ಈ ಪುಟವನ್ನು ಪರಿಶೀಲಿಸಲಾಗಿದೆ

೧೯೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ತಂದು ವಿಭೀಷಣನಿಗೆ ರಾಕ್ಷಸರ ರಾಜನೆಂದು ರಾಜ್ಯಾಭಿಷೇಕವನ್ನು ನಡೆಸಲು ಲಕ್ಷ್ಮಣನಿಗೆ ಹೇಳಿದನು.

೪. ಶಪಥ: ಲಕ್ಷ್ಮಣ < ಬಾಣ

ಯುದ್ಧಕಾಂಡ/೯೧

ಅತಿಭಯಂಕರ ಯುದ್ಧವು ಲಕ್ಷ್ಮಣ ಹಾಗೂ ಇಂದ್ರಜಿತುವಿನಲ್ಲಿ ನಡೆದಿತ್ತು; ಮೈ ನವಿರೇಳುವಂತಹದಾಗಿತ್ತು. ಲಕ್ಷ್ಮಣನು ಇಂದ್ರಜಿತುವಿನ ಎಲ್ಲ ಬಾಣಗಳನ್ನು ವ್ಯರ್ಥಗೊಳಿಸಿದನು. ಪೂರ್ವದಲ್ಲಿ ಸುರಾಸುರರಲ್ಲಿ ಯುದ್ಧ ನಡೆದಾಗ ಯಾವ ಬಾಣದಿಂದ ಇಂದ್ರನು ಅಸುರರನ್ನು ಜಯಿಸಿದ್ದನೋ ಅಂತಹ ಸರ್ಪವಿಷ ಪೂರಿತದಂಥ, ದೇವತೆಗಳಿಗೆ ಪ್ರಿಯವಾದಂಥ ಒಂದು ಬಾಣವನ್ನು ಐಂದ್ರಾಸ್ತ್ರದಿಂದ ಮಂತ್ರಿಸಿ ಲಕ್ಷ್ಮಣನು ತನ್ನ ಶ್ರೇಷ್ಠ ಬಿಲ್ಲಿಗೆ ಹೂಡಿದನು. ತನ್ನ ಇಷ್ಟಾರ್ಥವು ಫಲಿಸಬೇಕೆಂದು ಆ ಬಾಣಕ್ಕೆ ಉದ್ದೇಶಿಸಿ ಹೀಗೆಂದನು-
ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ |
ಪೌರುಷೇ ಚಾಪ್ರತಿದ್ವಂದ್ವಸ್ತದೈನಂ ಜಹಿ ರಾವಣಿಮ್ ‖೬೯‖

“ದಾಶರಥಿ ರಾಮನು ಧರ್ಮಾತ್ಮನಾಗಿದ್ದರೆ, ಸತ್ಯವಚನಿಯಾಗಿದ್ದರೆ, ಅತುಲಪರಾ ಕ್ರಮಿಯಾಗಿದ್ದರೆ, ಎಲೈ ಬಾಣವೇ, ನೀನು ಈ ರಾವಣಪುತ್ರನನ್ನು ವಧಿಸು!”

೫. ರಾಮನ ಶಪಥ

ಉತ್ತರಕಾಂಡ/೪೫

ಸೀತೆಯು ಅಗ್ನಿದಿವ್ಯವ್ನಾಚರಿಸಿ ತನ್ನ ನಿಷ್ಕಲಂಕಚಾರಿತ್ರ್ಯವನ್ನು ಸಿದ್ಧಮಾಡಿ ತೋರಿಸಿದ್ದರೂ, ಅವಳು ಪರಿಶುದ್ಧಳು, ಪೂರ್ಣ ನಿರ್ದೋಷಿಯೆಂಬ ಮನವರಿಕೆ ರಾಮನಿಗೆ ಆಗಿದ್ದರೂ, ಸೀತೆಯ ಬಗ್ಗೆ ಪ್ರಜಾಜನರ ಮನಸ್ಸಿನಲ್ಲಿಯ ಸಂಶಯವು ಕಳೆದಿರಲಿಲ್ಲ. ರಾಮನ ಬಗ್ಗೆ ಮತ್ತು ಸೀತೆಯ ಬಗ್ಗೆ ಜನರಲ್ಲಿಯ ಪಿಸುಮಾತುಗಳನ್ನು ಸಹಿಸಿಕೊಳ್ಳುವುದು ರಾಮನಿಗೆ ಸಾಧ್ಯವಿರಲಿಲ್ಲ. ರಾಜನ ಕರ್ತವ್ಯದ ದೃಷ್ಟಿಯಿಂದ ಲೋಕನಿಂದೆಗೆ ಅಸಾಧಾರಣ ಮಹತ್ವವಿತ್ತು; ಅದನ್ನು ಅಲಕ್ಷಿಸುವುದು ಆತನಿಗೆ ಸಾಧ್ಯವಿರಲಿಲ್ಲ. ನಿಂದೆಗೆ ಗುರಿಯಾದವನು ನಿಂದೆ ಅಳಿಯುವವರೆಗೆ ನರಕದಲ್ಲಿ ಬಿದ್ದಿರುತ್ತಾನೆ ಎಂಬ ಶ್ರದ್ಧೆ ಆತನದಾಗಿತ್ತು. ಪತ್ನಿಯೆಂದು