ಈ ಪುಟವನ್ನು ಪ್ರಕಟಿಸಲಾಗಿದೆ

೨೦ / ವಾಗರ್ಥ

ಗಳಿದ್ದರೆ ಆಗ ಕಲಾವಿದಾಧಾರಿತ ಅಸಮತೋಲ ಉಂಟಾಗುತ್ತದೆ. ಉದಾ: 'ಕಾರ್ತವೀರ್ಯಾರ್ಜುನ' ಪ್ರಸಂಗವು ಕಾರ್ತವೀರ್ಯಪ್ರಧಾನವಾಗದೆ, ಜಮದಗ್ನಿ ಪ್ರಧಾನವಾಗುವುದು.

ಆ ಆಶುಭಾಷಣದ ಅರ್ಥಗಾರಿಕೆಯಲ್ಲಿ, ಆ ಪಾತ್ರಧಾರಿಯು ತನ್ನ ಮಾತುಗಳ ಕುರಿತು ಸ್ಪಷ್ಟಿಕರಣ, ವಿವರಣೆಗಳನ್ನು ನೀಡಬೇಕಾಗುತ್ತದೆ. ವಿಶೇಷತಃ ವಾದ, ಪ್ರಶೋತ್ತರಗಳಲ್ಲಿ. ಆಗ ಒಂದು ರೀತಿಯಲ್ಲಿ ನಾಟಕ ನಿಯಮದ ಕಟ್ಟುನಿಟ್ಟು ಸಡಿಲಾಗಿ, ಪಾತ್ರಧಾರಿ ಪಾತ್ರದ ಹೊರಗೆ ಹೋದಂತಾಗುವುದುಂಟು. ಉದಾ: “ನಾನು ಹೇಳಿದ್ದು ನಿನಗೆ ಅರ್ಥ ವಾಗಲಿಲ್ಲ. ನಾನು ಹಾಗೆ ಹೇಳಿದ್ದಲ್ಲ, ಹೀಗೆ ಹೇಳಿದ್ದು' ಎಂದು ಮುಂತಾಗಿ ವಿವರಿಸುವುದು. ಅಥವಾ, ಪದ್ಯದ ಒಂದು ಶಬ್ದವನ್ನು ಉದ್ಧರಿಸಿ ವಿವರಿಸುವುದು. ಉದಾ: ಕಡುಗಲಿ ಖರನಲ್ಲಿ ಹೋದ"- 'ಕಡುಗಲಿ-ನೋಡು- ಅದಕ್ಕೇ ಮಹತ್ವವಿರುವುದು'.

ಪುನರುಕ್ತಿಯೆಂಬುದೂ ಇದೇ ವರ್ಗಕ್ಕೆ ಸೇರುವ ಅಂಶ. ಇಲ್ಲಿ ನಾಟಕವು ಏಕಕರ್ತೃಕವಲ್ಲದುದರಿಂದ, ಹಿಂದಣ ಕತೆ ಅಥವಾ ನಡೆಯು ತಿರುವ ಘಟನೆಯ ಕುರಿತು ವಿವಿಧ ಪಾತ್ರಧಾರಿಗಳಿಂದ ಪುನರಾವರ್ತನೆ, ಪುನರುಕ್ತಿಗಳು ಇಲ್ಲಿ ಅನಿವಾರ, ಅಷ್ಟೇ ಅಲ್ಲ, ಇಲ್ಲಿ ಪುನರುಕ್ತಿಯೂ ಅಭಿವ್ಯಕ್ತಿಯ, ಜನಶಿಕ್ಷಣದ ಒಂದು ಅಂಗ. ಆ ಮೂಲಕ ಕತೆಯ ವಿವಿಧ ಮಗ್ಗುಲುಗಳು, ಪಾತ್ರಾನುಗುಣವಾದ ನಿಲುಮೆಗಳು ಮತ್ತು ಪಾತ್ರಾ ಧಾರಿತ ಅಭಿಮತ-ವ್ಯಾಖ್ಯೆಗಳೂ ಪ್ರೋತೃವಿಗೆ ದೊರಕುತ್ತವೆ.

೧೪

ಯಕ್ಷಗಾನ ಪ್ರಬಂಧದಲ್ಲಿ - ಪ್ರಸಂಗ, ಪದ್ಯ, ಶಬ್ದ ಎಂದು ಮೂರು ಹಂತಗಳಷ್ಟೆ, ಪ್ರಸಂಗವೆಂಬುದೇ, ಪ್ರದರ್ಶನದ ಆಧಾರ, ಕಥೆ. ಅದರ ಪದ್ಯಗಳನ್ನು ಆಧರಿಸಿ, ಹಿಂದು ಮುಂದಿನ ಸನ್ನಿವೇಶಗಳಿಗೆ ಸರಿಹೊಂದು ವಂತೆ, ಮಾತಾಡುತ್ತ ಪಾತ್ರಧಾರಿಯು ನಾಟಕಸೃಷ್ಟಿಯನ್ನು ಮಾಡಬೇಕು. ಪದ್ಯದ ಒಟ್ಟು ಭಾವಕ್ಕೆ ವಿರುದ್ಧವಾದುದನ್ನು ಹೇಳಕೂಡದು. ಪದ್ಯ ದಲ್ಲಿ ಇಲ್ಲದುದನ್ನು ಹೇಳಬಹುದು. ಅದು ಪದ್ಯಕ್ಕೆ ಅವಿರೋಧ ವಾಗಿರಬೇಕು. ಪದ್ಯದ ಶಬ್ದಗಳಿಗೆ ಸೃಷ್ಟಿಶೀಲ ವಿವರಣೆ ನೀಡಬಹುದು. ಕಲ್ಪನೆ, ಅಧ್ಯಯನಗಳನ್ನು ಸೇರಿಸಬಹುದು. ಅವುಗಳು ಆ ಪದ್ಯ, ಶಬ್ದ ಗಳಿಂದ ಮೂಡಿಬಂದಂತೆ ಇರಬೇಕು. ಪ್ರಸಂಗದ ಜೊತೆಗೆ ಕಲಾವಿದನ