನ ಹಂತ. ಉದಾ: ಕೌರವರ ಪಾತ್ರದ ಪೀಠಿಕೆ ಯಲ್ಲಿ ಭಾಗವತನು- 'ನಿಮ್ಮನ್ನು ರಾಜ್ಯಲೋಭಿ ಅನ್ನುತ್ತಾರಲ್ಲ?', 'ನಿಮ್ಮನ್ನು ಪಾಂಡವರು ಅಪಮಾನಿಸಿದರಲ್ಲವೆ?' ಇತ್ಯಾದಿ. ಇವು ಪೀಠಿಕೆಯ ವಿಸ್ತರಣಕ್ಕೆ ಪ್ರಚೋದಕ.

ಪಾತ್ರಧಾರಿಯ ಮಾತಿನ ದಿಕ್ಕನ್ನು ತಿರುಗಿಸಲು ಅಥವಾ ಗಾತ್ರವನ್ನು ಕಡಿತಗೊಳಿಸಲು ಕೂಡ ಭಾಗವತನು ಮಾತಾಡುವುದುಂಟು. ಹೇಳ ಬೇಕಾದ ಮುಖ್ಯ ವಿಷಯವನ್ನು ಪಾತ್ರವು ಹೇಳಿಲ್ಲವೆಂದು ಅನಿಸಿದರೆ ಆಗ ಭಾಗವತನು ಅದನ್ನು ನೆನಪಿಸಬಹುದು. ಉದಾ: ಕೃಷ್ಣಸಂಧಾನದ ಧರ್ಮರಾಜನು ಪಾಂಡವರ ಪೂರ್ವಕಥೆಯನ್ನು ಹೇಳುತ್ತ ಉತ್ತರಾ