ಈ ಪುಟವನ್ನು ಪ್ರಕಟಿಸಲಾಗಿದೆ

ಅನುಬಂಧ

ಉಪನ್ಯಾಸದ ಕೊನೆಯಲ್ಲಿ ನಡೆದ
ಪ್ರಶೋತ್ತರ-ಚರ್ಚೆಯ ಸಾರಾಂಶ

• ರಾವಣನಂತಹ ಪಾತ್ರಗಳ ಮಾತುಗಳಲ್ಲಿ, ಜನಸಾಮಾನ್ಯರ ಅನಿಸಿಕೆಗಳನ್ನು ಒಡಮೂಡಿಸುವುದು ಅರ್ಥಧಾರಿಯ ವಾಕ್‌ಸ್ವಾತಂತ್ರದ ಸಾಕ್ಷಿಯನ್ನ ಬಹುದ?

-ಡಾ। ದೇವೇಂದ್ರಕುಮಾರ ಹಕಾರಿ

ಉ. : ಹೌದು. ಇದೇ ಈ ಕಲೆಯ ಹೆಚ್ಚುಗಾರಿಕೆ, ಕಲಾವಿದನು ಜನ ಸಾಮಾನ್ಯರ ಮನಸ್ಸಿನ ಪ್ರತಿನಿಧಿಯಾಗಿರುವುದು ಕೂಡ ಇದಕ್ಕೆ ಕಾರಣ.

• ಪ್ರೇಕ್ಷಕರಿಂದ ಅಭಿಪ್ರಾಯ ಸಂಗ್ರಹ (feedback)ದಿಂದ ಅರ್ಥದಾರಿಯ ಸಂವಹನ ಕಲೆ ವರ್ಧಿಸುವ ಸಾಧ್ಯತೆಯುಂಟೆ?

-ಡಾ। ಹಕಾರಿ

ಉ. : ನಿಜ. ಇದು ಬಹಳ ಮುಖ್ಯ. ಜನರಿಂದ ಬರುವ ಮೌಖಿಕ ವಿಮರ್ಶೆ ಕಲಾವಿದನ ಸಂವಹನ, ಚಿತ್ರಣ, ಅಭಿವ್ಯಕ್ತಿ ಎಲ್ಲವನ್ನೂ ರೂಪಿಸಲು ಸಹಾಯಮಾಡುತ್ತದೆ. ಇದು ಅನೌಪಚಾರಿಕವಾಗಿ ಆಗುತ್ತಿದೆ. ಆದರೆ, ವ್ಯವಸ್ಥಿತವಾಗಿ ಸಾಕಷ್ಟು ಆಗಿಲ್ಲ. ಜನರ ಅಭಿಪ್ರಾಯಗಳು ಕಲಾವಿದರಿಗೆ ಸರಿಯಾಗಿ ತಲಪದಿರುವುದೂ, ಸಾಕಷ್ಟು ಪ್ರದರ್ಶನ ವಿಮರ್ಶೆ ಆಗದಿರುವುದೂ, ಈ ಕಲೆಯ ಹಲವು ಸಮಸ್ಯೆಗಳಿಗೆ ಕಾರಣ.

• ತಾಳಮದ್ದಳೆಯಲ್ಲಿ ಐತಿಹಾಸಿಕ, ಸಾಮಾಜಿಕ ಆಖ್ಯಾನಗಳು ಏಕೆ ಸೇರುತ್ತಿಲ್ಲ?
ಉ. : ಈ ಸಾಧ್ಯತೆ ಪರಿಶೀಲನಾರ್ಹ. ಹಳೆಯ ಪ್ರಸಂಗಗಳಲ್ಲೂ ಕೂಡ ಬಹುಪಾಲು, ಈ ರಂಗಕ್ಕೆ ಬಂದಿಲ್ಲ. ಕೆಲವೇ ಆಖ್ಯಾನಗಳು ಪುನರಾ ವರ್ತನೆಗೊಳ್ಳುತ್ತಿವೆ.

• ತಾಳಮದ್ದಳೆಯಲ್ಲಿ ಹಳೆಯ ಮೌಲ್ಯದ ಹೊಸ ಅರ್ಥೈಸುವಿಕೆ ಮಾಡು ವಂತೆ, ಒಂದು ಹೆಜ್ಜೆ ಮುಂದಿರಿಸಿ, ಹಳೆಯ ಮೌಲ್ಯಗಳನ್ನು ತಿರಸ್ಕರಿಸಲೂ ಸ್ವಾತಂತ್ರ್ಯವಿಲ್ಲವೆ?

-ಜಯರಾಮ ಹೆಗಡೆ

ಉ. : ಒಂದು ಪ್ರಮಾಣದಲ್ಲಿ ಇದು ಸಾಧ್ಯ. ಇದು ಈ ರಂಗದಲ್ಲಿ ಆಗುತ್ತಲೇ ಇದೆ. ಆದರೆ, ಇದಕ್ಕೆ ರಂಗಸಂಪ್ರದಾಯದ, ಕಥಾನಕದ ಮಿತಿಗಳೂ ಇವೆ.