ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಹನ್ನೆರಡು ವರ್ಷಗಳವರೆಗೆ ಲಕ್ಷ್ಮಣನು ಆಹಾರನಿದ್ರೆಗಳನ್ನು ತೊರೆದಿದ್ದನು. ಆದ್ದರಿಂದಲೇ ಇಂದ್ರಜಿತನನ್ನು ವಧಿಸಲು ಲಕ್ಷ್ಮಣನೊಬ್ಬನಿಗೆ ಸಾಧ್ಯವಿತ್ತು. ಈ ರೀತಿಯ ವರವನ್ನು ಬ್ರಹ್ಮದೇವನು ಇಂದ್ರಜಿತನಿಗೆ ಕೊಟ್ಟಿದ್ದನು. ಲಕ್ಷ್ಮಣನಿಗೆ ಅನ್ಯಾಂದುವು ಎಳ್ಳಷ್ಟೂ ಸಹನೆಯಾಗುತ್ತಿರಲಿಲ್ಲ. ಕೈಕೇಯಿಂರನ್ನು ಸಂತೋಷವಾಗಿಡಲು ರಾಮನನ್ನು ವನವಾಸಕ್ಕೆ ಅಟ್ಟುವ ತನ್ನ ತಂದೆ ದಶರಥನ ಬಗ್ಗೆಯೂ ಈತನಿಗೆ ಸಿಟ್ಟು ಬಂದು ದಶರಥನನ್ನು ವಧಿಸಲು ಬಗೆದಿದ್ದನು. ಅದೇ ರೀತಿ ಭರತನು ರಾಮನನ್ನು ಭೇಟಿಯಾಗಲು ಬಂದಾಗ ಭರತನ ಬಗ್ಗೆಯೂ ಲಕ್ಷಣನು ಸಂದೇಹವನ್ನು ತಾಳಿದ್ದನು. ಆತನನ್ನು ಮತ್ತು ಕೈಕೇಯಿಯನ್ನು ವಧಿಸುವ ಇಚ್ಛೆ ಈತನದಿತ್ತು; ಆದರೆ ರಾಮನು ಇವನಿಗೆ ಬುದ್ದಿ ಹೇಳಿದನು. 'ಸುಗ್ರೀವನು ರಾಮನಿಗೆ ಕೊಟ್ಟ ವಚನವನ್ನು ಲಕ್ಷಿಸದೇ ಸುಖವಿಲಾಸಗಳಲ್ಲಿ ಮಗ್ನನಾಗಿ ಕಾಲಹರಣ ಮಾಡುತ್ತಿದ್ದಾನೆ' ಎಂದು ತಿಳಿದುಬಂದಾಗ ಲಕ್ಷ್ಮಣನು ಕಠೋರನುಡಿಗಳಲ್ಲಿ ಸುಗ್ರೀವನಿಗೆ ಎಚ್ಚರಿಕೆ ಕೊಟ್ಟನು. ಸೀತೆಯ ಪಾದಗಳನ್ನು ಮಾತ್ರ ಲಕ್ಷಣನು ದೃಷ್ಟಿಸಿದ್ದನು; ಆಕೆಯ ಮುಖವನ್ನು ಎಂದೂ ನೋಡಿರಲಿಲ್ಲ. ಅಷ್ಟು ಮರ್ಯಾದೆಯಿಂದ ಲಕ್ಷ್ಮಣನು ಸೀತೆಯನ್ನು ಕಾಣುತ್ತಿದ್ದನು. ಅಂತ ಲಕ್ಷಣನಿಗೆ ಸೀತೆಯು ಅತನ ಚಾರಿತ್ರ್ಯದ ಬಗ್ಗೆ ವೃಥಾ ಆರೋಪವನ್ನು ಮಾಡಿದಾಗ ಲಕ್ಷಣನು ಬಹಳ ವ್ಯಥಿತನಾದನು. ಹೀಗಿದ್ದರೂ ನಂತರದ ಸೀತಾಶೋಧದ ಕಾರ್ಯದಲ್ಲಿ ಇವನು ತನ್ನ ಪ್ರಾಣಗಳನ್ನು ಮುಡುಪಾಗಿಟ್ಟು ಶ್ರಮಿಸಿದನು. ಲಕ್ಷಣನು ಆಗಾಗ ರಾಮನಿಗೆ ಸಲಹೆ ನೀಡುತ್ತಿದ್ದನು. ರಾಮನಿಗೆ ಬಂದ ಕೋಪವನ್ನು ಈತನು ಶಾಂತಗೊಳಿಸಿದ್ದನ್ನು ಕಂಡಾಗ ಲಕ್ಷ್ಮಣನ ಬುದ್ದಿವಂತಿಕೆಯೂ, ನಿಜವಾದ ಶಾಂತವೃತ್ತಿಯೂ ಕಂಡುಬರುತ್ತದೆ. ಲಕ್ಷಣನು ಬಲು ಚಾಣಾಕ್ಷನಾಗಿದ್ದನು. 'ಕಾಂಚನ ಮೃಗವೆಂದರೆ ಒಬ್ಬ ಮಾಯಾವೀ ರಾಕ್ಷಸನೇ ಇರಬೇಕೆಂದು ಆತನು ಊಹಿಸಿ ರಾಮನನ್ನು ಎಚ್ಚರಿಸಿದ್ದನು. ಮೇಘನಾದನು ಲಕ್ಷ್ಮಣನ ಮೇಲೆ ಶಕ್ತಿ ಅಸ್ತವನ್ನು ಬಳಸಿದಾಗ ಲಕ್ಷ್ಮಣನು ಮೂರ್ಛ ಹೋದನು. ಹನುಮಾನನು ತಂದ ಔಷದಿಯಿಂದ ಈತನ ಪ್ರಜ್ಞೆ ಮರಳಿತು. ಲಕ್ಷ್ಮಣನು ರಾಮನಿಗೆ ಸಕಾಲಕ್ಕೆ ಕೊಡುತ್ತಿದ್ದ ಸಲಹೆಗಳು 'ಪಿತನ ಸಲಹೆಗೆ ಸಮವಾಗಿವೆ' ಎಂದು ರಾಮನು ಎಂದುಕೊಳ್ಳುತ್ತಿದ್ದನು. ಬಹಳೇ ಬಿಕ್ಕಟ್ಟಿನ, ಕಠೋರ ಕಾರ್ಯಗಳನ್ನು ರಾಮನು ಲಕ್ಷ್ಮಣನಿಗೆ ಒಪ್ಪಿಸುತ್ತಿದ್ದನು. ಲಕ್ಷಣನಿಗೆ ಅವು ಸರಿ ಎನಿಸದಿದ್ದರೂ ಕೇವಲ ರಾಮನ ಆಜ್ಞೆ ಎಂದು ಶಿರಸಾವಹಿಸಿ ಆ ಕಾರ್ಯಗಳನ್ನು ನೆರವೇರಿಸಿದನು. ಗರ್ಭವತಿಯಾಗಿದ್ದ ಸೀತೆಯನ್ನು ವನದಲ್ಲಿ ಒ