ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೩೮೫ ನೋಟವು ಕಾಮಭಾವನೆಯದೆಂದೆನಿಸಿತು. ಚಿತ್ರಸೇನಗಂಧರ್ವರನ್ನು ಕರೆಯಿಸಿ ಇಂದ್ರನು ಆತನೊಡನೆ ವಸ್ತಾಲಂಕಾರ ಭೂಷಿತಳಾದ ಉರ್ವಶಿಯನ್ನು ಅರ್ಜುನನ ಹೋಗಲು ಹೇಳಿಕಳುಹಿದನು. ಆಕೆಯು ಅರ್ಜುನನ ಬಳಿ ಹೋದಳು. ಆಗ ಅರ್ಜುನನು ತನ್ನ ದೃಷ್ಟಿಕೋನವನ್ನು ಆಕೆಗೆ ತಿಳಿಸಿದನು. ಹೀಎ ಅವಳ ಇಚ್ಛಾಭಂಗವಾದ್ದರಿಂದ ಒಂದು ವರ್ಷದವರೆಗೆ ನೀನು ಷಂಡನಾಗಿರು!” ಎಂದು ಅರ್ಜುನನಿಗೆ ಶಾಪಕೊಟ್ಟಳು. “ಉರ್ವಶೀತೀರ್ಥ' ಎಂಬ ಹೆಸರಿನ ಒಂದು ಪವಿತ್ರ ತೀರ್ಥಸ್ಥಾನವಿದೆ. ೧೮. ಋಚೀಕ - ಋಚೀಕನು ಭಾರ್ಗವಕುಲದಲ್ಲಿ ಜನಿಸಿದ ಒಬ್ಬ ಪ್ರಖ್ಯಾತ ಋಷಿಯಾಗಿದ್ದನು. ಬ್ರಹ್ಮಾಂಡಪುರಾಣದ ಪ್ರಕಾರ ಇವನು ಔರ್ವನೆಂಬಾತನ ತೊಡೆಯೊಡೆದು ಹೊರಗೆ ಬಂದ ಪುತ್ರ, ಬಾಲ್ಯದಿಂದ ಈತನ ಒಲವು ವೇದಾನುಷ್ಠಾನ, ತಪಸ್ಸುಗಳತ್ತ ಇತ್ತು. ತೀರ್ಥಾಟನೆಯನ್ನು ಮಾಡುತ್ತ ನಡೆದ ಈತನು, ವಿಶ್ವಾಮಿತ್ರಿ ಎಂಬ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಗಾಧಿಕನ್ಯಂಯಾದ ಸತ್ಯವತಿಯನ್ನು ಕಂಡನು. ಅವಳ ಲಾವಣ್ಯಕ್ಕೆ ಮನಸೋತು ಋಚೀಕನು ಗಾಧಿಯನ್ನು ಸತ್ಯವತಿಗಾಗಿ ಕೇಳಿದನು. ಆಗ ಗಾದಿಯು, ಒಂದು ಸಾವಿರ ಕಪ್ಪುಕಿವಿಗಳುಳ್ಳ ಕುದುರೆಗಳನ್ನು ಕನ್ಯಾಶುಲ್ಕವಾಗಿ ಋಚೀಕನಿಗೆ ತರಲು ಹೇಳಿದನು. ಆಗ ವರುಣನನ್ನು ಪ್ರಾರ್ಥಿಸಿ ಅಷ್ಟು ಕುದುರೆಗಳನ್ನು ದೊರಕಿಸಿಕೊಂಡು ಸತ್ಯವತಿಯನ್ನು ಪಡೆದನು. ಸತ್ಯವತಿಯು ಪುತ್ರಪ್ರಾಪ್ತಿಯ ಅಭಿಲಾಷೆಯಿಂದ ತನಗಾಗಿ ಮತ್ತು ತನ್ನ ತಾಯಿಗೆಂದು ವರಗಳನ್ನು ಬೇಡಿಕೊಂಡಳು. ಆಗ ಋಚೀಕನು ಅಭಿಮಂತ್ರಿಸಿದ ಎರಡು 'ಚರು' (ಪ್ರಸಾದಾನ) ಗಳನ್ನು ಸತ್ಯವತಿಯ ಕೈಗೆ ಕೊಟ್ಟನು. ಯಾವ ರೀತಿ, ಯಾರು, ಯಾವ ಚರುವನ್ನು ಭಕ್ಷಿಸಬೇಕು ಎಂಬ ಬಗ್ಗೆ ಸೂಚಿಸಿದನು. ಪ್ರತ್ಯಕ್ಷದಲ್ಲಿ ಈ ಚರುಗಳ ಬದಲಾವಣೆ ನಡೆದುಹೋಯಿತು. ಹೀಗಾದ್ದರಿಂದ ಸತ್ಯವತಿಗೆ ಜಮದಗ್ನಿ ಮುಂತಾದ ಒಂದು ನೂರು ಪುತ್ರರಾದರು; ಗಾಧಿಗೆ ವಿಶ್ವಾಮಿತ್ರನಾದನು. ಪೃಥ್ವಿಯನ್ನು ಕ್ಷತ್ರಿಯ ರಹಿತವಾಗಿ ಮಾಡಿದ ಪರಶುರಾಮನು ಈತನ ಮೊಮ್ಮಗನು. ಈ ಋಚೀಕನನ್ನು ಅಂಬರೀಷನು ಭ್ರಗುತುಂಗ ಪರ್ವತದ ಮೇಲೆ ಭೇಟಿಯಾದಾಗ ಒಂದು ಲಕ್ಷ ಗೋವುಗಳನ್ನು ತೆಗೆದುಕೊಂಡು ಒಬ್ಬ ಮಗನನ್ನು ನರಬಲಿಯಾಗಲು ಕೊಡಲು ಕೇಳಿದ್ದನು. ಋಚೀಕನು ಸಮ್ಮತಿಸಲಿಲ್ಲ.