ಈ ಪುಟವನ್ನು ಪ್ರಕಟಿಸಲಾಗಿದೆ

೧೬ / ವಾಗರ್ಥ
ಪಾತ್ರಧಾರಿಯು ತನ್ನ ಮಾತುಗಳಿಗೂ, ನೃತ್ಯ (ಆಟದಲ್ಲಿ)ಕ್ಕೂ ಸಾಂಗತ್ಯವನ್ನು ಸಾಧಿಸಬೇಕು. ಇದು ಎರಡು ರೀತಿಯಲ್ಲಿ- ನೃತ್ಯ ಸಂದರ್ಭದಲ್ಲಿ ತೋರಿಸಿದ ಅಭಿನಯಕ್ಕೂ, ಅನಂತರ ಆಡುವ ಮಾತಿಗೂ ಸಂಬಂಧವಿರಬೇಕು, ವೈರುಧ್ಯವಿರಬಾರದು. ಮತ್ತು ನೃತ್ಯ- ಅಭಿನಯಗಳಿಗೆ ಹೊಂದದ ಶಬ್ದಗಳನ್ನು ಮಾತಿನಲ್ಲಿ ವಿಸ್ತರಿಸಬೇಕು. ರಂಗದಲ್ಲಿ, ಪದ್ಯದ ಹಿಮ್ಮೇಳದ, ನೃತ್ಯ ಚಲನೆಗಳ ವೇಗ, ರಭಸ ಗಳಿಗೂ ಮಾತಿನ ವೇಗ ರಭಸಗಳಿಗೂ ಸಂಬಂಧವಿರಬೇಕು.

೧೦

ಅರ್ಥಗಾರಿಕೆಯ ಸ್ವರ, ಶೈಲಿ, ರೀತಿ, ವಿಷಯ ಮೊದಲಾದುವು ಪಾತ್ರಾನುಗುಣವಾಗಿರಬೇಕೆಂಬುದು ಸ್ಪಷ್ಟ, ರಾಕ್ಷಸ ಪಾತ್ರದ ಮಾತುಗಳ ಸ್ವರ, ತೂಕ, ರಾಗಗಳೂ, ವಿಷಯವೂ ರಾಕ್ಷಸ ವೇಷಾನುಗುಣವಾಗಿರ ಬೇಕು. ಧರ್ಮರಾಜ, ದಶರಥಾದಿ ಪಾತ್ರಗಳ ಮಾತು ಸೌಮ್ಯ ವಾಗಿಯೂ, ಅಭಿಮನ್ಯುವಿನದು ಚುರುಕಾಗಿ, ಆವೇಶಪೂರ್ಣವಾಗಿಯೂ, ಕಿರಾತನದು ತುಸು ಅಸಂಸ್ಕೃತವಾಗಿಯೂ ಇರಬೇಕು. ಒಂದೇ ಬಗೆಯ ಪಾತ್ರಗಳಲ್ಲೂ ಕೂಡ ವೇಷದ ಸ್ಥಾನಾನುಗುಣವಾಗಿ ಮಾತು ಚಲನೆ, ನೃತ್ಯಗಳಲ್ಲಿ ವ್ಯತ್ಯಾಸವಿರಬೇಕೆಂಬುದು ಪದ್ಧತಿ. ಉದಾ: ಕರ್ಣಾರ್ಜುನರು, ಕರ್ಣನು ಯಕ್ಷಗಾನದ ಎರಡನೆಯ ವೇಷ/ಇದಿರು. ವೇಷ (ಮುಖ್ಯಪಾತ್ರ. ಪ್ರತಿನಾಯಕ ಜಾತಿ). ಅರ್ಜುನನು ಪೀಠಿಕೆ ವೇಷ (ನಾಯಕ ಪಾತ್ರ ಜಾತಿ), ಅರ್ಜುನನ ಕುಣಿತ, ಮಾತುಗಳಿಗಿಂತ ಕರ್ಣನವು ತೂಕವಾಗಿ ಪ್ರಖರವಾಗಿರಬೇಕೆಂಬುದು ಕ್ರಮ.

ಅರ್ಥಗಾರಿಕೆಯ ವೇಗ, ಓಘಗಳಿಗೆ ಸಂಬಂಧಿಸಿ ನಿರ್ಣಾಯಕ ಅಂಶಗಳೆಂದರೆ 'ಕಾಲ' ಮತ್ತು ಸನ್ನಿವೇಶದ ರಸಭಾವಗಳು. ಇಡಿಯ ರಾತ್ರಿಯ ಆಟವನ್ನು ನಾಲ್ಕು 'ಕಾಲ'ಗಳಾಗಿ ವಿಂಗಡಿಸುವುದು ಸಂಪ್ರದಾಯ, ಒಂದೊಂದು ಕಾಲವೂ ಸುಮಾರು, ಎರಡು, ಎರಡೂವರೆ ಗಂಟೆಗಳಷ್ಟು. ಒಂದನೆಯ ಕಾಲದಿಂದ ನಾಲ್ಕನೆಯ ಕಾಲಕ್ಕೆ ಪ್ರದರ್ಶನವು ಸಾಗುವಾಗ, ಉತ್ತರೋತ್ತರವಾಗಿ ವೇಗವು ಹೆಚ್ಚಾಗ ಬೇಕು. ಇದರಂತೆ, ಕತೆಯ ನಡೆ, ಹಾಡುಗಾರಿಕೆ, ಮಾತುಗಳೆಲ್ಲವೂ ವೇಗೋತ್ಕರ್ಷ ಹೊಂದಬೇಕು. ಇನ್ನು ನಾಲ್ಕು ಕಾಲಗಳಲ್ಲಿ ಯಾವುದೇ