ಈ ಪುಟವನ್ನು ಪ್ರಕಟಿಸಲಾಗಿದೆ

೪೦೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಶಾಪ ಕ್ರಮಸಂಖ್ಯೆ ೫೯ ಭಾರ್ಗವ < ದಂಡ; ೬೦ ಭಾರ್ಗವ <
ದಂಡಕಾರಣ್ಯ- ನೋಡಿರಿ.

೫೪. ದಶರಥ

ದಶರಥನು ಇಕ್ಷ್ವಾಕುಕುಲೋತ್ಪನ್ನ ಅಜ ರಾಜನ ಮಗ. ಇವನು
ಅಯೋಧ್ಯೆಯ ರಾಜ. ಪದ್ಮಪುರಾಣದಲ್ಲಿ ಈತನ ತಂದೆಯ ಹೆಸರು ಪ್ರಜಾ
ಪಾಲನೆಂದಿದೆ. ಈತನು ವೇದಜ್ಞನೂ, ಸರ್ವಸಂಗ್ರಹಿಯೂ, ದೂರದೃಷ್ಟಿಯವನೂ,
ಲೋಕಪ್ರಿಯನೂ, ಪರಾಕ್ರಮಿಯೂ, ಋಷಿಸರಿಸಮಾನನೂ, ಜಿತೇಂದ್ರಿಯನೂ,
ಧನಧಾನ್ಯಗಳ ವಿಪುಲಸಂಗ್ರಹ ಹೊಂದಿದವನೂ, ಅಲ್ಲದೆ ಮನುವಿನಂತೆ ಸಕಲ
ರೀತಿಯಲ್ಲೂ ಪ್ರಜಾಪರಿಪಾಲಕನೂ ಆಗಿದ್ದನು. ಈತನ ರಾಜ್ಯದಲ್ಲಿ ನಾಲ್ಕು
ವರ್ಣದವರೂ ಸಹಿಷ್ಣುತೆಯಿಂದ ಬಾಳುತ್ತಿದ್ದರು. ಗುಣವಂತ ಅಮಾತ್ಯರ
ಸಹಾಯದಿಂದ ಮತ್ತು ಗೂಢಾಚಾರರ ಸೇವೆಯಿಂದ ಇವನು ಮನುನಿರ್ಮಿತವಾದ
ಅಯೋಧ್ಯಾನಗರವನ್ನೂ ಅದರ ವೈಭವವನ್ನೂ ವೃದ್ಧಿಗೊಳಿಸಿದನು. ಕೌಸಲ್ಯೆ,
ಸುಮಿತ್ರೆ, ಕೈಕೇಯಿ ಇವರೆಲ್ಲ ಇವನ ರಾಣಿಯರೆಂದು ಸುಪರಿಚಿತರಾಗಿದ್ದಾರೆ.
ಪದ್ಮಪುರಾಣದಲ್ಲಿ ಕೈಕೇಯಿಯ ಉಲ್ಲೇಖವಿಲ್ಲ; ಸುರೂಪಾ ಮತ್ತು ಸುವೇಷಾ
ಎಂಬ ಇನ್ನೆರಡು ಹೆಸರುಗಳ ಉಲ್ಲೇಖವಿದ್ದು, ಅವರಿಬ್ಬರಿಗೂ ಒಬ್ಬೊಬ್ಬ
ಮಗನಿದ್ದನೆಂದು ತಿಳಿಸಲಾಗಿದೆ. ದಶರಥನು ಅತ್ಯಂತ ವಿಷಯಲಂಪಟನಿದ್ದನು.
ಆದ್ದರಿಂದಲೇ ವೃದ್ದಾಪ್ಯ ಕಾಲದಲ್ಲಿಯೂ ಈತನು ಕೈಕೇಯಿಯೊಡನೆ, ಕೈಕೇಯಿಯ
ಮಗನಿಗೆ ರಾಜ್ಯ ಕೊಡಬೇಕೆಂಬ ಅವಳ ತಂದೆಯ ಶರತ್ತನ್ನು ಮನ್ನಿಸಿ, ಮದುವೆ
ಮಾಡಿಕೊಂಡನು. ಅನಂತರ ದಶರಥನು ಅಶ್ವಮೇಧಯಜ್ಞವನ್ನು ಮಾಡಿದನು.
ಇವನಿಗೆ ಬಹಳ ಕಾಲದವರೆಗೆ ಮಕ್ಕಳಾಗಲಿಲ್ಲ. ಆದ್ದರಿಂದ ಇವನು ಪುತ್ರಕಾಮೇಷ್ಟಿ
ಯಜ್ಞವನ್ನು ಮಾಡಿದನು. ಈ ಯಜ್ಞಕ್ಕೆ ಋಷ್ಯಶೃಂಗನ ಸಹಾಯವು ಆವಶ್ಯಕವಿತ್ತು.
ದಶರಥನು ತನ್ನ ಕನ್ಯೆಯಾದ ಶಾಂತಾ ಇವಳನ್ನು ಋಷ್ಯಶೃಂಗನಿಗೆ ಮದುವೆ
ಮಾಡಿಕೊಟ್ಟನು.
ಕೈಕೇಯಿಗೆ ವರವನ್ನು ಮೊದಲು ಕೊಟ್ಟಿದ್ದರಿಂದ, ರಾಮನಿಗೆ ಯೌವ
ರಾಜ್ಯಾಭಿಷೇಕವನ್ನು ಮಾಡಬೇಕೆಂಬ ಇವನ ಮನೋರಥವು ಭಗ್ನವಾಯಿತು.
ರಾಮನ ಬಗ್ಗೆ ದಶರಥನಿಗೆ ಬಹಳ ಪ್ರೀತಿ ಇತ್ತು. ರಾಮನ ಯೌವರಾಜ್ಯಾಭಿಷೇಕಕ್ಕೆ
ಭರತನಿಂದ ಅಡಚಣೆ ಬರಬಹುದೆಂಬ ಕಲ್ಪನೆಯು ದಶರಥನಿಗೆ ಇತ್ತು. ಹೀಗಿದ್ದುದ
ರಿಂದ ಭರತನು ತನ್ನ ತಾತನ ಮನೆಗೆ ಹೋದಾಗ ಯೌವರಾಜ್ಯಾಭಿಷೇಕವನ್ನು