ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೫೭

ಆಧರಿಸಿ- ಹಲವು ಛಾಯೆಗಳು ಅಥವಾ ಸಮ್ಮಿಶ್ರ ಸಿದ್ದಾಂತಗಳನ್ನು ಕಲ್ಪಿಸಬಹುದು. ಈ ಮೂರು ಅಭಿಪ್ರಾಯಗಳು ಉತ್ತರೋತ್ತರವಾಗಿ, ಒಂದಕ್ಕೊಂದು ಪ್ರತಿಕ್ರಿಯೆಯಾಗಿ ಹುಟ್ಟಿ ಬೆಳೆದಿವೆ. ಆದರೆ, ಇವುಗಳಲ್ಲಿ ಯಾವುದೇ ಒಂದನ್ನು ಶ್ರೇಷ್ಠವೆಂದು ಅಂಗೀಕರಿಸುವಂತಿಲ್ಲ. ಅವುಗಳ ಔಚಿತ್ಯ, ಅನ್ವಯ ಮತ್ತು ಉಪಯುಕ್ತತೆಯು ಸಂದರ್ಭ ಮತ್ತು ಪ್ರಕಾರದ ಸ್ವರೂಪವನ್ನು ಹೊಂದಿಕೊಂಡಿದೆ. ತಾಳಮದ್ದಳೆಯ ಸ್ವರೂಪ ಸ್ವಭಾವಗಳನ್ನು ಗಮನಿಸಿದರ ತಲ್ಲೀನತಾ ಸಿದ್ಧಾಂತಕ್ಕಿಂತಲೂ, ದೂರೀಕರಣ ಸಿದ್ಧಾಂತವೂ ಅರೆಪ್ರತ್ಯೇಕತಾ ಸಿದ್ಧಾಂತವೂ ಅದಕ್ಕೆ ಹೆಚ್ಚು ಹೊಂದುವಂತೆ ಕಾಣುತ್ತದೆ.

ಭರತನ ನಾಟ್ಯಶಾಸ್ತ್ರದಲ್ಲಿ ಹೇಳಿದ ಭಾರತೀ, ಸಾತ್ವತೀ, ಕೈಶಿಕೀ, ಆರಭಟೀ ಎಂಬ ನಾಲ್ಕು ವೃತ್ತಿಗಳಲ್ಲಿ ಭಾರತೀ ವೃತ್ತಿಯ ವರ್ಣನೆಯು ತಾಳಮದ್ದಳೆಗೆ ನಿಕಟವಾಗಿದೆ. (ಗಂಡಸರೇ ಪಾತ್ರಧಾರಿಗಳು, ಭಾಷೆ ಪರಿಷ್ಕೃತ, ನಟರು ನಿಜರೂಪದಿಂದಲೆ ಭಾಗವಹಿಸುವುದು, ವೇಷವಿಲ್ಲ ಇತ್ಯಾದಿ). ಹಾಗೆಯೇ ನಾಟ್ಯಧರ್ಮಿ, ಲೋಕಧರ್ಮಿಗಳೆಂಬ ಎರಡು ಧರ್ಮಿಗಳಲ್ಲಿ - ಲೋಕಧರ್ಮಿಗೆ ಅನುಗುಣವಾಗಿದೆ. (ಸಹಜ, ಶುದ್ಧ, ಆಂಗಿಕ ಅಭಿನಯವಿಲ್ಲ, ವೇಷಭೂಷಣಗಳಿಲ್ಲ, ಇತ್ಯಾದಿ), ಹೀಗೆ ಭಾರತೀವೃತ್ತಿಯ 'ಲೋಕಧರ್ಮಿ'ಯಾದ ತಾಳಮದ್ದಳೆಯಲ್ಲಿ ಪ್ರೇಕ್ಷಕನಿ ಗಾಗಲಿ, ಪಾತ್ರಧಾರಿಗಳಿಗಾಗಲಿ 'ತಾದಾತ್ಮ್ಯ 'ವೆಂಬುದು ಸಂಭವವಲ್ಲ ಎಂಬುದನ್ನು ನಾವು ಗಮನದಲ್ಲಿರಿಸಬೇಕು. ಆದರೂ ತಾದಾತ್ಮ ವೆಂಬುದು ಮಿತವಾದ ಅರ್ಥದಲ್ಲಿ, ಅಭಿನಯದಲ್ಲಿ ಆವಶ್ಯಕ ತಾಳಮದ್ದಳೆಯಲ್ಲೂ ಅದಕ್ಕೆ ಸ್ಥಾನವುಂಟು.

ನಟನು ನಾಟಕಕ್ಕೆ ಸ್ವರ, ಶರೀರ, ಕಲ್ಪನೆಗಳಿಂದ ಜೀವ ತುಂಬು ತಾನೆ. ಈಯೆಲ್ಲ ಭಾಷೆಗಳನ್ನು ಸೇರಿಸಿ ಕೆಲಸಮಾಡುತ್ತಾನೆ. ಅರ್ಥದಾರಿ


ತನ್ಮಯತಾ ಸಿದ್ಧಾಂತವನ್ನು ಟೀಕಿಸುವವರು- ಹರಿಶ್ಚಂದ್ರನು ಹೆಂಡತಿ ಮಕ್ಕಳನ್ನು ಮಾರುವ ದೃಶ್ಯದಲ್ಲಿ ನಟನು ತನ್ಮಯನಾದರೆ, ಅವನ ಅಳುವನ್ನು ನಿಲ್ಲಿಸುವುದು ಹೇಗೆ ಎಂದು ಹೇಳುವುದುಂಟು. ಇದೂ ಅತಿರೇಕವೇ, ತನ್ಮಯತಾವಾದಿಗಳು ಪಾತ್ರದ ಭಾವವನ್ನು ನಟನು, ನಟನಾಗಿಯೇ ಆದಷ್ಟು ಹೆಚ್ಚು ಅಭಿನಯಿಸಬೇಕೆನ್ನುತ್ತಾರೆ ಹೊರತು, ನೈಜ ತನ್ಮಯತೆಯನ್ನು ಪ್ರತಿಪಾದಿಸುವುದಿಲ್ಲ
.