೨೨ / ವಾಗರ್ಥ
ದಾರ್ಶನಿಕ ಸಂಗತಿಗಳೆಲ್ಲ ಸೇರುತ್ತವೆ. ಇದು ನಮ್ಮ ಪುರಾಣಗಳ,
ಪುರಾಣ ಪ್ರವಚನಗಳ ಪರಂಪರೆಯಿಂದ ಬಂದುದಾಗಿದೆ. ಪೀಠಿಕೆಗಳಲ್ಲಿ
ಉಪದೇಶ, ವರ್ಣನೆ, ಸಂವಾದಗಳಲ್ಲಿ ಈ 'ಅನುಭವ'ವೆಂಬ ಸಂಗ್ರಹ
ವನ್ನು ಬಳಸುವರು. (ಈಗ ಈ ಅನುಭವದ ಸ್ವರೂಪವು ಬದಲಾಗಿದೆ).
ಅದೇ ರೀತಿ ಶಬ್ದಗಳ ಆಟ, ವ್ಯಂಗ್ಯ, ದ್ವಂದ್ವಾರ್ಥ ಸೂಚನೆ;
ದೃಷ್ಟಾಂತ, ದೃಷ್ಟಾಂತಕತೆ, ಗಾದೆ, ಉದ್ಧರಣ, ಬದುಕಿನ ಸನ್ನಿವೇಶಗಳ
ಹೋಲಿಕೆ, ಶ್ಲೇಷೆಗಳ ಮೂಲಕ ಅರ್ಥಕ್ಕೆ ವಿಷಯವನ್ನು ತುಂಬಿಸಿ
ಸಂಪುಷ್ಟಗೊಳಿಸಲಾಗುತ್ತದೆ. ಇದನ್ನು 'ಸಾಹಿತ್ಯ ಹಾಕುವುದು' ಎಂದೂ
ಹೇಳುತ್ತಾರೆ. ಈ ಪ್ರಕ್ರಿಯೆಯ ಮೂಲಕ ಪಾತ್ರಧಾರಿ ಪದ್ಯಗಳ ಮೌನ
ವನ್ನು ತುಂಬಿಸುತ್ತಾನೆ. ಈ ಮೂಲಕ ಅರ್ಥವು ಪ್ರಸಂಗದ ಒಳಗಿದ್ದೆ,
ಹೊರಚಾಚಿಕೊಳ್ಳುತ್ತದೆ.
“ಪದ್ಯವೆಂಬ ಚಿಗುರು ಎಲೆಯಾಗಿ ವಿಸ್ತಾರಗೊಳ್ಳುವುದೇ ಅರ್ಥ"
(ಕೆ.ಎಂ. ರಾಘವ ನಂಬಿಯಾರ್) ಎಂಬ ಸೂತ್ರವಾಕ್ಯವು ಅರ್ಥಗಾರಿಕೆಯ
ಸ್ವರೂಪಕ್ಕೆ ಉತ್ತಮ ವ್ಯಾಖ್ಯಾನ.
(೨೨-೭-೧೯೯೭ರಂದು ಮಲ್ಲಾಡಿಹಳ್ಳಿಯಲ್ಲಿ ಜರಗಿದ “ಕಲೆ : ಅಭಿವ್ಯಕ್ತಿ ಮತ್ತು ತಂತ್ರ" ವಿಚಾರಗೋಷ್ಠಿಗಾಗಿ ಸಿದ್ಧಪಡಿಸಿದ ಪ್ರಬಂಧ, ಬೆಂಗಳೂರಿನ ಸಂಕುಲ' ಕಲಾಪತ್ರಿಕೆಯಲ್ಲಿ ಪ್ರಕಾಶಿತ.)