ಈ ಪುಟವನ್ನು ಪ್ರಕಟಿಸಲಾಗಿದೆ

ಸಾಧ್ಯತೆಗಳನ್ನು ಶೋಧಿಸಿದ್ದಾರೆ, ಅನನ್ಯತೆಯನ್ನು ವ್ಯಾಖ್ಯಾನಿಸಿದ್ದಾರೆ. 'ತಾಳಮದ್ದಳೆ ಕೆಲವು ಗ್ರಹಿಕೆಗಳು ಎಂಬ ಲೇಖನದಲ್ಲಿ, ಪ್ರಸಂಗಪಠ್ಯವು ಪ್ರದರ್ಶನದಲ್ಲಿ ಪಡೆದುಕೊಳ್ಳುವ ವಿವಿಧ ಆಯಾಮಗಳು, 'ಅರ್ಥದಾರಿಗಳ ಸೃಜನಶೀಲತೆ, ರಸಸೃಷ್ಟಿವೈಭವ, ವಾಗರ್ಥ ಸಿದ್ಧಿ, ಇತ್ಯಾದಿಗಳನ್ನು ಸೋದಾಹರಣವಾಗಿ ವಿವರಿಸಿ ತಾಳಮದ್ದಳೆಯ ಜೀವಂತಿಕೆ ಇರುವುದೆಲ್ಲಿ ಎಂಬುದನ್ನು ಮಾರ್ಮಿಕವಾಗಿ ತೋರಿಸಿಕೊಡುತ್ತಾರೆ.
'ತಾಳಮದ್ದಳೆಯ ಕ್ರಿಯಾತ್ಮಕತೆ " ಎಂಬುದು, ಈ ರಂಗದ ಮೌಲಿಕತೆ ಯನ್ನು ಮತ್ತಷ್ಟು ವಿಶದೀಕರಿಸುತ್ತದೆ. ಗತಿಶೀಲತೆ, ಸೃಷ್ಟಿಶೀಲತೆಗಳಿಂದಲೂ ತಾತ್ತ್ವಿಕತೆಯ ಮಿಶ್ರಣ ಘರ್ಷಣೆಗಳಿಂದಲೂ ತಾಳಮದ್ದಳೆಯ ಕಲೆಗಾರಿಕೆ ಹೇಗೆ ಮೂರ್ತರೂಪವನ್ನು ಪಡೆಯುತ್ತದೆಂದು ಇಲ್ಲಿ ನಿರೂಪಿತವಾಗಿದೆ. ಯಕ್ಷಗಾನ ಪ್ರಸಂಗಕಾವ್ಯದ ನಾಟಕೀಯ, ಭಾವನಾತ್ಮಕ, ಸಾಂಸ್ಕೃತಿಕ ಕ್ರಿಯಾತ್ಮಕತೆಯ ವಿವಿಧ ವಿನ್ಯಾಸಗಳನ್ನು ಇಲ್ಲಿ ಗಮನಿಸಲಾಗಿದೆಯಲ್ಲದೆ, ತಾಳಮದ್ದಳೆಯು ಸಾಧಿಸುವ ಸಂಸ್ಕೃತಿ ಪಾಕ "ದ ಅನನ್ಯತೆಯನ್ನು ನಿರ್ವಚಿಸ ಲಾಗಿದೆ. ತುಂಬ ಮೌಲಿಕವಾದ ವಿವೇಚನೆ ಇದು.
"ಯಕ್ಷಗಾನದ ವಾಚಿಕಾಭಿನಯ ಅಭಿವ್ಯಕ್ತಿ ಮತ್ತು ತಂತ್ರ' ಎಂಬ ಲೇಖನದಲ್ಲಿ ಯಕ್ಷಗಾನ ಆಟ ಮತ್ತು ಕೂಟ (ತಾಳಮದ್ದಳೆ)ಗಳಲ್ಲಿ ಪ್ರಯುಕ್ತವಾಗುವ ಮಾತುಗಾರಿಕೆಯ ರೂಪಗಳನ್ನು ಸೋದಾಹರಣವಾಗಿ ಪರಿಶೀಲಿಸಲಾಗಿದೆ.. ಪ್ರಸಂಗ ಪದ್ಯ, ಪಾತ್ರೋಚಿತವಾದ ಅರ್ಥದ ಬೆಳವಣಿಗೆ, ರಂಗಕ್ರಿಯೆ ಇತ್ಯಾದಿಗಳ ಹೆಣಿಗೆಯನ್ನು ಲಕ್ಷಿಸುವುದರೊಂದಿಗೆ, ಅರ್ಥಗಾರಿಕೆ ಕೇವಲ ಅನುವಾದ ಕ್ರಿಯೆಯಾಗಿರದೆ ಅದು ಪ್ರಸಂಗವನ್ನಾಧರಿಸಿದ ಪ್ರತಿಕಾವ್ಯ ಸೃಷ್ಟಿ, ಆಶುನಾಟಕ ರಚನೆ ಎಂಬುದನ್ನು ಸ್ಥಾಪಿಸಲಾಗಿದೆ. ಧರ್ಮ ಸಂಸ್ಕೃತಿಗಳ ಇತಿಹಾಸದ ಬೀಸು ಅರ್ಥಪೂರ್ಣವಾದ ಅರ್ಥಗಾರಿಕೆಯಲ್ಲಿ ತೋರಿಬರುತ್ತ ದೆಂಬುದನ್ನು ಲೇಖಕರು ಎತ್ತಿ ತೋರಿಸುತ್ತಾರೆ.
ಯಕ್ಷಗಾನ ಕಲೆಯ ಸಂದರ್ಭದಲ್ಲಿ, ವಿಮರ್ಶೆಯ ಸ್ವರೂಪ ವಿವೇಚನೆ ಯನ್ನು ಮಾಡುವುದು ಸಕಾಲಿಕವಾಗಿದೆ ಕನ್ನಡ ಸಾಹಿತ್ಯದ ಇತರ ಪ್ರಕಾರಗಳ ಬಗೆಗೆ ನಡೆದಷ್ಟು ವಿಮರ್ಶೆ ಯಕ್ಷಗಾನದ ವಿಷಯದಲ್ಲಿ ನಡೆದಿರದಿದ್ದರೂ, ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗಿವೆ. "ಯಕ್ಷಗಾನ ವಿಮರ್ಶೆಯ ನೆಲೆಗಳು' ಎಂಬ ಲೇಖನ ಈ ಸರಣಿಗೆ ಸೇರುವ ಒಂದು ಗಟ್ಟಿಯಾದ