ಈ ಪುಟವನ್ನು ಪರಿಶೀಲಿಸಲಾಗಿದೆ

ವರದಾನ

೨೫೫


ಭೃಗು ಮುನಿಯ ವಚನವನ್ನು ಕೇಳಿ ಸಂತುಷ್ಟರಾದ ಸಗರಪತ್ನಿಯರು, ಒಬ್ಬ ಮಗನು ಅವರೀರ್ವರಲ್ಲಿ ಯಾರಿಗೆ ಹುಟ್ಟುವನು? ಅರವತ್ತು ಸಾವಿರ ಪುತ್ರರು ಯಾರಿಗೆ ಹುಟ್ಟಲಿರುವರು? ಎಂಬುದನ್ನು ಅರಿತುಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದರು. ಆಗ ಮುನಿಯು ಅವರಿಬ್ಬರ ಇಚ್ಛೆಗೆ ಬಗ್ಗೆ ವಿಚಾರಿಸಿದನು.

            ಏಕೋ ವಂಶಕರೋ ವಾಸ್ತು ಬಹವೋ ವಾ ಮಹಾಬಲಾಃ |
            ಕೀರ್ತಿಮಂತೋ ಮಹೋತ್ಸಾಹಾಂ ಕಾ ವಾ ಕಂ ವರಮಿಚ್ಛತಿ ‖೧೨‖


ವಂಶತಾರಕ ಪುತ್ರನು ಬೇಕಿದ್ದರೆ ಒಬ್ಬನೇ ಹುಟ್ಟುವನು. ಕೀರ್ತಿಕರ, ಉತ್ಸಾಹವುಳ್ಳ ಮಹಾಬಲಾಢ್ಯ ಪುಷ್ಕಳ ಪುತ್ರರು ಹುಟ್ಟುವರು.
ಕೇಶಿನಿಯು ವಂಶತಾರಕ ಒಬ್ಬ ಪುತ್ರನನ್ನು ಬೇಡಿಕೊಂಡಳು. ಸುಮತಿಯು ಅರವತ್ತು ಸಾವಿರ ಪುತ್ರರನ್ನು ಬೇಡಿಕೊಂಡಳು. ಕೇಶಿನಿಗೆ 'ಅಸಮಂಜಸ'ನೆಂಬ ಒಬ್ಬ ಮಗನು ಹುಟ್ಟಿದನು. ಸುಮತಿಗೆ ಒಂದು 'ಗರ್ಭತುಂಬ'ವಾಯಿತು. ಆ ತುಂಬವು ಒಡೆದು ಅದರಿಂದ ಅರವತ್ತು ಸಾವಿರ ಪುತ್ರರು ಹೊರಬಂದರು.
ಇದು 'ಯಾಚಿತ' ವರವಾಗಿದೆ.

೧೨. ಬ್ರಹ್ಮದೇವ < ಭಗೀರಥ

ಬಾಲಕಾಂಡ/೪೨

ಗಂಗೆಯನ್ನು ದೊರಕಿಸಲು ಭಗೀರಥನು ಆಚರಿಸಿದ ತಪಸ್ಸಿನ ಬಗ್ಗೆ ವಿಶ್ವಾಮಿತ್ರನು ರಾಮನಿಗೆ ತಿಳಿಸುತ್ತಿದ್ದಾನೆ.
ಧರ್ಮನಿಷ್ಠನಾದ ಭಗೀರಥನಿಗೆ ಸಂತಾನವಿಲ್ಲದ ಕಾರಣ ಆತನು ತನ್ನ ರಾಜ್ಯವನನು ಮತ್ತು ಪ್ರಜೆಗಳನ್ನು ಮಂತ್ರಿಗಳ ಆಡಳಿತಕ್ಕೆ ಒಪ್ಪಿಸಿ, ಗಂಗೆಯನ್ನು ಪಡೆದು ಪಿತೃಗಳಿಗೆ ಸರ್ಗವನ್ನು ದೊರಕಿಸಿಕೊಡಬೇಕೆಂಬ ಉದ್ದೇಶಿದಿಂದ ಗೋಕರ್ಣದಲ್ಲಿ ದೀರ್ಘತಪಸ್ಸನ್ನಾರಂಭಿಸಿದನು. ಪಂಚಾಗ್ನಿ ಸಾಧನೆಯನ್ನು ಕೈಕೊಂಡು ಆತನು ತಿಂಗಳಿಗೊಂದು ಸಲ ಮಾತ್ರ ಆಹಾರವನ್ನು ಭಗವಂತನಾದ ಬ್ರಹ್ಮದೇವನು ಪ್ರಸನ್ನನಾಗಿ ದೇವಗಣ ಸಮೇತನಾಗಿ ಭಗೀರಥನ ಭೇಟಿಗಾಗಿ ಬಂದು ಈ ರೀತಿ ಎಂದನು-

            ಭಗೀರಥ ಮಹಾರಾಜ ಪ್ರೀತಸ್ತೇsಹಂ ಜನಾಧಿಪ |
            ತಪಸಾ ಚ ಸುತಪ್ತೇನ ವರಂ ವರಯ ಸುವ್ರತ ‖೧೬‖