ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೬೧ ಅವನು ಪಡೆದ ಬ್ರಹ್ಮರ್ಷಿ ಪದಕ್ಕೆ ವಸಿಷ್ಠನಿಂದ ಮನ್ನಣೆ ದೊರಕಿತು. ವಸಿಷ್ಠ ಸೃತಿ, ವಸಿಷ್ಠ ತಮತ್ರ ವಸಿಷ್ಠ ಪುರಾಣಗಳನ್ನು ಈತನು ರಚಿಸಿರುವನೆಂದು ಕಂಡುಬರುತ್ತದೆ. ವಸಿಷ್ಠನು ಇಕ್ಷಾಕುಕುಲದ ಪುರೋಹಿತನಾಗಿದ್ದನು. ಮಾರೀಚ ಮತ್ತು ಸುಬಾಹುಇವರಿಂದ ವಿಶ್ವಾಮಿತ್ರನ ಯಜ್ಞಕ್ಕೆ ಉಪಟಳವಾಗುತ್ತಿತ್ತು. ಅದನ್ನು ತಡೆಯಲು ವಿಶ್ವಾಮಿತ್ರನೊಡನೆ ರಾಮನನ್ನು ಕಳುಹಬೇಕೆಂಬ ಸಲಹೆಯನ್ನು ವಸಿಷ್ಠನು ದಶರಥನಿಗೆ ಕೊಟ್ಟಿದ್ದನು. ದೇಹಸಹಿತ ಸ್ವರ್ಗವನ್ನು ಸೇರಬಯಸುವ ತ್ರಿಶಂಕುವಿನ ಯಜ್ಞಕ್ಕೆ ಹೋಗುವದನ್ನು ಈತನು ನಿರಾಕರಿಸಿದನು. ರಾಮನಿಗೆ ಯೌವರಾಜ್ಯಾಭಿಷೇಕದ ಪೂರ್ವ ದೀಕ್ಷೆಯನ್ನು ವಸಿಷ್ಠನೆ ಕೊಟ್ಟನು. ದಶರಥನ ಮರಣದ ನಂತರ ಭರತನನ್ನು ಕರೆಯಿಸಿ ಆತನಿಂದ ಅತ್ಯಂಕ್ರಿಯೆಗಳನ್ನು ಮಾಡಿಸಿದನು. ಸೀತೆ ವನವಾಸಕ್ಕೆ ಹೊರಟಾಗ ಆಕೆ ನಾರಿನ ಬಟ್ಟೆಗಳನ್ನು ಧರಿಸಬೇಕೆಂದು ಕೈಕೇಯಿಯ ಆಗ್ರಹವಿತ್ತು. ಆಗ ವಸಿಷ್ಠನು ಬೇಡಿಕೊಂಡ ವರದಲ್ಲಿ ಸೀತೆಗೆ ವನವಾಸವಿಲ್ಲ' ಎಂದು ನಿಖರವಾಗಿ ಹೇಳಿದನು. ರಾಮನನ್ನು ಕಾಣಲು ಭರತನೊಡನೆ ವಸಿಷ್ಠನು ಹೋಗಿದ್ದನು. ನಿಮಿರಾಜ ಮತ್ತು ಸೌದಾಸ ರಾಜರಿಗೆ ವಸಿಷ್ಠನು ಶಾಪಗಳನ್ನು ಕೊಟ್ಟಿದ್ದಾನೆ. ನಿಮಿಯ ಪ್ರತಿಶಾಪವು ಈತನಿಗೆ ತುಂಬಾ ತೊಂದರೆ ಮಾಡಿತು. ದುರ್ವಾಸ ಋಷಿಯು ವಸಿಷ್ಠನ ಆಶ್ರಮದಲ್ಲಿ ಒಂದು ಸಂವತ್ಸರಕಾಲ ವಾಸವಿದ್ದನು. ದಶರಥನ ಕುಲದ ಎಲ್ಲಾ ಧಾರ್ಮಿಕ ವಿಧಿಗಳನ್ನು ವಸಿಷ್ಠನು ನೆರವೇರಿಸಿದನು. ರಾಮನ ಮಹಾಪ್ರಸ್ಥಾನಕಾಲದಲ್ಲಿಯೂ ಧಾರ್ಮಿಕ ವಿಧಿಗಳನ್ನು ವಸಿಷ್ಠನೇ ಮಾಡಿದನು. ವಸಿಷ್ಠನಿಗೆ ಮಹೋದಯ ಮುಂತಾದ ನೂರು ಪುತ್ರರಿದ್ದರು. ಯಜ್ಞದ ಆಮಂತ್ರಣವನ್ನು ನಿರಾಕರಿಸಿದ್ದಕ್ಕಾಗಿ ವಿಶ್ವಾಮಿತ್ರನು ಅವರೆಲ್ಲರಿಗೂ ಶಾಪ ಕೊಟ್ಟನು. ೧೧೬, ವಸಿಷ್ಠಪುತ್ರ ಮಹೋದಯ ವಸಿಷ್ಠನಿಗೆ ನೂರು ಗಂಡುಮಕ್ಕಳಿದ್ದರು. ಅವರೆಲ್ಲರೂ ಮಹಾತಪಸ್ವಿ ಗಳಾಗಿದ್ದರು. ವಿಶ್ವಾಮಿತ್ರನು ಅವರೆಲ್ಲರಿಗೂ ಶಾಪವನ್ನು ಕೊಟ್ಟಿದ್ದನು. ಅವರಲ್ಲಿ ಮಹೋದಯನೊಬ್ಬನಾಗಿದ್ದನು. ಶಾಪ ಕ್ರಮಸಂಖ್ಯೆ ೧೫ ವಿಶ್ವಾಮಿತ್ರ < ವಸಿಷ್ಠಪುತ್ರ ಮಹೋದಯ ಪರಿಶೀಲಿಸಿರಿ.