ಈ ಪುಟವನ್ನು ಪ್ರಕಟಿಸಲಾಗಿದೆ

೭೨ / ವಾಗರ್ಥ

ಬದಲಾಯಿಸಬಹುದು. ನಾನು ಹೊಂದಿಕೊಳ್ಳಲೇ ಬೇಕು. ಶೇಣಿಯವರು ಇಂತಹ ಸಂದರ್ಭಗಳಲ್ಲಿ 'ಅದೆಲ್ಲ ಬೇಡ' ಎಂದು ನೇರವಾಗಿ ಹೇಳುವು ದುಂಟು), ಹೀಗೆ ಕಲಾವಿದರು ಪರಸ್ಪರ ನಿರ್ದೇಶನ ಮಾಡುತ್ತಿರುತ್ತಾರೆ.

ಅರ್ಥದಾರಿಯ ವ್ಯಕ್ತಿಸ್ವಭಾವವು ಇತರ ಅರ್ಥದಾರಿಗಳ ಮೇಲೆ, ಪ್ರೇಕ್ಷಕರ ಮೇಲೆ ಪರಿಣಾಮ ಮಾಡಿ, ಅಷ್ಟು ಮಟ್ಟಿಗೆ ಕಥೆ, ಪಾತ್ರ, ರಂಗಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಭಾಗವತ, ಮದ್ದಳೆಗಾರ, ಸಹ ಅರ್ಥಧಾರಿಯಿಂದ ಪ್ರಭಾವಿತವಾಗಿ ಪರಿಣಾಮ ಗೊಳ್ಳುತ್ತಿರುತ್ತದೆ.

ಕೆಲವು ಅರ್ಥದಾರಿಗಳು ಭಾವಾವಿಷ್ಟರಾಗಿ (charged) ಇರುತ್ತಾರೆ. (ಉದಾ : ರಾಮದಾಸ ಸಾಮಗ): ಕೆಲವರು ತುಂಬ ಆರಾಮವಾಗಿರುತ್ತಾರೆ (ಉದಾ : ಪೆರ್ಲ ಕೃಷ್ಣ ಭಟ್ಟ, ದಿ| ವಿಟ್ಲ ಗೋಪಾಲಕೃಷ್ಣ ಜೋಶಿ). ಇದು ಕೂಡ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಪ್ರಭಾವೀ ಶಕ್ತಿಯಾಗಿದೆ.

ಸ್ವತಂತ್ರ ಕಲ್ಪನೆಗೂ, ಸದ್ಯೋಜಾತ ವಾಚಿಕಾಭಿನಯಕ್ಕೂ, ಅಪಾರ ವೈವಿಧ್ಯಕ್ಕೂ ಮಿತಿಯಿಲ್ಲದ ಅವಕಾಶಗಳಿರುವ ಅರ್ಥಗಾರಿಕೆಯೆಂಬುದು- ಪಾತ್ರಧಾರಿಯ ವ್ಯಕ್ತಿತ್ವವನ್ನೇ ಆಧರಿಸಿರುವ ಕಲೆ. ಇಲ್ಲಿ ಕಲೆ- ಅವನ ಮೇಲೆ ಹೊರಿಸುವ ಹೊಣೆಯೂ ದೊಡ್ಡದು. ಅದೇ ಔಚಿತ್ಯದ ಸೀಮೆ. ಸ್ವಾತಂತ್ರ್ಯವಿದೆಯೆಂದು ಅದನ್ನು ಅತಿಗೊಯ್ದರೆ ಕಲೆಗೆ ಅಪಾಯವಿದೆ. ವೈಯಕ್ತಿಕ ಪ್ರತಿಷ್ಠೆ, ಅಗ್ಗದ ಜನಪ್ರಿಯತೆಯ ಸೆಳೆತಗಳಿಗೆ ಇಲ್ಲಿ ತುಂಬ ಆಸ್ಪದ. ಇದರಿಂದಾಗಿ ಅರ್ಥಗಾರಿಕೆ ಹಗುರ (Vulgar) ಆಗುವ ಅಪಾಯದ ಲಕ್ಷಣಗಳನ್ನು ಈಚೆಗೆ ನೋಡುತ್ತಿದ್ದೇವೆ.

೧೪


ನಟನಿಗೆ ನಟನೆಯಲ್ಲಿರುವ ಆನಂದ-ಅಹಂಪ್ರತ್ಯಯದ ಉನ್ನತೀ ಕರಣದ ಆನಂದ, ಆತ್ಮಪ್ರತ್ಯಯದ ಮೂಲಕ ನಾಟಕೀಯ ತೃಪ್ತಿ. ಇಲ್ಲಿ ತಾನು ಎಂಬ ಇರುವಿಕೆಯೂ ಇದೆ; ತಾನಲ್ಲ ಎಂಬ ಅರ್ಪಣೆಯೂ ಇದೆ. ಇದು ಯಜ್ಞದ ಹಾಗೆ, ಆತ್ಮಪ್ರತ್ಯಯ ಮತ್ತು ಆತ್ಮಬಲಿ ಎರಡೂ ಇವೆ. "ಅಹಂ ಕರಿಷ್ಯ" ಮತ್ತು "ಇದಂ ನಮಮ"- ಇವುಗಳೆರಡೂ ಇರುವ ಯಜ್ಞಕ್ರಿಯೆಯ ಹಾಗೆ ಇದು, ತನ್ನ ವ್ಯಕ್ತಿತ್ವದ ಸ್ಥಾಪನೆ ಮತ್ತು ಅದನ್ನು