ಈ ಪುಟವನ್ನು ಪ್ರಕಟಿಸಲಾಗಿದೆ

೭೦ / ವಾಗರ್ಥ

(ಉದಾ : ದಿ| ಅಗರಿಯವರು, ದಿ| ಉಪ್ಪೂರು ಭಾಗವತರು, ಕಡತೋಕ ಭಾಗವತರು) ಪಾತ್ರದೊಂದಿಗೆ ತಾನೂ ಸಂವಾದಿಸಿ, ತಾನೂ ಅರ್ಥಗಾರಿಕೆಯ ಅಂಗವಾಗುವುದುಂಟು. ಹಿರಿಯ ಮದ್ದಳೆಗಾರರೂ (ಉದಾ : ದಿವಾಣ ಭೀಮ ಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ, ಹಿರಿಯಡಕ ಗೋಪಾಲ ರಾವ್) ಸಹ ಹೀಗೆ- ಪಾತ್ರದೊಂದಿಗೆ ಸ್ಪಂದಿಸುವುದುಂಟು. ಹಿಮ್ಮೇಳದಿಂದ ಬಂದ ಒಂದು ಪ್ರತಿಕ್ರಿಯೆ, ಒಂದು ಶಬ್ದ ಪಾತ್ರಧಾರಿಗೆ ಹೊಸ ಸ್ಫೂರ್ತಿ, ಹೊಸ ಕಲ್ಪನೆಗಳನ್ನು ನೀಡುತ್ತದೆ; ಅರ್ಥಗಾರಿಕೆ ಬೆಳೆಯುತ್ತದೆ.

ಒಡನಾಟದ ಅನುಭವದಿಂದ ಪಾತ್ರಧಾರಿ ಮತ್ತು ಹಿಮ್ಮೇಳದವರಿಗೆ ಒಬ್ಬರಿಗೊಬ್ಬರ ವಿಧಾನ, ಅರ್ಥಾತ್, ಮಾತಿನ 'ದಾರಿ' ಪರಿಚಿತ ವಿರುತ್ತದೆ. ಎತ್ತುಗಡೆ, ಸಂದರ್ಭಗಳು ಸರಿಯಾಗಿ ತಿಳಿಯುತ್ತವೆ. ಇದರಿಂದಾಗಿ ಭಾಗವತ-ಪಾತ್ರಧಾರಿಗಳಲ್ಲಿ ಹೊಂದಾಣಿಕೆ ಏರ್ಪಟ್ಟು, ಪ್ರದರ್ಶನಕ್ಕೆ ಶೋಭೆ ಬರುತ್ತದೆ.

ಲಿಖಿತ ಪ್ರಸಂಗ ಕಾವ್ಯದ ಎಲ್ಲ ಪದ್ಯಗಳನ್ನು ಆಟಕ್ಕಾಗಲಿ, ಕೂಟಕ್ಕಾಗಲಿ ಹಾಡುವುದು ವಿರಳ, ಆರಿಸುವಿಕೆ ಅರ್ಥಾತ್ ಪ್ರಸಂಗ ಸಂಪಾದನೆ (editing) ಇದ್ದೇ ಇರುತ್ತದೆ. ಇದು ಪೂರ್ವಭಾವಿಯಾಗಿ ನಡೆಯುವುದುಂಟು. ಅನುಭವೀ ಕಲಾವಿದರಾದರೆ, ರಂಗದಲ್ಲೆ ಜರಗು ವುದೂ ಉಂಟು. ಇದೇ ಸಾಂಪ್ರದಾಯಿಕ ಕ್ರಮ. ಪಾತ್ರಧಾರಿಗೆ ಭಾಗವತನೂ, ಭಾಗವತನಿಗೆ ಪಾತ್ರಧಾರಿಗಳೂ ಹೊಂದಿಕೊಂಡು ಹೋಗುತ್ತಾರೆ. ಅರ್ಥ ಹೇಳಿರುವ ಪದ್ಯಗಳನ್ನು ಭಾಗವತ 'ಹಾರಿಸಿ' ಬಿಡುವುದೂ ಉಂಟು. ಪರಸ್ಪರ ಅರಿವು ಇದ್ದಾಗ ಇದೇನೂ ಸಮಸ್ಯೆ ಯಾಗುವುದಿಲ್ಲ. ಕೆಲವರು ಭಾಗವತರು ಹೆಚ್ಚು ಪದ್ಯಗಳನ್ನು ಆಯ್ದು ಕೊಳ್ಳುತ್ತಾರೆ. (ಉದಾ : ಅಗರಿ ಶ್ರೀನಿವಾಸ ಭಾಗವತರು) ಅದಕ್ಕೆ ಪಾತ್ರಧಾರಿ ಹೊಂದಿಕೊಂಡು ಹೋಗಬೇಕು. ಇದು ಪ್ರದರ್ಶನದ ಸ್ವರೂಪವನ್ನು ನಿರ್ಧರಿಸುತ್ತದೆ; ಬದಲಾಯಿಸುತ್ತದೆ. ಭಾಗವತನು ಪದ್ಯವನ್ನು ಹಾಡಿದರೆ, ಅದಕ್ಕೆ ಪಾತ್ರಧಾರಿ ಅರ್ಥ ಹೇಳಲೇಬೇಕು. ಇದು ರಂಗದ ರೂಢಿ, ಒಂದು ಉದಾಹರಣೆ : ಕೃಷ್ಣ ಸಂಧಾನದಲ್ಲಿ ಕೃಷ್ಣನು ಕೌರವನ ಸಿಂಹಾಸನ ಉರುಳಿಸುವ ದೃಶ್ಯ. ಇದು ಬೇಡ ಎಂದು ಅರ್ಥದಾರಿ ಎಣಿಸಿಕೊಂಡಿರುತ್ತ, ಭಾಗವತನು ಅವನ ಅಭ್ಯಾಸದಂತೆ ಅದನ್ನು ಎತ್ತಿಕೊಂಡು ಹಾಡುತ್ತಾನೆ ಎಂದಿಟ್ಟುಕೊಳ್ಳೋಣ. ಆಗ