ಈ ಪುಟವನ್ನು ಪ್ರಕಟಿಸಲಾಗಿದೆ

೫೬ / ವಾಗರ್ಥ

(ಒಂದು ಅರ್ಥದಲ್ಲಿ) ಮತ್ತು ಪೂರ್ಣ; ಎಲ್ಲ ಪಾಠಗಳೂ ಅಪೂರ್ಣ ಎಂದೂ ಹೇಳಬಹುದು. ಇಲ್ಲಿ ಗಮನಿಸಬೇಕಾದದ್ದು ಪ್ರದರ್ಶನದಲ್ಲಿ ಅಂದರೆ ತಾಳಮದ್ದಳೆಯೆಂಬ ನಾಟಕದ ನಿರ್ಮಾಣದಲ್ಲಿ ನಟನಿಗೆ ಇರುವ ಪ್ರಾಮುಖ್ಯ. ಅದು ಸಿದ್ಧಪಾಠದ ಪ್ರದರ್ಶನಗಳ ಪ್ರಕಾರಗಳಿಗೆ ಹೋಲಿಸಿದಾಗ- ಹೋಲಿಕೆಯೇ ಅಸಾಧ್ಯ ಎನಿಸುವಷ್ಟು ಅನನ್ಯವಾದದ್ದು.

ನಟನ ವ್ಯಕ್ತಿತ್ವಕ್ಕೂ, ಪಾತ್ರಕ್ಕೂ ಇರುವ ಸಂಬಂಧದ ಕುರಿತು ಮೂರು ಬಗೆಯ ಸಿದ್ಧಾಂತಗಳು ಪ್ರಸಿದ್ಧವಾಗಿವೆ. ಅಭಿನಯಕಾರನು ಪಾತ್ರದಲ್ಲಿ ತನ್ಮಯನಾಗಬೇಕು, ಪಾತ್ರದೊಂದಿಗೆ ಏಕೀಭವಿಸಬೇಕು, ತಾನೇ ಪಾತ್ರವಾಗಿ, ಪಾತ್ರದಲ್ಲಿ ಪರಕಾಯ ಪ್ರವೇಶವನ್ನು ಸಾಧಿಸಿ, ಪಾತ್ರದ ಅನುಭವವನ್ನು ತನ್ನದಾಗಿಸಿ ಅಭಿವ್ಯಕ್ತಿಸಬೇಕು ಎಂಬುದು ಪ್ರಸಿದ್ಧವಾದ ಒಂದು ಅಭಿಪ್ರಾಯ. ಇದು 'ತಲ್ಲೀನತಾ ಸಿದ್ಧಾಂತ' ಎನ್ನಬಹುದು. ಇದು ಸಾಂಪ್ರದಾಯಿಕ ಭಾರತೀಯ ನಾಟ್ಯಸಿದ್ಧಾಂತದ ಮುಖ್ಯ ವಿಚಾರಗಳಲ್ಲೊಂದು, ಪಾಶ್ಚಾತ್ಯರಲ್ಲೂ ಬಹುಕಾಲ ಸಿದ್ಧಾಂತವೇ ಮುಖ್ಯವಾಗಿತ್ತು. ವಿಖ್ಯಾತ ರಂಗತಜ್ಞ ಸ್ಟಾನಿಸ್ಲಾವಸ್ಕಿ. ಈ ಪ್ರಸ್ಥಾನದ ವಿಶಿಷ್ಟ ಪ್ರತಿಪಾದಕ. ಇದಕ್ಕೆ ಪ್ರತಿಕ್ರಿಯೆಯಾಗಿ- ತನ್ಮಯ ನಾಗುವುದು ನಿಜವಾದ ನಟನೆಯಲ್ಲ. ಪಾತ್ರದಿಂದ ದೂರವಾಗಿದ್ದು, ಪಾತ್ರಗಳನ್ನು ತನ್ನ ಕಣ್ಣುಗಳಿಂದ ಕಂಡು, ವಿಶ್ಲೇಷಿಸಿ, ಅರ್ಥೈಸಿ, ಅಭಿವ್ಯಕ್ತಿಸುವುದೇ ನಿಜವಾದ ನಟನೆ ಎಂಬುದೊಂದು ಅಭಿಪ್ರಾಯ: ಇದೇ 'ದೂರೀಕರಣ ಸಿದ್ಧಾಂತ'. ಬರ್ಟೋಲ್ಟ್ ಬ್ರೆಕ್ಟ್‌ನ ಬಹು ಪ್ರಭಾವೀ ಸಿದ್ಧಾಂತವಿದು. ಪಾತ್ರದೊಳಗಿದ್ದೂ ದೂರವನ್ನು ಸಾಧಿಸಬೇಕೆಂಬ ಅಭಿಮತ ಇದರಲ್ಲಿದೆ. ಪಾತ್ರದಿಂದ ದೂರದಲ್ಲಿದ್ದು, ತಾನು ಪಾತ್ರ ವಾಗದೆ, ಅದರ ವ್ಯಾಖ್ಯಾನಕಾರನಾಗಿ, ವಿಶ್ಲೇಷಕನಾಗಿ ಪಾತ್ರವನ್ನು ನೋಟಕನ ಮುಂದೆ ಬಿಚ್ಚಿಡುವುದು ಉತ್ತಮ ಅಭಿನಯವೆಂಬ ಇನ್ನೊಂದು ಅಭಿಪ್ರಾಯವಿದೆ. ಇದೇ ತಲ್ಲೀನತಾ, ಸಿದ್ಧಾಂತ- ದೂರೀಕರಣ ಸಿದ್ಧಾಂತ ಇವೆರಡರ ಮಧ್ಯದ 'ಅರೆ ಪ್ರತ್ಯೇಕತಾ ಸಿದ್ಧಾಂತ'. ಭಾರತದಲ್ಲಿ ಇದು ಶಂಕುಕನ ಚಿತ್ರತುರಗನ್ಯಾಯ. ಚಿತ್ರದ ಕುದುರೆ ಚಿತ್ರವೇ ಆದರೂ ಅದು ಕುದುರೆ ಹೌದು. ಹೀಗೆ ಚಿತ್ರದ ಮೂಲಕ ಕುದುರ ಎಂಬ ನಿರ್ವಾಹ. ಈ ಮೂರು ಸಿದ್ಧಾಂತಗಳನ್ನು