ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೨೧

ಮನಸ್ಸು ನಡೆಸಿದ ಸಂವಾದ, ಸಂಘರ್ಷಗಳ ಫಲವೆ, ಅರ್ಥಗಾರಿಕೆಯ ವಿನ್ಯಾಸ.

ಅರ್ಥಗಾರಿಕೆಯು ಕಲಾವಿದರ 'ಕೆಲಸ'ದ ಮೂಲಕ, ಅವರ ಅಧ್ಯಯನ, ಸಂಸ್ಕಾರ, ಲೋಕಗ್ರಹಿಕೆಗಳ ಮೂಲಕ ಮಾಡುವುದು ಒಂದು ಪ್ರತಿಕಾವ್ಯ ಸೃಷ್ಟಿಯನ್ನು. ಈ ಕೃತಿಯಲ್ಲಿ ಪುರಾಣದ ಸೃಜನಶೀಲ ಪುನಃಸೃಷ್ಟಿಯೊಂದಿಗೆ, ಪುರಾಣಭಂಜನವೂ ಆಗುತ್ತಿರುತ್ತದೆ. (ಉದಾ: ಕೌರವ, ಜರಾಸಂಧಾದಿಗಳಿಂದ ಕೃಷ್ಣಾವತಾರ ವಿಮರ್ಶೆ, ರಾವಣನಿಂದ ರಾಮನ ವಿಮರ್ಶೆ).

೧೫

ಪಾತ್ರಧಾರಿಯ ಮಾತುಗಾರಿಕೆ ಒಂದು ಅನ್ಯಾಶ್ರಿತ ಕಲಾಕೃತಿಯಾಗಿದೆ. ಸಹಪಾತ್ರಧಾರಿಯು ನೀಡುವ ಪ್ರತಿಕ್ರಿಯೆ, ಮಾಡುವ ಪ್ರಶ್ನೆಗಳಿಂದ ಅರ್ಥಕ್ಕೆ ಹೊಸ ಹೊಸ ತಿರುವುಗಳು ಬರುತ್ತವೆ. ಓರ್ವನು ಕಲ್ಪಿಸದೆ ಇರುವ ರೀತಿಯಲ್ಲಿ ಅರ್ಥನಾಟಕವು ಬೆಳೆಯುತ್ತ ಹೋಗಿ, ಪಾತ್ರಧಾರಿ ನಿಜವಾಗಿ ಬೆರಗಾಗುತ್ತಾನೆ. 'ಇವತ್ತು ಬೇರೇ ರೀತಿಯಾಯಿತು. ಹೊಸ ವಿಷಯಗಳು ಬಂದುವು' ಎಂದು ಪಾತ್ರಧಾರಿಗಳು, ಪ್ರೇಕ್ಷಕರು, ಹೇಳಿ ಕೊಳ್ಳುವುದು ಯಕ್ಷಗಾನ ವಲಯದಲ್ಲಿ ಸಾಮಾನ್ಯ.

ಅದೇ ರೀತಿಯಲ್ಲಿ ಪಾತ್ರಧಾರಿಗೆ ಪ್ರೇಕ್ಷಕನು ನೀಡುವ ಪ್ರೇರಣೆ ಗಳೂ ಗಮನಾರ್ಹ. ಪ್ರೇಕ್ಷಕ ವರ್ಗದ ಗುಣಮಟ್ಟ, ಗಾತ್ರ, ಸಾಮಾಜಿಕ ಸ್ವರೂಪ, ಆಸಕ್ತಿಗಳು ಕಲಾವಿದನ ಮಾತುಗಳನ್ನು ರೂಪಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಒಂದು ನಗೆ, ಒಂದು ಚಪ್ಪಾಳೆ ಅಥವಾ ಒಂದು ನಿರುತ್ಸಾಹಕರ ಪ್ರತಿಕ್ರಿಯೆ- ರಂಗದ ಮೇಲಿನ ಸಂಭಾಷಣೆಯ ಸ್ವರೂಪವನ್ನೆ ಬದಲಿಸಬಲ್ಲುದು.

೧೬

ಅರ್ಥಗಾರಿಕೆಯಲ್ಲಿ 'ಅನುಭವ ಹೇಳುವಿಕೆ' (ಸಂಗ್ರಹ, ಪಾಂಡಿತ್ಯ, ಪೌರಾಣಿಕ, ವಿವರಗಳ, ಪೋಣಿಕೆ) ಎಂಬುದೊಂದು ಮುಖ್ಯ ವಿಷಯ ಇದು: ಅರ್ಥಧಾರಿಯ ಯೋಗ್ಯತೆಯ ನಿಕಷ ಮತ್ತು ಸಂಸ್ಕೃತಿ ಶಿಕ್ಷಣದ ವಾಹಕವೂ ಹೌದು. ಇದರಲ್ಲಿ ವಂಶಾವಳಿ, ಅಸ್ತ್ರಶಸ್ತ್ರಗಳ ಜಾತಿಗಳು, ಶಾಸ್ತ್ರವಿವರ, ಪೌರಾಣಿಕ ಕಾಲದ ಆಚಾರವಿಚಾರ, ಆಧ್ಯಾತ್ಮಿಕ,