ಈ ಪುಟವನ್ನು ಪ್ರಕಟಿಸಲಾಗಿದೆ

೩೭೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಭಾರ್ಯೆಯಾಗಿದ್ದಳು. ಪೌರಾಣಿಕ ವಾಙ್ಮಯದಲ್ಲಿ 'ಪತಿವ್ರತೆ' ಎಂದು ಇವಳನ್ನು
ಉಲ್ಲೇಖಿಸಲಾಗಿದೆ. ಮೂರು ನೂರು ವರ್ಷಗಳ ಕಾಲ ಯಾವ ಆಹಾರವನ್ನೂ
ಸೇವಿಸದೆ ತಪಸ್ಸನ್ನಾಚರಿಸಿ ಶಂಕರನ ಕೃಪಾಪ್ರಸಾದವನ್ನು ಈಕೆ ಪಡೆದಳು. ಆಗ
ಇವಳಿಗೆ ದತ್ತಾತ್ರೇಯ, ದುರ್ವಾಸ ಹಾಗೂ ಚಂದ್ರ ಎಂಬ ಮೂರು
ಮಕ್ಕಳು ಹುಟ್ಟಿದರು. ಚಿತ್ರಕೂಟದ ಮೇಲೆ ಹರಿಯುವ ಗಂಗೆಯನ್ನು ಇವಳು
ಪ್ರವೃತ್ತಗೊಳಿಸಿದಳು. ಮಾಂಡವ್ಯ ಋಷಿಯನ್ನು ಶೂಲಕ್ಕೇರಿಸಿದ ಸಮಯದಲ್ಲಿ,
ಆ ಶೂಲಕ್ಕೆ ಕತ್ತಲೆಯಲ್ಲಿ ಓರ್ವ ಋಷಿಪತ್ನಿಯ ಧಕ್ಕೆ ತಗುಲಿತು. ಆಗ ಮಾಂಡವ್ಯನು
ಆ ಋಷಿಪತ್ನಿಗೆ 'ಸೂರ್ಯೋದಯವಾಗುತ್ತಲೇ ನೀನು ವಿಧವೆಯಾಗುವೆ' ಎಂಬ
ಶಾಪವನ್ನಿತ್ತನು. ಅನಸೂಯೆಯು ಆ ಋಷಿಪತ್ನಿಯ ಗೆಳತಿಯಾದ್ದರಿಂದ
ಸೂರ್ಯೋದಯವಾಗದಂತೆ ಮಾಡಿದಳು. ಹೀಗಾದ್ದರಿಮದ ಲೋಕದ ವ್ಯವಹಾರ
ಗಳು ನಿಂತುಹೋದವು. ಆ ಋಷಿಪತ್ನಿಯ ವೈಧವ್ಯದ ಶಾಪನಿವಾರಣೆಯಾದ
ನಂತರ ಸೂರ್ಯೋದಯವಾಗಲು ಅನಸೂಯೆಯು ಅವಕಾಶ ಕೊಟ್ಟಳು.
ಅನಸೂಯೆಯು ದಕ್ಷಕನ್ಯೆಯಾಗಿದ್ದಳು ಎಂಬೊಂದು ಉಲ್ಲೇಖವೂ ಇದೆ.
ಅನಸೂಯೆಯ ಪತಿಯಾದ ಅತ್ರಿಮುನಿಯು ಇವಳ ಬಗ್ಗೆ ಗೌರವದಿಂದ
ಉದ್ಗರಿಸಿದ್ದಾನೆ. ಅವನು ರಾಮನಿಗೆ 'ಹೇ ರಾಮನೇ, ಹತ್ತು ವರ್ಷಗಳ ಕಾಲ
ಮಳೆಯಾಗದೆ ಜನರು ಸತತವಾಗಿ ಪರಿತಪಿಸುತ್ತಿದ್ದಾಗ ಈ ಅನಸೂಯೆಯು
ಫಲಮೂಲಗಳನ್ನು ನಿರ್ಮಿಸಿದಳು; ಈ ಆಶ್ರಮದತ್ತ ಗಂಗೆಯನ್ನು ತರಿಸಿದಳು.
ಇವಳು ಕಠೋರ ತಪವನ್ನು ಆಚರಿಸುವವಳಾಗಿದ್ದು ಕೆಲವು ಕಟ್ಟುನಿಯಮಗಳಿಂದ
ಭೂಷಿತಳಾಗಿದ್ದಾಳೆ. ಇವಳು ಹತ್ತು ಸಾವಿರ ವರ್ಷಗಳ ಉಗ್ರತಪಸ್ಸನ್ನು
ಪೂರ್ತಿಗೊಳಿಸಿದ್ದಾಳೆ. ಈ ಅನಸೂಯೆಯ ವ್ರತಗಳ ಬಲದಿಂದ ಋಷಿಗಳು
ಮಾಡುತ್ತಿರುವ ತಪಸ್ಸಿನಲ್ಲಿ ಬರುವ ವಿಘ್ನಗಳು ಇಲ್ಲದಂತಾಗಿವೆ. ದೇವಕಾರ್ಯಕ್ಕೆಂದು
ಹೆಣಗುತ್ತಿದ್ದಾಗ ಹತ್ತು ರಾತ್ರಿಗಳನ್ನು ಒಂದೇ ರಾತ್ರಿಯನ್ನಾಗಿ ಮಾಡಿದ
ಅನುಸೂಯೆಯು ನಿನಗೆ ಮಾತೆಯ ಸಮಾನನಾಗಿದ್ದಾಳೆ' ಎಂದು ಹೇಳಿದನು.
ಇವಳ ಸತೀತ್ವದ ಬಗ್ಗೆ ಮತ್ಸರವನ್ನು ಹೊಂದಿ, ಉಮಾ ಲಕ್ಷ್ಮಿ ಮತ್ತು
ಸಾವಿತ್ರಿಯರು ತಮ್ಮ ಪತಿಯರನ್ನು ಅನಸೂಯೆಯ ಪಾತಿವ್ರತ್ಯವನ್ನು ಕಳೆಯಲು
ಕಳುಹಿದರು. ಬ್ರಹ್ಮ, ವಿಷ್ಣು, ಮಹೇಶ- ಈ ಮೂವರೂ ಅನಸೂಯೆಯತ್ತ
ಬಂದು 'ನೀನು ನಗ್ನಳಾಗಿ ನಮಗೆ ಭಿಕ್ಷೆ ನೀಡು!' ಎಂದು ಬೇಡಿದರು. ಆಗ
ಅನಸೂಯೆಯು ತನ್ನ ಪತಿಯ ಚರಣತೀರ್ಥವನ್ನು ಇವರ ಮೇಲೆ ಸಿಂಪಡಿಸಿದಳು.
ಕೂಡಲೇ ಈ ಮುವರೂ ಅರ್ಭಕರಾದರು. ಆಗ ಅನಸೂಯೆಯು ನಗ್ನಳಾಗಿ