ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೭೩


ಅಪಹರಿಸಿದ್ದನು; ಆಗ ಕೃಷ್ಣನು ನರಕಾಸುರನನ್ನು ಗೆದ್ದು ಈ ಕರ್ಣಕುಂಡಲಗಳನ್ನು
ಅದಿತಿಗೆ ಮರಳಿ ತಂದುಕೊಟ್ಟನು- ಎಂದು ಮಹಾಭಾರತದ ಉದ್ಯೋಗಪರ್ವ
ಹೇಳುತ್ತದೆ.
ಇವಳು ಓರ್ವ ವೈದಿಕ ದೇವತೆಯಾಗಿದ್ದು ಹನ್ನೆರಡು ಆದಿತ್ಯರ ಮಾತೆ
ಯಾಗಿದ್ದಾಳೆ. ಋಗ್ವೇದದಲ್ಲಿ ಇವಳಿಗೆ ವಿಶ್ವಮಾತೆ ಎಂದು ಸಂಬೋಧಿಸಿದ್ದಾರೆ.
ಇವಳು ಆದಿತ್ಯರ ಮಾತೆಯಾಗಿದ್ದರಿಂದ ಇವಳ ತೇಜಸ್ಸನ್ನು ಗೌರವಿಸಿದ್ದಾರೆ.

೬. ಅನರಣ್ಯ

ಅನರಣ್ಯನು ಇಕ್ಷ್ವಾಕು ಕುಲದಲ್ಲಿಯ ಒಬ್ಬ ರಾಜ. ಈತನು ಬಾಣನೆಂಬಾತನ
ಮಗನಾಗಿದ್ದು, ಇವನು ಪೃಥುವಿನ ಪಿತನಿದ್ದನು- ಎಂದು ವಾಲ್ಮೀಕಿಯು ಬಾಲಕಾಂಡ
೭೦/ ೨೩-೨೪ ಸರ್ಗದಲ್ಲಿ ಹೇಳಿದ್ದಾನೆ. ಅನರಣ್ಯನು ತ್ರಸದಸ್ಯುವಿನ ಮಗನೆಂದು
ಭಾಗವತದಲ್ಲಿದೆ; ಈತನು ಸಂಭೂತನ ಮಗನೆಂದು ಕೆಲವು ಪುರಾಣಗಳಲ್ಲಿಯ
ಮತವಿದೆ. ಈತನು ಅಯೋಧ್ಯೆಯನ್ನು ಆಳುತ್ತಿದ್ದಾಗ ರಾವಣನು ಯುದ್ಧಮಾಡಿ
ಈತನ ಸೈನ್ಯವನ್ನೆಲ್ಲ ಚದುರಿಸಿದನು. ಹಾಗೆ ನೋಡಿದರೆ ಅನರಣ್ಯನು ವೀರನೂ
ಪರಾಕ್ರಮಿಯೂ ಆಗಿದ್ದನು; ಏಕೆಂದರೆ, ಈತನು ಮಾರೀಚ, ಸಾರಣ, ಶುಕ,
ಪ್ರಹಸ್ತ ಮುಂತಾದ ರಾವಣನ ಅಮಾತ್ಯರನ್ನು ಪರಾಜಯಗೊಳಿಸಿದ್ದನು.
ಹೀಗಿದ್ದರೂ ರಾವಣನು ತನ್ನ ಅಂಗೈಯಿಂದ ಅನರಣ್ಯನ ತಲೆಗೆ ಕೊಟ್ಟ ಒಂದೇ
ಏಟಿಗೆ ಈತನು ರಥದಿಂದ ಭೂಮಿಯತ್ತ ಕೆಳಗುರುಳಿದನು. ಮುಮುರ್ಷೂ
ಅವಸ್ಥೆಯಲ್ಲಿರುವಾಗ ಅನರಣ್ಯನು ರಾವಣನಿಗೆ ಶಾಪವನ್ನು ಕೊಟ್ಟನು. ಈತನು
ಯುದ್ಧವನ್ನು ತ್ಯಜಿಸಿ ತಪಸ್ಸಿನಲ್ಲಿ ತೊಡಗಿದಾಗ ರಾವಣನು ಇವನನ್ನು ವಧಿಸಿದನು.
ಮರಣಪೂರ್ವದಲ್ಲಿ ಅನರಣ್ಯನು ಶಾಪವನ್ನು ಕೊಟ್ಟನೆಂದು ಕೂಡ ಒಂದು
ಉಲ್ಲೇಖವಿದೆ. ವಾಲ್ಮೀಕಿರಾಮಾಯಣದಲ್ಲಿ ಮಾತ್ರ ಇದಕ್ಕೆ ಆಧಾರ ದೊರೆಯುತ್ತಿಲ್ಲ.
ಇದಕ್ಕೆ ಪ್ರತಿಯಾಗಿ 'ಎಲೈ ರಾಕ್ಷಸನೇ, ನಾನು ಎಂದಿಗೂ ಯುದ್ಧವನ್ನು ಬಿಟ್ಟು
ಹಿಂಜರಿದಿಲ್ಲ; ಯುದ್ಧ ಮಾಡುತ್ತಿರುವಾಗಲೇ ನೀನು ನನ್ನನ್ನು ವಧಿಸಿರುವೆ'
ಎಂಬ ಉಲ್ಲೇಖವಿದೆ (ಉತ್ತರಕಾಂಡ ೧೯/೨೮)

೭. ಅನಸೂಯಾ

ಇವಳು ಕರ್ದಮ ಹಾಗೂ ದೇವಹೂತಿ ದಂಪತಿಗಳ ಕನ್ಯೆಯಾಗಿದ್ದು
ಸ್ವಾಯಂಭುವ ಮತ್ತು ವೈವಸ್ವತ ಮನ್ವಂತರದ ಬ್ರಹ್ಮಮಾನಸಪುತ್ರನಾದ ಅತ್ರಿಮುನಿಯ