ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೫೫


೩೮. ಪುಲಸ್ತ್ಯ < ತೃಣಬಿಂದುಕನ್ಯೆಯರು

ಉತ್ತರಕಾಂಡ/೨

ರಾಮನಿಗೆ ಅಗಸ್ತ್ಯ ಋಷಿಯು ವಿಸ್ರವಾಮುನಿಯ ಜನ್ಮದ ಕಥೆಯನ್ನು ಹೇಳುತ್ತಾನೆ:
ಕೃತಯುಗದಲ್ಲಿ ಪ್ರಜಾಪತಿಯ ಪುತ್ರರಾದ 'ಪುಲಸ್ತ್ಯ' ಎಂಬ ಬ್ರಹ್ಮರ್ಷಿ ಇದ್ದನು. ಧರ್ಮ, ಶೀಲಗಳಿಂದ ಆತನು ದೇವತೆಗಳಿಗೆ ಪ್ರಿಯನಾಗಿದ್ದನು. ಮೇರು ಪರ್ವತದ ಸಮೀಪದಲ್ಲಿದ್ದ ತೃಣಬಿಂದುವಿನ ಆಶ್ರಮದಲ್ಲಿ ತಪಸ್ಸಿಗಾಗಿ ನೆಲೆಸಿದ್ದನು. ಅನೇಕ ನಾಗ ಕನ್ಯೆಯರು, ಋಷಿಕನ್ಯೆಯರು, ರಾಜರ್ಷಿಕನ್ಯೆಯರು, ಅಪ್ಸರೆಯರು ಕ್ರೀಡಿಸುತ್ತ ಈ ಆಶ್ರಮದ ಬಳಿಗೆ ಬಂದರು. ಅವರು ಆಗಾಗ ಅಲ್ಲಿಗೆ ಬಂದು ನೃತ್ಯಗಾಯನದಲ್ಲಿ ತೊಡಗುತ್ತಿದ್ದರು. ಈ ಯೌವನೆಯರ ಆಗಮನದಿಂದ ಪುಲಸ್ತ್ಯ ಋಷಿಯ ತಪಸ್ಸಿನಲ್ಲಿ ವಿಘ್ನ ಉಂಟಾಗುತ್ತಿದ್ದುದರಿಂದ ಆತನು ಕ್ರುದ್ಧನಾದನು; ಮತ್ತು 'ಯಾವ ಕನ್ಯೆಯು ನನ್ನ ಕಣ್ಣಿಗೆ ಬೀಳುವಳೋ ಅವಳು ಗರ್ಭಿಣಿಯಾಗುವಳು' ಎಂದು ಉಚ್ಚರಿಸಿದನು.


            ಯಾ ಮೇ ದರ್ಶನಮಾಗಚ್ಛೇತ್ಸಾ ಗರ್ಭಂ ಧಾರಯಿಷ್ಯತಿ ‖೧೩‖


ಈ ಬ್ರಹ್ಮ ಶಾಪಕ್ಕೆ ಹೆದರಿ ಆ ಕನ್ಯೆಯರು ಆ ಪ್ರದೇಶಕ್ಕೆ ಹೋಗುವುದನ್ನು ನಿಲ್ಲಿಸಿದರು; ಆದರೆ ಈ ಶಾಪವನ್ನು ಕೇಳದೇ ಇದ್ದ 'ತೃಣಬಿಂದು' ಎಂಬಾತನ ಕನ್ಯೆಯು ಆ ಪ್ರದೇಶದ ಹತ್ತಿರ ಹೋದಾಗ ಅಲ್ಲಿ ಒಬ್ಬ ಸಖಿಯೂ ಕಣ್ಣಿಗೆ ಬೀಳಲಿಲ್ಲ. ಅವಳು ಸಂಕೋಚವಿಲ್ಲದೇ ಅಲ್ಲಿ ಸುತ್ತಾಡುತ್ತಿದ್ದಾಗ, ಋಷಿಯ ಕಣ್ಣಿಗೆ ಬಿದ್ದಳು. ತಕ್ಷಣ ಅವಳ ದೇಹವು ಬಿಳಿಚಿಕೊಂಡಿತು. ಅವಳು ಗರ್ಭವತಿಯಾದಳು. ಈ ಪರಿಯ ಅನರ್ಥವುಂಟಾದ್ದರಿಂದ ಅವಳು ಕಂಗೆಟ್ಟು ಆಶ್ರಮದಲ್ಲಿದ್ದ ತನ್ನ ತಂದೆಯ ಮುಂದೆ ಬಂದು ನಿಂತಳು. ಅವಳು ಅವಸ್ಥೆಯನ್ನು ಕಂಡು, ಕೇಳಿ ವಿಚಾರಿಸಿಕೊಂಡ ನಂತರ ಆತನು ಧ್ಯಾನಸ್ಥನಾದನು. ಆತನಿಗೆ ಎಲ್ಲ ಸಂಗತಿಗಳು ಸ್ಪಷ್ಟವಾದವು. ಕನ್ಯೆಯನ್ನು ಜೊತೆಮಾಡಿಕೊಂಡು ಅತನು ಪುಲಸ್ತ್ಯ ಋಷಿಯತ್ತ ಹೋಗಿ ಈ ರೀತಿ ಅಂದನು-
"ಭಗವನ್! ಸ್ವಗುಣಗಳಿಂದ ಭೂಷಿತಳಾದ ಈ ನನ್ನ ಕನ್ಯೆಯನ್ನು ಸ್ವೀಕರಿಸಿರಿ! ಹೇ ಮಹರ್ಷಿಯೇ, ತನಾಗಿ ಮನೆಗೆ ಬಂದ ಇದೊಂದು ಭಿಕ್ಷೆ; ತಪಸ್ಸಿನಿಂದ ಉಂಟಾಗುವ ಆಯಾಸವನ್ನು ಈ ಕನ್ಯೆಯು ನಿಮ್ಮ ಸೇವೆ ಮಾಡಿ ಕಳೆಯತ್ತಾಳೆ." ಈ ಹೇಳಿಕೆಯನ್ನು ಪುಲಸ್ತ್ಯನು ಸಮ್ಮತಿಸಿದನು. ಅವಳ ಸೇವೆ,