ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೬೯

ಕೆಡಬಹುದು. ಶೇಣಿ-ಸಾಮಗರು ಸ್ಪರ್ಧಿಗಳಾಗಿದ್ದವರು ೧೯೭೦ರ ಬಳಿಕ ತೀರ ಹೊಂದಿಕೆಯಾಗಿ ನಿರ್ವಹಿಸಿದುದರಿಂದ, ಅವರ ಜೋಡಿ ತನ್ನ ಆಕರ್ಷಣೆಯನ್ನು ಕಳಕೊಂಡಿದ್ದು, ಈ ರಂಗವನ್ನು ಬಲ್ಲವರಿಗೆ ತಿಳಿದ ವಿಚಾರವಾಗಿದೆ.

ಕಲಾವಿದರಿಬ್ಬರಲ್ಲಿರುವ ವಯಸ್ಸಿನ ಅಂತರ, ಕಲಾರಂಗದಲ್ಲಿ ಅವರ ಸ್ಥಾನಗಳು, ಸಾಮಾಜಿಕ ಸ್ಥಾನಮಾನಗಳ, ಸಂಬಂಧ- ಇವು ಕೂಡ ಪ್ರದರ್ಶನ ಪಾಠದ ಮೇಲೆ ಪರಿಣಾಮ ಬೀರುತ್ತವೆ. ತೀರ ಪ್ರಸಿದ್ಧ, ಪ್ರತಿಷ್ಠಿತ, ಹಿರಿಯ ಕಲಾವಿದನ ಮುಂದೆ ಕಿರಿಯ ಕಲಾವಿದನು ಪಾತ್ರ ಯಾವುದೇ ಇರಲಿ, ಗೌರವ, ದಾಕ್ಷಿಣ್ಯ, ಭಯಗಳಿಂದ ಮಾತಾಡುವುದು ಸಹಜ. - ಹಿರಿಯರು ಕಿರಿಯರನ್ನು ಪ್ರೋತ್ಸಾಹಕ ದೃಷ್ಟಿಯಿಂದ ಮಾತಾಡಿಸುವುದೂ ಉಂಟು. ಕೆಲವೊಮ್ಮೆ ತನ್ನ ಹಿರಿತನ, ಅನುಭವ ಗಳನ್ನು ಬಳಸಿ ಹೊಸಬನಿಗೆ, ಕಿರಿಯನಿಗೆ ತೊಂದರೆಕೊಡುವ ಸಂದರ್ಭ ಗಳು ಕಂಡುಬರುತ್ತವೆ. ಅಪೂರ್ವವಾಗಿ ಪಾತ್ರವಹಿಸಲು ಬಂದವನು ಅಥವಾ ಅನ್ಯಥಾ ಪ್ರತಿಷ್ಠಿತನಾಗಿದ್ದು, ಅತಿಥಿ ಕಲಾವಿದನಾಗಿ ಬಂದವನು, ಇಂತಹವರ ಜತೆ ಉಳಿದವರು ಮುಕ್ತವಾಗಿ (free style) ಸಂವಾದಿಸದೆ, ಎಚ್ಚರದಿಂದ ಹೊಂದಿಕೊಂಡು ವ್ಯವಹರಿಸುವುದರಿಂದ ಪ್ರದರ್ಶನಕ್ಕೆ ಅದು ಬೇರೆ ರೂಪ ನೀಡುತ್ತದೆ. ಅಂತೆಯೇ ಪ್ರಮುಖ ಕಲಾವಿದನೊಬ್ಬನು ಅಮುಖ್ಯವಾದ ಅಥವಾ ಚಾರಕನಂತಹ ಪಾತ್ರ ವಹಿಸಿದಾಗ, ಇದಿರಾಳಿ ಕಲಾವಿದನಿಗೆ ಅದು ವಿಚಿತ್ರವಾದ ಮುಜುಗರ ಉಂಟುಮಾಡುತ್ತದೆ. ಪ್ರೇಕ್ಷಕನಿಗೂ ಕೂಡ ಇದು ವಿಲಕ್ಷಣವೆನಿಸ ಬಹುದು. ಪಾತ್ರಕ್ಕೂ, ಪಾತ್ರಧಾರಿಯ ವಯಸ್ಸು, ಸ್ವರ ಮೊದಲಾದವು ಗಳಿಗೂ ಇರುವ, ಇರಬೇಕಾದ ಸಂಬಂಧದ ಕುರಿತು ಕಲಾವಿದರೊಳಗೂ, ಪ್ರೇಕ್ಷಕರಲ್ಲೂ ಕೆಲವು ಅಭಿಪ್ರಾಯಗಳೂ, ನಿರೀಕ್ಷೆಗಳೂ ಇರುತ್ತವೆ. ಇದನ್ನು ತೀರ ಭಂಗಿಸಿದರೆ, ಏನೊ ವಿಸಂವಾದವುಂಟಾದಂತಾಗುತ್ತದೆ.

ಹಿಮ್ಮೇಳವು ಪ್ರದರ್ಶನಕ್ಕೆ ಬೇಕಾದ ಪಠ್ಯ, ಸಂಗೀತಗಳನ್ನು ನೀಡುವುದರಿಂದ, ಅದು ತಾಂತ್ರಿಕವಾಗಿ ಪ್ರದರ್ಶನದ ಮುಖ್ಯ ಅಂಗ. ಅದು ಪ್ರದರ್ಶನದ ಲಯವಾಹಕ, ಭಾವವಾಹಕ ಮತ್ತು ನಿರ್ದೇಶಕ ಸ್ಥಾನಗಳಲ್ಲಿರುತ್ತದೆ- ಸ್ಥೂಲವಾಗಿ, ಆದುದರಿಂದ, ಪಾತ್ರಧಾರಿ ಮತ್ತು ಹಿಮ್ಮೇಳದ ಕಲಾವಿದರೊಳಗಿನ ಸಂಬಂಧವು ಪ್ರದರ್ಶನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಹಿರಿಯ ಭಾಗವತರು