ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೦೯ “ನೀನು ಮೊದಲು ಪ್ರಿಯಪುತ್ರನ ಶಪಥ ಮಾಡಿ ಮತ್ತು ನಂತರ ನಿನ್ನ ಪುಣ್ಯದ ಶಪಥವನ್ನು ಮಾಡಿ, ನನಗೆ ವರಗಳನ್ನು ಕೊಡುತ್ತಿರುವೆ. ಈ ಇಂದ್ರಾದಿ ಮೂವತ್ತುಮೂರು ಕೋಟಿ ದೇವತೆಗಳು ಇದನ್ನು ಕೇಳಿಡಲಿ! ಅದೇ ರೀತಿ ಚಂದ್ರ, ಸೂರ್ಯ, ಆಕಾಶ, ಗ್ರಹಗಳು, ರಾತ್ರಿ ದಿವಸ, ದಿಶೆಗಳೂ, ಈ ಜಗತ್ತು, ಈ ಪೃಥ್ವಿಯು, ಗಂಧರ್ವ ಮತ್ತು ರಾಕ್ಷಸರನ್ನೊಳಗೊಂಡ ಸ್ವರ್ಗದಲ್ಲಿಯ ದೇವತೆಗಳು, ನಿಶಾಚರಪ್ರಾಣಿಗಳು, ಗೃಹ ದೇವತೆ, ಮತ್ತು ಇತರ ಪ್ರಾಣಿಮಾತ್ರರು ನಿನ್ನ ಈ ಪ್ರತಿಜ್ಞೆಯ ಭಾಷಣವನ್ನು ಆಲಿಸಲಿ!” ಹೀಗೆ ದಶರಥನ ಸತ್ಯತೆಯ ಪ್ರತಿಜ್ಞಾನಿಷ್ಟೆಯ ಗುಣಗಳನ್ನು ಹೊಗಳುತ್ತ ಅವಳು ನುಡಿದದ್ದು- “ಹೇ ರಾಜನೇ, ಪೂರ್ವವೃತ್ತಾಂತವನ್ನು ಸ್ಮರಿಸುತ್ತಿ ದೇವದಾನವರ ಆ ಸಂಗ್ರಾಮದಲ್ಲಿ ಶಂಬರನೆಂಬ ದೈತ್ಯನು ನಿನ್ನನ್ನು ಸದೆಬಡಿದನು- ನಿನ್ನನ್ನು ಜೀವಸಹಿತ ಬಿಟ್ಟನಷ್ಟೇ, ಆಗ- ತತ್ರ ಚಾಪಿ ಮಯಾ ದೇವ ಯತ್ನಂ ಸಮಭಿರಕ್ಷಿತಃ || ಜಾಗ್ರತ್ಯಾ ಯತಮಾನಾಯಾಸ್ತತೋ ಮೇ ಪದದೌ ವರ್ ||೧೯| ಈ ದತ್ ಚ ವರ್ ದೇವ ನಿಕ್ಷೇಪ್ ಮೃಗಯಾಮ್ಯಹಮ್ || ತವೈವ ಪೃಥಿವೀಪಾಲ ಸಕಾಶ್‌ ರಘುನಂದನ |೨೦|| ತತ್ಪತಿಶ್ರುತ್ಯ ಧರ್ಮೇಣ ಚೇದ್ ದಾಸ್ಯಸಿ ಮೇ ವರಮ್ || ಅದೈತ ಹಿ ಪ್ರಹಾಸ್ಯಾಮಿ ಜೀವಿತಂ ತ್ವದ್ ವಿಮಾನಿತಾ ೨೧ “ಎಚ್ಚರಿಕೆ ವಹಿಸಿ ನಾನು ನಿನ್ನನ್ನು ರಕ್ಷಿಸಿದೆ; ನಿನ್ನ ಪ್ರಾಣವನ್ನು ಕಾಪಾಡಲು ಧಡಪಡಿಸಿದೆ; ಆದ್ದರಿಂದ ನೀನು ನನಗೆ ಎರಡು ವರಗಳನ್ನು ಕೊಟ್ಟೆ ಆ ವರಗಳನ್ನು ಬೇಡಿಕೊಳ್ಳದೇ ನಿನ್ನ ಬಳಿಯಲ್ಲಿಯೇ ಠೇವಣಿಯಾಗಿ ಇಟ್ಟಿದ್ದೆ; ಇಂದು ನಾವು ಅವುಗಳನ್ನು ಬೇಡುತ್ತಿದ್ದೇನೆ. ಧರ್ಮದ ಶಪಥವನ್ನು ಮಾಡಿಯೂ ನೀನು ವರಗಳನ್ನು ಕೊಡದಿದ್ದರೆ, ನಿನ್ನಿಂದ ಅವಮಾನವಾಯಿತೆಂದು ಬಗೆದು ಈ ದಿನವೇ ಪ್ರಾಣತ್ಯಾಗವನ್ನು ಮಾಡುವೆ.” ತನ್ನ ವಾಕ್ಚಾತುರ್ಯದಿಂದ ಮೋಹಗೊಂಡು ವರಗಳನ್ನು ಕೊಡಲು ಸಿದ್ದನಾದ ದಶರಥನನ್ನು ಕೈಕೇಯಿಯು ವಚನಾಧೀನನನ್ನಾಗಿ ಮಾಡಿದಳು. ರಾಜನು ವಚನಭಂಗವನ್ನು ಮಾಡಲಾರನೆಂದು ಮನದಟ್ಟಾದ ನಂತರ ಅವಳು ಈ ರೀತಿ ಅಂದಳು- ವರ್ ದೇ ತ್ವಯಾ ದೇವ ತದಾ ದತ್ತ ಮಹೀಪತೇ |೨೩|| ತೌ ತಾವದಹಮದ್ಯವ ವಕ್ಷ್ಯಾಮಿ ಶಣು ಮೇ ವಚಃ |