ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೧೯. ಐರಾವತ ಈತನು ಇರಾವಾನನ ಮಗನು. ಪುರಾಣವಾಜ್ಯದಲ್ಲಿ ಈತನಿಗೆ ಇಂದ್ರನು ಆನೆ ಎಂದಿದ್ದಾನೆ. ಈತನು ಸಮುದ್ರಮಥನದಿಂದ ಉತ್ಪನ್ನನಾಗಿ ಇಂದ್ರನ ವಾಹನನಾದನು. ಈ ಐರಾವತವು ಬಿಳಿಯ ಬಣ್ಣದಿದ್ದಿದ್ದು ಇದಕ್ಕೆ ನಾಲ್ಕು ದಂತಗಳಿವೆ. ಇಂದ್ರನು ಈ ಐರಾವತವನ್ನು ಪೂರ್ವದಿಕ್ಕಿನ ಅಧಿಪತಿಯನ್ನಾಗಿ ಮಾಡಿದನು. ಇಂದ್ರ-ಕೃಷ್ಟರಲ್ಲಿಯ ಯುದ್ದದಲ್ಲಿ ಗರುಡನು ಈ ಐರಾವತವನ್ನು ಸೋಲಿಸಿದನು. ೨೦. ಕಂಡು ಈತನು ಸತ್ಯವಾದಿಯೂ ತಪೋಬಲವಿದ್ದ ಮಹರ್ಷಿಯೂ ಆಗಿದ್ದನು. ಈತನು ಬಲು ಸಿಡುಕನಿದ್ದನು. ಕಟ್ಟುನಿಟ್ಟಿನಿಂದ ನಿಯಮಗಳನ್ನು ಪಾಲಿಸುವದರಲ್ಲಿ ಯಾರೂ ಇವನನ್ನು ಮೀರಿಸುವಂತೆ ಇರಲಿಲ್ಲ. ಈತನು ಬ್ರಹ್ಮರ್ಷಿಯಾಗಿದ್ದನು. ಈತನ ತಪೋಭಂಗವನ್ನು ಮಾಡಲು ಇಂದ್ರನು 'ಪ್ರಮೇಚಾ' ಹೆಸರಿನ ಓರ್ವ ಅಪ್ಪರೆಯನ್ನು ಕಳುಹಿಸಿದನು. ಕೌಸಲ್ಯರನ್ನು ಸಂತೈಸುವಾಗ ರಾಮನು ಪಿತನ ವಚನವನ್ನು ಪಾಲಿಸುವದೇ ಮಗನ ಕರ್ತವ್ಯವೆಂದು ಹೇಳುವಾಗ ಕಂಡುವಿನ ಉದಾಹರಣೆಯನ್ನು ಕೊಟ್ಟಿದ್ದಾನೆ. ತಂದೆಯ ಆಜ್ಞೆಯನ್ನು ಪಾಲಿಸುವದಕ್ಕಾಗಿ ಗೋವಧೆಯನ್ನು ಮಾಡಿದನು (ಅಯೋಧ್ಯಾಕಾಂಡ೨೧-೨೩). ಈತನ ಹತ್ತುವರ್ಷದ ಮಗನು ಒಂದು ಅರಣ್ಯದಲ್ಲಿ ಮೃತನಾದನು; ಆಗ ಕಂಡವು ತನ್ನ ಶಾಪದಿಂದ ಆ ಅರಣ್ಯವನ್ನು ತೃಣರಹಿತ, ವೃಕ್ಷರಹಿತ, ನೀರೂ ಸಹ ಇರದ ರಣಭೂಮಿಯನ್ನಾಗಿ ಮಾಡಿದನು. ೨೧. ಕಬಂಧ ಈತನು ದಂಡಕಾರಣ್ಯದಲ್ಲಿದ್ದ ರಾಕ್ಷಸನಾಗಿದ್ದನು. ಇಂದ್ರನ ವಜ್ರದ ಏಟಿನಿಂದ ಈತನ ತೊಡೆಗಳು ಮತ್ತು ಶಿರವು ಶರೀರದಲ್ಲಿ ಸಿಕ್ಕಿಕೊಂಡ ಕಾರಣ ಇವನು ಶಿರವಿಲ್ಲದವನಾದನು. ಅಂದಿನಿಂದ ಈತನಿಗೆ ಕಬಂಧನೆಂಬ ಹೆಸರು ಬಂದಿತು. ಹೊಟ್ಟೆಯನ್ನು ತುಂಬಿಸಲು ಇವನು ಯೋಜನದಷ್ಟು ಉದ್ದವಾದ ಕೈಗಳನ್ನು ಪಡೆದುಕೊಂಡನು. ಆ ಪರಿಸರದಲ್ಲಿ ಸಂಚರಿಸುವ ಪ್ರಾಣಿಗಳನ್ನು ಹಿಡಿದುಇವನು ಭಕ್ಷಿಸುತ್ತಿದ್ದನು. 'ರಾಮನಿಂದ ಸಾವು ಬಂದನಂತರ ನೀನು ಮೊದಲಿನ ರೂಪವನ್ನು ಪಡೆಯುವ” ಎಂದು ಇಂದ್ರನು ಇವನಿಗೆ ಹೇಳಿದ್ದನು. ಈ ರೀತಿ ದಿನೇದಿನೇ