ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೪೭


ಕಿಷ್ಕಿಂಧಾಕಾಂಡ/೪೬

ಸುಗ್ರೀವನನ್ನು ವದಿಸಬೇಕೆಂದು ವಾಲಿಯು ಸುಗ್ರೀವನ ಬೆನ್ನು ಹತ್ತಿದಾಗ
ಆತನು ಸ್ವಂತದ ರಕ್ಷಣೆಗಾಗಿ ಭೂಮಿಯ ಎಲ್ಲ ದಿಕ್ಕುಗಳಲ್ಲಿ ಆಶ್ರಯಸ್ಥಾನವನ್ನು
ಹೊಂದಲು ಅಲೆದಾಡಿದನು. ಹಿಮಾಲಯ ಪರ್ವತವನ್ನು, ಮೇರುಪರ್ವತವನ್ನು,
ಉತ್ತರ ಸಮುದ್ರವನ್ನು ದಾಟಿದರೂ ಆತನಿಗೆ ಸುರಕ್ಷಿತವಾದ ಸ್ಥಾನವು ದೊರಕಲಿಲ್ಲ.
ಆಗ ಸುಗ್ರೀವನು ಬಹಳೇ ದುಃಖಿತನಾದ ಸಮಯದಲ್ಲಿ, ಮತಂಗ ಋಷಿಯು
ವಾಲಿಗೆ ಕೊಟ್ಟ ಶಾಪದ ಸ್ಮರಣೆಯು ಹನುಮಂತನಿಗಾಯಿತು. ಆತನು ಸುಗ್ರೀವನಿಗೆ
ಈ ರೀತಿ ನುಡಿದನು:
ಇದಾನೀಂ ಮೇ ಸ್ಮೃತಂ ರಾಜನ್ಯಥಾ ವಾಲೀ ಹರೀಶ್ವರಃ ‖೨೧‖
ಮತಂಗೇನ ತದಾ ಶಪ್ತೋ ಹ್ಯಸ್ಮಿನ್ನಾಶ್ರಮಂಡಲೇ |
ಪ್ರವಿಶೇದ್ಯದಿ ವೈ ವಾಲೀ ಮೂರ್ಧಾಸ್ಯ ಶತಧಾ ಭವೇತ್ ‖೨೨‖
ತತ್ರ ವಾಸಃ ಸುಖೋsಸ್ಮಾಕಂ ನಿರುದ್ವಿಗ್ನೋ ಭವಿಷ್ಯತಿ ‖೨೩‖

'ಎಲೈ ರಾಜನೇ, ಈ ಸಂಗತಿಯು ಈಗ ನನಗೆ ಸ್ಮರಣೆಗೆ ಬಂದಿದೆ. 'ಈ
ಆಶ್ರಮದಲ್ಲಿ ವಾಲಿಯು ಪ್ರವೇಶಿಸಿದರೆ ಆತನ ತಲೆಯು ನೂರು ಹೋಳಾಗಲಿ'
ಎಂಬ ಶಾಪವನ್ನು ಮತಂಗಋಷಿಯು ಕೊಟ್ಟಿದ್ದಾನೆ; ಆದ್ದರಿಂದ ಈ ಮತಂಗಾ
ಶ್ರಮದಲ್ಲಿ ನಮ್ಮ ವಾಸವು ನಿರ್ಭಯವು ಸುಖಕರವೂ ಆಗುತ್ತದೆ.”
ಹನುಮಂತನ ಹೇಳಿಕೆಯಂತೆ ಸುಗ್ರೀವನು ಋಷ್ಯಮೂಕಪರ್ವತದ ಮೇಲೆ
ನಿರಾತಂಕವಾಗಿ ಇದ್ದುಬಿಟ್ಟನು.
ಈ ಶಾಪವು ಕಟ್ಟಳೆಯದಾಗಿದೆ. ಕಟ್ಟಳೆಯನ್ನು ಪಾಲಿಸದಿದ್ದರೆ ಶಾಪದ
ಪರಿಣಾಮವಾಗುತ್ತದೆ; ಅನ್ಯಥಾ ಆಗುವದಿಲ್ಲ.

೩೨. ಕಂಸು < ವನ

ಕಿಷ್ಕಿಂಧಾಕಾಂಡ/೪೮

ತಾರ ಮತ್ತು ಅಂಗದ ಇವರೊಂದಿಗೆ ಹನುಮಂತನು ವಿಂಧ್ಯಪರ್ವತ
ದಲ್ಲಿಯ ಗುಹೆಗಳನ್ನು, ವನಗಳನ್ನು ಸೀತೆಯನ್ನು ಶೋಧಿಸಲು ಅವಲೋಕಿಸಿದನು;
ಆದರೆ ಪ್ರಯೋಜನವಾಗಲಿಲ್ಲ. ಅರಣ್ಯದಲ್ಲಿ ದೊರೆತ ಫಲ-ಮೂಲಗಳನ್ನು
ಭಕ್ಷಿಸಿ ಅವರು ದಕ್ಷಿಣ ದಿಕ್ಕಿನಲ್ಲಿದ್ದ ಒಂದು ಕಾಡನ್ನು ತಲುಪಿದರು. ಈ ಕಾಡಿನಲ್ಲಿಯ
ಮರಗಳಿಗೆ ಎಲೆ, ಹೂ, ಹಣ್ಣು ಯಾವದೂ ಇರಲಿಲ್ಲ. ಅಲ್ಲಿ ಜಲಾಶಯಗಳೂ