ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೩೧


ಸಮೇತ ಬ್ರಹ್ಮದೇವನು ರಾವಣನ ಎದುರು ಪ್ರಕಟನಾಗಿ “ಹೇ ದಶಗ್ರೀವನೇ,
ನಾನು ಪ್ರಸನ್ನನಾಗಿದ್ದೇನೆ” ಎಂದನು.
ಶೀಘ್ರಂ ವರಯ ಧರ್ಮಜ್ಞ ವರೋ ಯಸ್ತೇsಭಿಕಾಂಕ್ಷಿತಃ |
ಕಂ ತೇ ಕಾಮಂ ಕರೋಮ್ಯದ್ಯ ನ ವೃಥಾ ತೇ ಪರಿಶ್ರಮಃ ‖೧೪‖

“ಹೇ ಧರ್ಮಜ್ಞನೇ, ನಿನಗೆ ಇಷ್ಟವಾದ ವರವನ್ನು ಸತ್ವರವಾಗಿ ಬೇಡಿಕೊ!
ನಿನ್ನ ಪರಿಶ್ರಮವು ವ್ಯರ್ಥವಾಗದಂತೆ ನಿನ್ನ ಯಾವ ಮನೋರಥವನ್ನು ನಾನು
ಈಡೇರಿಸಲಿ?”
ಸಂತೋಷಗೊಂಡ ರಾವಣನು ಶಿರಬಾಗಿ ಬ್ರಹ್ಮದೇವನಿಗೆ ಈ ರೀತಿ
ಎಂದನು:
ಭಗವನ್ಪ್ರಾಣಿನಾಂ ನಿತ್ಯಂ ನಾನ್ಯತ್ರ ಮರಣಾದ್ ಭಯಮ್ |
ನಾಸ್ತಿ ಮೃತ್ಯುಸಮಃ ಶತ್ರುರಮರತ್ವಮಹಂ ವ್ಯಣೇ ‖೧೬‖

“ಹೇ ಭಗವಾನ್, ಮರಣಕ್ಕಿಂತ ಹೆಚ್ಚಿನ ಭಯವು ಪ್ರಾಣಿಮಾತ್ರರಿಗಿಲ್ಲ.
ಮೃತ್ಯುವಿನಂತಹ ಶತ್ರು ಬೇರೆ ಯಾರೂ ಇಲ್ಲ; ಆ ಕಾರಣ ನಾನು ಅಮರತ್ವವನ್ನು
ಬೇಡುತ್ತೇನೆ.”
“ಪೂರ್ಣ ಅಮರತ್ವವು ದೊರಕುವದು ಸಾಧ್ಯವಿಲ್ಲ! ನೀನು ಇನ್ನೊಂದು
ವರವನ್ನು ಬೇಡು!” ಎಂದು ಬ್ರಹ್ಮನು ಹೇಳಿದಾಗ ರಾವನಣು ಕರಾಂಜಲಿಬದ್ಧನಾಗಿ
ಈ ರೀತಿ ಕೇಳಿದನು:
ಸುಪರ್ಣನಾಗಯಕ್ಷಾಣಾಂ ದೈತ್ಯದಾನವರಕ್ಷಸಾಮ್ |
ಅವಧ್ಯೋsಹಂ ಪ್ರಜಾಧ್ಯಕ್ಷ ದೇವತಾನಾಂ ಚ ಶಾಶ್ವತ ‖೧೯‖
ನಹಿ ಚಿಂತಾ ಮಮಾನ್ಯೇಷು ಪ್ರಾಣಿಷ್ವಮರಪೂಜಿತ |
ತೃಣಭೂತ ಹಿ ತೇ ಮನ್ಯೇ ಪ್ರಾಣಿನೋ ಮಾನುಷಾದಯಃ ‖೨೦‖

“ಹೇ ಪ್ರಜಾಧಿಪತಿಯೇ, ಹೇ ಸನಾತನನೇ, ಗರುಡ, ನಾಗ, ಯಕ್ಷ, ದೈತ್ಯ,
ದಾನವ, ರಾಕ್ಷಸ ಮತ್ತು ದೇವತೆಗಳಿಂದ ನನ್ನ ವಧೆ ನಡೆಯಕೂಡದು! ಹೇ
ದೇವಗಣ್ಯನೇ, ಇನ್ನಿತರ ಪ್ರಾಣಿಗಳ ಭಯ ನನಗಿಲ್ಲ, ಮನುಷ್ಯಾದಿ ಪ್ರಾಣಿಗಳು
ನನಗೆ ಕಸದ ಸಮಾನ” ಎಂದನು. ಆಗ ಬ್ರಹ್ಮನು, “ನೀನು ಕೇಳಿದುದೆಲ್ಲವೂ
ಆಗುವದು!” ಎಂಬ ಆಶ್ವಾಸನೆಯನ್ನಿತ್ತನು.