ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ಬಿಟ್ಟುಬರುವ ಕಠಿಣಕಾರ್ಯವನ್ನು ಇವನೇ ಮಾಡಬೇಕಾಯಿತು. ರಾಮ ಹಾಗೂ ಕಾಲ ಇವರಲ್ಲಿ ಏಕಾಂತದ ಮಾತು ನಡೆದಾಗ ದುರ್ವಾಸಮುನಿಯು ರಾಮನನ್ನು ತಕ್ಷಣ ಕಾಣಬೇಕೆಂದು ಕೋರಿ, ಅದನ್ನು ಪೂರೈಸದೇ ಇದ್ದರೆ, ಶಾಪವನ್ನು ಕೊಡುವ ಬೆದರಿಕೆಯನ್ನು ಲಕ್ಷ್ಮಣನಿಗೆ ಹಾಕಿದನು. ಆಗ ಲಕ್ಷ್ಮಣನು ಪ್ರತ್ಯಕ್ಷ ತನ್ನ ಮೃತ್ಯುವನ್ನೇ ಎದುರುಗೊಂಡು, ಕುಲದ ಸಂಹಾರವನ್ನು ತಡೆದನು. ಅವನ ತ್ಯಾಗವು ಅಮೂಲ್ಯವಾಗಿದೆ. ಲಕ್ಷ್ಮಣನು ಮಿತಭಾಷಿಯೂ, ಶಾಂತಸ್ವಭಾವದವನೂ; ಆದರೆ ಪ್ರಸಂಗಾನುಸಾರ ಒಮ್ಮೆಲೇ ರೊಚ್ಚಿಗೇಳುತ್ತಿದ್ದನು; ತ್ಯಾಗಮೂರ್ತಿಯೂ ಶುದ್ಧಚಾರಿತ್ರ್ಯದವನೂ ಆಗಿದ್ದನು. ೧೧೩. ಲವಣ ಲವಣನು ಮಧು ಹಾಗೂ ಕುಂಭೀನಸಿ ಇವರ ಪುತ್ರನಾಗಿದ್ದನು. ಚಿಕ್ಕಂದಿನಿಂದ ಈತ ಪಾಪಚಾರಿಣಿಯಾಗಿದ್ದನು. ಶಂಕರನ ವರದಿಂದ ಮಧುದೈತ್ಯನು ಒಂದು ತ್ರಿಶೂಲವನ್ನು ಪಡೆದಿದ್ದನು. ಅದು ತನ್ನ ವಂಶದಲ್ಲಿಯೇ ಯಾವಾಗಲೂ ಉಳಿಯಬೇಕೆಂಬ ಇಚ್ಛೆ ಮಧುದೈತ್ಯನದಾಗಿತ್ತು. ಶಂಕರನು 'ಅದು ಕೇವಲ ಒಬ್ಬ ಮಗನ ಜೀವಿತ ಮಾತ್ರಕ್ಕೆ ಆತನ ಕೈಯಲ್ಲಿ ಉಳಿಯುವದು; ಮತ್ತು ಅದು ಕೈಯಲ್ಲಿರುವವರೆಗೆ ಯಾರೂ ಆತನನ್ನು ವಧಿಸಲಾರರು' ಎಂದು ಏಳಿದನು. ತಂದೆಯಿಂದ ಈ ಶೂಲವು ಲವಣನಿಗೆ ದೊರೆಯಿತು. ಈ ಶೂಲವು ಕೈಗೆ ಬಂದನಂತರ ಲವಣನು ಉನ್ಮತ್ತನಾದನು. ರಾಮನು ಶತ್ರುಘ್ನನಿಂದ ಈತನ ವಧೆಯನ್ನು ಮಾಡಿಸಿದನು. ಲವಣನ ಬಳಿ ಶೂಲವಿರದೇ ಇದ್ದಾಗ ಶತ್ರುಘ್ನನು ಈತನನ್ನು ವಧಿಸಿದನು. ೧೧೪, ವರುಣ

  • ಈತನು ಒಬ್ಬ ಮಂತ್ರದ್ರಷ್ಟಾರನಾಗಿದ್ದನು. ಈತನು ಅದಿತಿಯ ಮಗ,

ಇವನು ಪಶ್ಚಿಮ ದಿಕ್ಕಿನ, ನಾಗಲೋಕದ ಮತ್ತು ಜಲದ ಅಧಿಪತಿಯಾಗಿದ್ದನು. ವಾರುಣಿ ಅಥವಾ ಗೌರಿ ಈತನ ಹೆಂಡತಿಯಾಗಿದ್ದು ಈತನಿಗೆ 'ಗೋ' ಎಂಬ ಮಗನಿದ್ದನು. ಸುನಾಭ ಎಂಬಾತನು ಈತನ ಮಂತ್ರಿಯಾಗಿದ್ದನು. ಶುಕ್ರಾಚಾರ್ಯನ ಮಗಳಾದ ಜೇಷ್ಠಾ ಎಂಬಾಕೆ ಈತನ ದ್ವಿತೀಯ ಭಾರ್ಯೆ. ಈಕೆಯಿಂದ ಬಲ, ಸುರಾ, ಅಧರ್ಮ, ಪುಷ್ಕರ, ಬಂದಿನ ಎಂಬ ಪುತ್ರರಾದರು. ಸೋಮಕನೆಯಾದ ಭದ್ರಾ ಇವಳೊಡನೆ ವರುಣನ ವಿವಾಹವಾಗುವದಿತ್ತು; ಆದರೆ ಅವಳ ವಿವಾಹವು