ಈ ಪುಟವನ್ನು ಪ್ರಕಟಿಸಲಾಗಿದೆ

೧೦ / ವಾಗರ್ಥ

ಪೂರ್ವಕಥಾನಿರೂಪಣೆ, ಪಾತ್ರದ ಆ ಆ ಸನ್ನಿವೇಶದ ಮನಃಸ್ಥಿತಿಯ ಚಿತ್ರಣ, ಪಾತ್ರದ ನಿಲುಮೆಯ ಪ್ರಕಟನೆ- ಈ ಉದ್ದೇಶಗಳನ್ನು ಹೊಂದಿರುತ್ತದೆ. ಉದಾ: ಭೀಷ್ಮಪರ್ವದ ಭೀಷ್ಮನ ಪೀಠಿಕೆಯಲ್ಲಿ ಭೀಷ್ಮನ ಬದುಕಿನ ಹಿನ್ನೆಲೆ, ಕುರುಪಾಂಡವರ ವಿವಾದ, ಅದರಿಂದ ಭೀಷ್ಮನಿಗಾದ ಸಂಕಟ, ಅನಿವಾರ್ಯವೆನಿಸಿರುವ ಯುದ್ಧದ ಕುರಿತ ಕಳವಳ; ತಾನೇನು ಮಾಡಬೇಕೆಂಬ ದ್ವಂದ್ವ- ಇವುಗಳೆಲ್ಲ ಬರುತ್ತವೆ. ವಿಶೇಷತಃ ಪ್ರತಿನಾಯಕ ಜಾತಿಯ ಪಾತ್ರಗಳ ಪೀಠಿಕೆಯಲ್ಲಿ (ಕೌರವ, ರಾವಣ) ಸ್ವಸಮರ್ಥನೆ, ಪರಪಕ್ಷದೂಷಣೆಗಳಿಗೂ ಪ್ರಾಧಾನ್ಯ ಒದಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪೀಠಿಕೆಯೆಂಬುದು ಪಾತ್ರ ಸಮರ್ಥನೆ ಎಂಬಂತೆ ಅಭಿವ್ಯಕ್ತವಾಗುತ್ತ ಬಂದಿದೆ. ಇದರ ಔಚಿತ್ಯ, ಅನೌಚಿತ್ಯಗಳ ಪ್ರಶ್ನೆ ಇಲ್ಲಿ ಪ್ರಸ್ತುತವಲ್ಲ. ಪೀಠಿಕೆಯ ನಿರ್ವಹಣೆಗೆ ಭಾಗವತನ ಹುಂಕಾರ, ಎಡೆಮಾತು, ಸಮ್ಮತಿ, ಪ್ರಶ್ನೆಗಳು ಪೋಷಣೆ ನೀಡುತ್ತವೆ. ಪೀಠಿಕೆ ಯೆಂಬುದು ಹೆಚ್ಚು ಸ್ವತಂತ್ರವಾದುದು. ಅದಕ್ಕೆ ಬೇರೆ ಪಾತ್ರಧಾರಿಗಳ ಅವಲಂಬನವಿಲ್ಲ.

ಪೀಠಿಕೆಯಲ್ಲದ ಸ್ವಗತಗಳಿಗೆ, ಸ್ವಂತಮಾತು ಅಥವಾ ತನ್ನಷ್ಟಕ್ಕೆ ಮಾತಾಡುವುದು ಎನ್ನುತ್ತಾರೆ. ಇದರಲ್ಲಿ, ಸಂಭಾಷಣೆಯ ಮಧ್ಯೆ ತಾನೇ ಮಾತಾಡುವ 'ಸ್ವಗತ'ಗಳು (ಉದಾ: 'ಈಗ ಒಂದು ಉಪಾಯ ಮಾಡು ತ್ತೇನೆ'), ಒಬ್ಬರು ಕೇಳುತ್ತಿದ್ದಾರೆ, ಇನ್ನೊಬ್ಬರಿಗೆ ಕೇಳುತ್ತಿಲ್ಲ ಎನ್ನುವ ರೀತಿಯ ಮಾತು (ಉದಾ: ಒಬ್ಬನನ್ನು ಬದಿಗೆ ಕರೆದು ಹೇಳುವ ಮಾತು - ನಾಟ್ಯಶಾಸ್ತ್ರದ ಭಾಷೆಯಲ್ಲಿ ಜನಾಂತಿಕ) ಮೊದಲಾದುವುಗಳು ಬರುತ್ತವೆ. ಹಾಸ್ಯಗಾರನಾದರೆ, ಸಭೆಯನ್ನು ಉದ್ದೇಶಿಸಿ ಮಾತಾಡುವ ಕ್ರಮವೂ ಉಂಟು. ಇವೆಲ್ಲವನ್ನು ಕಥೆಯ ಮತ್ತು ನಾಟಕಕ್ರಿಯೆಯ ಪರಿಣಾಮಕಾರಿ ನಿರ್ವಹಣೆಗೆ ಸರಿಯಾಗಿ ಬಳಸಿಕೊಳ್ಳುವುದು ಕಲಾವಿದನಿಗೆ ಸೇರಿದ ವಿಷಯ.

ಸಂವಾದವೆಂಬುದು ಎರಡು ರೀತಿಗಳಲ್ಲಿ ಬರುತ್ತದೆ. ಒಂದು- ಪ್ರಸಂಗದ ಪದ್ಯಗಳಲ್ಲಿ ರೂಪಿತವಾಗಿರುವ ಸಂವಾದ. ಉದಾ: ಪಂಚವಟಿ ಪ್ರಸಂಗದ ಕಾಂಚನಮೃಗ ಸನ್ನಿವೇಶದ ಸೀತಾರಾಮ ಸಂವಾದ. ಸಾಂಪ್ರದಾಯಿಕ ಕ್ರಮದಂತೆ, ಆ ಆ ಪಾತ್ರದ ಪದ್ಯಕ್ಕೆ ಆ ಆ ಪಾತ್ರವು ಅರ್ಥ ಹೇಳುವುದು ಪದ್ಧತಿ. ಒಬ್ಬನ ಪದ್ಯದ ಅರ್ಥದ ಮಧ್ಯೆ ಇನ್ನೊಬ್ಬನು ಮಾತಾಡುವ ಕ್ರಮವಿರಲಿಲ್ಲ. ಪದ್ಯದ ಅರ್ಥವು ಕೊನೆ