ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೦೯


ಪೂರೈಸಬೇಕೆಂಬ ಆತುರತೆ ಈತನಿಗೆ ಇತ್ತು. ಕೈಕೇಯಿಯು ವರಗಳನ್ನು
ಬೇಡಿಕೊಂಡ ಕಾರಣ ಈತನ ಯೋಜನೆಯು ಮಣ್ಣುಪಾಲಾಯಿತು. ಶ್ರವಣನ
ಶಾಪದ ಭೀತಿಯು ದಶರಥನನ್ನು ಹಗಲಿರುಳೂ ಕಾಡುತ್ತಿತ್ತು. ಈಗ ಈ ವರದಿಂದ
ಅದು ನಿಜವೆನಿಸಿತು. ಕೊಡಬೇಕಾದ ವರಗಳ ಬಗ್ಗೆ ಕೈಕೇಯಿಯಿಂದ ಅರಿತುಕೊಳ್ಳದೆ,
ಅದನ್ನು ಪೂರ್ತಿಗೊಳಿಸುವ ವಚನವನ್ನು ದಶರಥನು ಕೊಟ್ಟನು. ಹೀಗಾದ್ದರಿಂದ
ಆ ವರಗಳು ಎಷ್ಟೇ ಕಟುವಾಗಿದ್ದರೂ ದಶರಥನಿಗೆ ವಿಧಿಯಿಲ್ಲದಂತಾಯಿತು.
ಅವನು ಕೈಕೇಯಿಗೆ ಪರಿಪರಿಯಾಗಿ ಸಮಜಾಯಿಸಲು ಯತ್ನಿಸಿದನು;
ಪ್ರಾರ್ಥಿಸಿದನು, ಬೆದರಿಕೆಯನ್ನು ಹಾಕಿದನು. ಆದರೆ, ಯಾವ ಪ್ರಯೋಜನವೂ
ಆಗಲಿಲ್ಲ. ದಶರಥನು ಕೈಕೇಯಿಯ ಕಾಲಿಗೆ ಬಿದ್ದನು. ಇಷ್ಟಾದರೂ ಕೈಕೇಯಿಯು
ತನ್ನ ಹಟವನ್ನು ಬಿಡಲೇ ಇಲ್ಲ. ರಾಮನು ಪಿತನ ಆಜ್ಞೆಯನ್ನು ಯಥಾರ್ಥವಾಗಿ
ಪಾಲಿಸುವ ನಿರ್ಧಾರವನ್ನು ಮಾಡಿದ್ದರಿಂದ ಈತನಿಗೆ ಪುತ್ರವಿಯೋಗವು
ತಪ್ಪದಂತಾಯಿತು. ಪುತ್ರ ವಿರಹವನ್ನು ಸಹಿಸುವ ಮನೋಬಲ ತನ್ನಲ್ಲಿರದ
ಕಾರಣ ದಶರಥನು ಮೃತನಾದನು. ಭರತನು ಅಯೋಧ್ಯೆಗೆ ಮರಳುವವರೆಗೆ
ಇವನ ಪಾರ್ಥಿವ ದೇಹವನ್ನು ಎಣ್ಣೆಯಲ್ಲಿಟ್ಟು ರಕ್ಷಿಸಲಾಯಿತು. ವಸಿಷ್ಠನು ಹೇಳಿದ
ಪ್ರಕಾರ ಭರತನು ದಶರಥನ ಅಂತ್ಯಕ್ರಿಯೆಯನ್ನು ನೆರವೇರಿಸಿದನು. ವರವನ್ನು
ಕೈಕೇಯಿಗೆ ಕೊಟ್ಟಿದ್ದಕ್ಕಾಗಿ ದಶರಥನು ಪಶ್ಚಾತ್ತಾಪ ಪಡಬೇಕಾಯಿತು. ಕೈಕೇಯಿ
ಯೊಡನೆ ಇದ್ದ ಎಲ್ಲ ಸಂಬಂಧಗಳನ್ನೂ ತೊರೆದುಬಿಟ್ಟನು.
ಸೀತೆಯು ಅಗ್ನಿದಿವ್ಯವನ್ನು ಮಾಡಿದನಂತರ ಮಹೇಶ್ವರನ ಕೃಪೆಯಿಂದ
ಸ್ವರ್ಗಸ್ಥನಾದ ದಶರಥನು ಭೂಲೋಕಕ್ಕೆ ಬಂದು ರಾಮನಿಗೆ ದರ್ಶನವನ್ನಿತ್ತನು.
'ನೀನು ನನ್ನನ್ನು ಉದ್ಧರಿಸಿದೆ!' ಎಂಬ ಧನ್ಯೋದ್ಗಾರಗಳನ್ನು ನುಡಿದನು.
ರಾಮನ ವಿನಂತಿಯನುಸಾರ ಕೈಕೇಯಿ ಹಾಗೂ ಭರತರ ಬಗ್ಗೆ ಅನುರಾಗ-
ಪ್ರೀತಿಗಳನ್ನು ತೋರಿಸುವುದಾಗಿ ದಶರಥನು ಹೇಳಿದನು; ಸೀತೆಗೆ ಆಶೀರ್ವದಿಸಿ
ಉಪದೇಶಿಸಿದನು. ರಾಮನು ಸೀತೆಯನ್ನು ತ್ಯಜಿಸಲಿರುವನೆಂಬ ಭವಿಷ್ಯವನ್ನು
ದುರ್ವಾಸನು ಈ ಮೊದಲೇ ದಶರಥನಿಗೆ ಹೇಳಿದ್ದನು.

೫೫. ದಿತಿ

ಇವಳು ಪ್ರಾಚೇತಸ ದಕ್ಷಪ್ರಜಾಪತಿ ಮತ್ತು ಅಸಿಕ್ನಿ ಇವರ ಪುತ್ರಿಯಾಗಿದ್ದು
ಕಶ್ಯಪನ ಓರ್ವ ಪತ್ನಿಯಾಗಿದ್ದಳು. ಇವಳ ಮಕ್ಕಳೆಂದರೆ ದೈತ್ಯರು. ದೇವತೆ
ಗಳೆಂದರೆ ಕಶ್ಯಪನ ಇನ್ನೊಬ್ಬ ಪತ್ನಿಯಾದ ಅದಿತಿಯ ಮಕ್ಕಲು. ಅವರು ದೈತ್ಯರ