ಈ ಪುಟವನ್ನು ಪರಿಶೀಲಿಸಲಾಗಿದೆ

ಶಪಥ, ಸತ್ಯಕ್ರಿಯೆ

೧೯೭


೩. ರಾಮನ ಶಪಥ

ಯುದ್ಧಕಾಂಡ/೧೯

ರಾಮನು ವಿಭೀಷಣನಿಗೆ ಶಪಥಪೂರ್ವಕವಾಗಿ ಹೇಳುತ್ತಿದ್ದಾನೆ. ವಿಭೀಷಣನು ರಾಮನಿಗೆ ಶರಣು ಬಂದಾಗ ರಾಮನು ಅವನಿಗೆ ಅಭಯ ವನ್ನಿತ್ತನು. ರಾಕ್ಷಸರ ಬಲಾಬಲದ ನಿಜವಾದ ಮಾಹಿತಿಯನ್ನು ತಿಳಿಸಲು ವಿನಂತಿಸಿದನು. “ಬ್ರಹ್ಮದೇವನ ವರದಿಂದ ರಾವಣನ ವಧೆಯಾಗುವಂತಿಲ್ಲ; ಕುಂಭಕರ್ಣನು ಬಹಳ ಬಲಾಢ್ಯ ನಾಗಿದ್ದಾನೆ; ಇಂದ್ರಜಿತವು ಯುದ್ಧದಲ್ಲಿ ಅತಿನಿಪುಣನಿದ್ದಾನೆ” ಎಂದು ಹೇಳಿ ವಿಭೀಷಣನು, ಮಹೋದರ ಮಹಾ ಪಾರ್ಶ್ವಾದಿ ಅನ್ಯರಾಕ್ಷಸರ ಶಕ್ತಿ ಸಾಮರ್ಥ್ಯದ ಸವಿಸ್ತರ ಕಲ್ಪನೆಯನ್ನು ರಾಮನಿಗೆ ಮಾಡಿಕೊಟ್ಟನು. ಇದನ್ನು ಕೇಳಿಕೊಂಡು ರಾಮನು ಸಂತೋಷಗೊಂಡು, ತುಸು ಆಲೋಚಿಸಿ ಈ ರೀತಿ ನುಡಿದನು: “ನೀನು ಹೇಳಿದ ಸಂಗತಿಯು ನನಗೆ ಅರ್ಥವಾಯಿತು.”

ಅಹಂ ಹತ್ವಾ ದಶಗ್ರೀವಂ ಸಪ್ರಹಸ್ತಂ ಸಹಾತ್ಮಜಮ್ |
ರಾಜಾನಂ ತ್ವಾಮ ಕರಿಷ್ಯಾಮಿ ಸತ್ಯಮೇತಚ್ಛೃಣೋತು ಮೇ ‖೧೯‖
ರಸಾತಲಂ ವಾ ಪ್ರತಿರೇತ್ಪಾತಾಲಂ ವಾಪಿ ರಾವಣಃ |
ಪಿತಾಮಹಸಕಾಶಂ ವಾ ನ ಮೇ ಜೀವನ್ವಿಮೋಕ್ಷ್ಯತೇ ‖೨೦‖
ಅಹತ್ವಾ ರಾವಣಂ ಸಂಖ್ಯೇ ಸಪುತ್ರಜನಬಾಂಧವಮ್ |
ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈರ್ಭ್ರಾತೃಭಿಃ ಶಪೇ ‖೨೧‖


“ಪ್ರಹಸ್ತ ಹಾಗೂ ಪುತ್ರರ ಸಮೇತ ನಾನು ರಾವಣನನ್ನು ವಧಿಸಿ ನಿನಗೆ ಪಟ್ಟ ಕಟ್ಟುವೆ; ನನ್ನ ಈ ಸತ್ಯವಚನವನ್ನು ನೀನು ಆಲಿಸು! ರಾವಣನು ರಸಾತಳಕ್ಕೆ ಹೋಗಲಿ, ಪಾತಾಳವನ್ನು ನುಗ್ಗಲಿ, ಅಥವಾ ಬ್ರಹ್ಮದೇವನತ್ತ ಧಾವಿಸಲಿ, ಎಲ್ಲಿ ಹೋದರೂ ನನ್ನಿಂದ ಪಾರಾಗಿ ಜೀವಿತವಾಗಿ ಉಳಿಯಲಾರ! ಪುತ್ರರು, ಸ್ವಜನ ಬಾಂಧವರೊಂದಿಗೆ ಆ ರಾವಣನನ್ನು ಸಾಂಪ್ರತ ಸಂಗ್ರಾಮದಲ್ಲಿ ವಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸಲಾರೆನು; ನನ್ನ ಮೂರು ತಮ್ಮಂದಿರ ಆಣೆಯಿಟ್ಟು ನಾನು ಇದನ್ನು ಹೇಳುತ್ತೇನೆ” ಎಂದು ರಾಮನು ನುಡಿದನು.
ಇದನ್ನು ಕೇಳಿ ವಿಭೀಷಣನು ರಾಮನಿಗೆ ವಂದಿಸಿದನು. ರಾಕ್ಷಸರನ್ನು ವಧಿಸಲು ಲಂಕೆಯ ಮೇಲೆ ದಂಡೆತ್ತಿ ಬರಲು ಸಹಾಯವನ್ನು ನೀಡುವೆನೆಂದು ಒಪ್ಪಿಕೊಂಡನು. ರಾಮನಿಗೆ ಅತಿಶಯ ಆನಂದವೆನಿಸಿತು. ಸಮುದ್ರದಿಂದ ನೀರನ್ನು