ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಕೈಕೇಯಿಯು ಚಾಕಚಕ್ಯತೆಯಿಂದ ದಶರಥರಾಜನನ್ನು ರಣರಂಗದಾಚೆ ಕರೆದೊಯ್ದು ಆತನನ್ನು ರಕ್ಷಿಸಿದಳು. ಆ ಸಂದರ್ಭವನ್ನು ಜ್ಞಾಪಿಸಿಕೊಟ್ಟು ಮಂಥರೆಯು- ತುಷ್ಟೇನ ತೇನ ದತ್ತ ತೇ ದೈ ವರೌ ಶುಭದರ್ಶನೇ || ಸ ತ್ವಯೋಕ್ತಃ ಪತಿರ್ದೇವಿ ಯದೇಚ್ಛೆಯಂ ತದಾ ವರಮ್ |೧೭|| “ಸಂತುಷ್ಟನಾದ ರಾಜನು ನಿನಗೆ ವರಗಳನ್ನು ಕೊಡಬಯಸಿದಾಗ “ನನ್ನ ಇಚ್ಚೆಯಾದಾಗ ನಾನು ವರಗಳನ್ನು ಬೇಡಿಕೊಳ್ಳುವೆ'ನೆಂದು ನೀನು ಆತನಿಗೆ ಹೇಳಿರುವಿ; ಎಂದು ನನ್ನ ಮುಂದೆ ಮಾತನಾಡಿದ್ದೆ. ಈಗ ನೀನು ನಿನ್ನ ಪತಿಯನ್ನು ಒಲಿಸಿಕೊಂಡು; ರಾಮನ ಯುವರಾಜ್ಯಾಭಿಷೇಕದಿಂದ ಪರಾವೃತ್ತಗೊಳಿಸು! ಭರತನಿಗೆ ರಾಜ್ಯಾಭಿಷೇಕ ಮತ್ತು ರಾಮನಿಗೆ ಹದಿನಾಲ್ಕು ವರ್ಷ ವನವಾಸ, ಈ ಎರಡು ವರಗಳನ್ನು ಬೇಡಿಕೊ?” ಎಂದು ಕೈಕೇಯಿಗೆ ಸಲಹೆಯಿತ್ತಳು. ಮಂಥರೆಯು ಮತ್ತೆ ಮುಂದೆ- 'ಕೈಕೇಯಿಯೇ, ದೇವದಾನವರ ಯುದ್ದ ಪ್ರಸಂಗದಲ್ಲಿ ದಶರಥನು ವರಗಳನ್ನು ಕೊಟ್ಟದ್ದನ್ನು ನೀನು ಆತನಿಗೆ ಜ್ಞಾಪಿಸು! ಆಗ ನಿನ್ನ ಆಸೆಯು ಬಯಲಾಗಲಾರದು! ರಾಜನು ಶಯ್ಕೆಯಿಂದೆದ್ದು ವರ ನೀಡುವ ಸಮಯಕ್ಕೆ ಶಪಥ ಹಾಕಿ ಆತನನ್ನು ವಚನಬದ್ಧನನ್ನಾಗಿ ಮಾಡು! ಮತ್ತು- ರಾಮಪವಜನು ದೂರ ನವವಾಣಿ ಪಂಚ ಚ | ಭರತಃ ಕ್ರಿಯತಾಂ ರಾಜಾ ಪೃಥಿವ್ಯಾಂ ಪಾರ್ಥಿವರ್ಷಭ ೩೦l - 'ಹೇ ರಾಜಾಧಿರಾಜನೇ, ಹದಿನಾಲ್ಕು ವರ್ಷಗಳವರೆಗೆ ರಾಮನಿಗೆ ದೂರ ಅಡವಿಗೆ ಕಳುಹಿಸಿ, ಭರತನಿಗೆ ಪೃಥ್ವಿಯ ರಾಜ್ಯವನ್ನು ಕೊಡು” ಎಂದು ನೀನು ಅವನಲ್ಲಿ ಬೇಡಿಕೊ!” ರಾಮನು ಹದಿನಾಲ್ಕು ವರ್ಷ ದೂರ ಹೋಗುವದರಿಂದ ಭರತನ ರಾಜ್ಯವು ಸುಭದ್ರವಾಗುವದೆಂದು ನಂಬಿಸಲು ಪ್ರಯಾಸಪಟ್ಟಳು. ಅಯೋಧ್ಯಾಕಾಂಡ/೧೧. ವರಗಳನ್ನು ಕೇಳಿಕೊಳ್ಳುವಾಗ ಕೈಕೇನಿಯು ದಶರಥನಿಗೆ ಹೀಗೆ ನುಡಿದಳು- ಯಥಾ ಕ್ರಮೇಣ ಶಪನೇ ವರಂ ಮಮ ದದಾಸಿ ಚ |೧೩||