ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩c ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಬಾಲಕಾಂಡ/೧೬ ರಾವಣನು ಪೂರ್ವದಲ್ಲಿ ಬಹುಕಾಲದವರೆಗೆ ಘೋರ ತಪಶ್ಚರ್ಯೆಯನ್ನು ಆಚರಿಸಿದ್ದನು. ಯೇನ ತುಷೋsಭವದ್ಬ್ರಹ್ಮಾ ಲೋಕಕ್ಕಲ್ಲೋಕಪೂರ್ವಜ: ||೪|| ಸಂತುಷ್ಟ ಪ್ರದರ್ ತಸ್ಯೆ ರಾಕ್ಷಸಾಯ ರಂ ಪ್ರಭುಃ || ನಾನಾವಿಧೇಭೋ ಭೂತೇಭ್ಯ ಭಯಂ ನಾನ್ಯ ಮಾನುಷಾಪ್ 1981 ಅವಜ್ಞಾತಾಃ ಪುರಾ ತೇನ ವರದಾನೇ ಹಿ ಮಾನವಾಃ || ಏಮ ಪಿತಾಮಹಾತ್ತಸ್ಮಾದ್ವರದಾನೇನ ಗರ್ವಿತಃ ||೬|| ಉತ್ಪಾದಯತಿ ಲೋಕಾನ್ ಸೀಯಕ್ಕಪ್ಪುಪಕರ್ಷತಿ | ತಸ್ಮಾತ್ತಸ್ಯ ವಧೋ ದೃಷ್ಟೋ ಮಾನುಷೇಭ್ಯಃ ಪರಂತಪ ॥೭॥ ಆಗ ಲೋಕಗಳ ಆದ್ಯಜನಕವಾದ ಬ್ರಹ್ಮದೇವನು ಪ್ರಸನ್ನನಾಗಿ “ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿಯಿಂದಲೂ ನಿನಗೆ ಭಯವಿಲ್ಲ!” ಎಂಬ ವರವನ್ನು ಆತನಿಗೆ ಕೊಟ್ಟನು; ಏಕೆಂದರೆ ಆ ರಾಕ್ಷಸನು ವರವನ್ನು ಬೇಡುವಾಗ ಮನುಷ್ಯನನ್ನು ಲೆಕ್ಕಿಸಿರಲಿಲ್ಲ; ಈ ರೀತಿ ವರವನ್ನು ಬ್ರಹ್ಮನಿಂದ ಪಡೆದನಂತರ ಈ ರಾಕ್ಷಸನು ಗರ್ವಿಷ್ಠನಾಗಿ ಮೂರು ಲೋಕಗಳನ್ನೂ ಧ್ವಂಸಗೊಳಿಸುತ್ತಿದ್ದು ಪರರ ಸ್ತ್ರೀಯರನ್ನೂ ಈತನು ಎಳೆದೊಯ್ಯಲಾರಂಭಿಸಿದ್ದಾನೆ. ಹೀಗಿರುವದರಿಂದ, ಹೇ ಶತ್ರುತಾಪನನೇ, ಮನುಷ್ಯನಿಂದಲೇ ಆತನ ವಧೆ ನಡೆಯುವದು ಖಂಡಿತ.” ಉತ್ತರಕಾಂಡ/೧೦ ರಾಮನು ಕೇಳಿದ ಕಾರಣ ಅಗಸ್ಯಮುನಿಯು, ರಾವಣನ ತಪಶ್ಚರ್ಯೆಯ ಬಗ್ಗೆ ಆತನಿಗೆ ವಿವರಿಸುತ್ತಿದ್ದಾನೆ. ಯಾವ ಆಹಾರಪಾನೀಯಗಳನ್ನೂ ಸೇವಿಸದೆ ರಾವಣನು ಹತ್ತು ಸಾವಿರ ವರ್ಷಗಳ ಕಾಲ ತಪಸ್ಸನ್ನು ಆಚರಿಸಿದನು. ಒಂದು ಸಹಸ್ರ ವರ್ಷದ ತಪಸ್ವಿಗೊಮ್ಮೆ ಅಗ್ನಿದೇವತೆಗೆ ತನ್ನ ಒಂದು ಶಿರವನ್ನು ಹವನ ಮಾಡುತ್ತಿದ್ದನು. ಈ ರೀತಿ ಒಂಬತ್ತು ಸಾವಿರ ವರ್ಷಗಳು ಮುಗಿದಾಗ ತನ್ನ ಒಂಬತ್ತು ಶಿರಗಳನ್ನು ಅರ್ಪಿಸಿದ್ದನು. ಹತ್ತುಸಾವಿರ ವರ್ಷಗಳು ಪೂರ್ತಿಗೊಂಡಾಗ ರಾವಣನು ತನ್ನ ಹತ್ತನೆಯ ಶಿರವನ್ನು ಅಗ್ನಿದೇವತೆಗೆ ಅರ್ಪಿಸಲು ಸಿದ್ದನಾದನು. ಆಗ ಸಕಲ ದೇವತೆಗಳ