ಈ ಪುಟವನ್ನು ಪರಿಶೀಲಿಸಲಾಗಿದೆ

೨೫೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮಾಡಿರಿ! ನಾನು ನಿಮಗೆ ಶರಣು ಬಂದಿದ್ದೇನೆ."
ಅವಳ ಪ್ರಾರ್ಥನೆಯನ್ನು ಕೇಳಿ, ಆ ಮಹರ್ಷಿಯು ಬ್ರಹ್ಮವಿಷಯದ ತಪಸ್ಸಿದ್ಧಿಯಿಂದ 'ಬ್ರಹ್ಮದತ್ತ'ನೆಂಬ ಮಾನಸಪುತ್ರನನ್ನು ಆಕೆಗೆ ಕೊಟ್ಟನು. ಚೂಲಿಯು ಈ ಯಾಚಿತ ವರವನ್ನು ಸೋಮದೆಗೆ ಪ್ರಸನ್ನನಾಗಿ ಕೊಟ್ಟಿದ್ದಾನೆ. ಅವನು ಅವಳಿಗೆ ವರವನ್ನು ಬೇಡಲು ಹೇಳಿದನು.

೧೧. ಭೃಗು < ಸಗರ, ಕೇಶಿನಿ, ಸುಮತಿ

ಬಾಲಕಾಂಡ/೩೮

ವಿಶ್ವಾಮಿತ್ರನು ರಾಮನಿಗೆ ಸಗರ ರಾಜನ ವೃತ್ತಾಂತವನ್ನು ಹೇಳುತ್ತಿದ್ದಾನೆ-
ಪೂರ್ವದಲ್ಲಿ 'ಸಗರ'ನೆಂಬ ಧರ್ಮಾತ್ಮನು ಅಯೋಧ್ಯೆಯ ರಾಜನಾಗಿದ್ದನು; ಆತನಿಗೆ ಮಕ್ಕಳಿರಲಿಲ್ಲವಾದ್ದರಿಂದ ಸಂತಾನಪ್ರಾಪ್ತಿಗಾಗಿ ತುಂಬ ಹಂಬಲಿಸುತ್ತಿದ್ದನು. ಧರ್ಮ ನಿಷ್ಠೆಯುಳ್ಳ, ಸತ್ಯವಚನಿಯಾದ, ವಿದರ್ಭರಾಜಕನ್ಯೆಯಾದ ಕೇಶಿನಿಯು ಆತನ ಹಿರಿಯ ಮಡದಿಯಾಗಿದ್ದಳು. 'ಅರಿಷ್ಟನೇಮಿ'ಯ ಕನ್ಯೆಯಾದ ಸುಮತಿಯು ಆತನ ಎರಡನೆಯ ಮಡದಿಯಾಗಿದ್ದಳು. ಈ ಈರ್ವರನ್ನೂ ಕೂಡಿಕೊಂಡು ಸಗರರಾಜನು, ಹಿಮಾಲಯದ ಸಮೀಪದಲ್ಲಿರುವ 'ಭೃಗು-ಪ್ರಸ್ರವಣ' ಪರ್ವತದ ಮೇಲೆ ತಪಸ್ಸನ್ನಾಚರಿಸಿದನು. ಒಂದು ನೂರು ವರ್ಷಗಳ ತಪಸ್ಸನ್ನಾಚರಿಸಿದ ನಂತರ ಭೃಗುಮುನಿಯು ಸಂತುಷ್ಟನಾಗಿ ಇಂತೆಂದನು-

            ಸಗರಾಯ ವರಂ ಪ್ರಾದಾದ್ ಭೃಗುಃ ಸತ್ಯವತಾಂ ವರಃ ‖೬‖
            ಅಪತ್ಯಲಾಭಃ ಸುಮಹಾನ್ಭವಿಷ್ಯತಿ ತವಾನಘ |
            ಕೀರ್ತಿಂ ಚಾಪ್ರತಿಮಾಂ ಲೋಕೇ ಪ್ರಾಪ್ಸ್ಯಸೇ ಪುರುಷರ್ಷಭ ‖೭‖
            ಏಕಾ ಜನಯಿತಾ ತಾತ ಪುತ್ರಂ ವಂಶಕರಂ ತವ |
            ಷಷ್ಠಿ ಪುತ್ರಸಹಸ್ರಾಣಿ ಅಪರಾ ಜನಯಿಷ್ಯತಿ ‖೮‖


ಸತ್ಯವನ್ನು ನುಡಿಯುವುದರಲ್ಲಿ ಶ್ರೇಷ್ಠನಾಗಿದ್ದ ಭೃಗು ಮಹರ್ಷಿಯ ಸಗರ ರಾಜನಿಗೆ ಈ ರೀತಿ ವರವನ್ನು ಕೊಟ್ಟನು: "ಹೇ ಪಾಪರಹಿತನೇ, ನಿನಗೆ ಒಳ್ಳೆಯ ಸಂತಾನವಾಗುವದು. ಲೋಕದಲ್ಲಿ ನಿನಗೆ ಅಪ್ರತಿಮ ಕೀರ್ತಿಯು ದೊರೆಯುವುದು. ಹೇ ಸಗರನೇ, ನಿನ್ನ ಓರ್ವ ಪತ್ನಿಗೆ ವಂಶತಾರಕ ಮಗನು ಜನಿಸುವನು, ಇನ್ನೊಬ್ಬಳಿಗೆ ಅರವತ್ತು ಸಾವಿರ ಗಂಡುಮಕ್ಕಳಾಗುವರು."