ಈ ಪುಟವನ್ನು ಪ್ರಕಟಿಸಲಾಗಿದೆ

೪೬೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೧೧೭. ವಾಯು

ವಾಯು ಮತ್ತು ಅಂಜನಿಯಿಂದ ಹನುಮಾನನು ಹುಟ್ಟಿದನು. ಕುಶನಾಭನ
ನೂರು ಕನ್ಯೆಯರಲ್ಲಿ ಅನುರಕ್ತನಾಗಿ ವಾಯುವು ಅವರಿಗೆ ತನ್ನ ಪತ್ನಿಯರಾಗಲು
ವಿನಂತಿಸಿದನು. ಆ ಕನ್ಯೆಯರು ನಿರಾಕರಿಸಿದಾಗ ವಾಯುವು ಅವರ ಅಂಗಭಂಗ
ವನ್ನು ಮಾಡಿ ಅವರನ್ನು ಕುಬ್ಜೆಯರನ್ನಾಗಿ ಮಾಡಿದನು. ಇಂದ್ರನ ವಜ್ರದಿಂದ
ಹನುಮಾನನ 'ಹನು' ಭಗ್ನವಾದಾಗ ವಾಯುವು ಕೋಪಗೊಂಡು ತನ್ನ ತ್ರೈಲೋಕ್ಯ
ಸಂಚಾರವನ್ನು ನಿಲ್ಲಿಸಿದನು. ಆಗ ಎಲ್ಲ ಪ್ರಾಣಿಮಾತ್ರರಿಗೆ ಉಸಿರಾಟ ಅಸಾಧ್ಯ
ವಾಯಿತು. ದೇವತೆಗಳು ಈ ಸಂಗತಿಯನ್ನು ಬ್ರಹ್ಮದೇವನಿಗೆ ತಿಳಿಸಿದಾಗ ಆತನು
ವಾಯುವನ್ನು ಸಂತೈಸಿದನು. ಗಾಯಗೊಂಡ ಹನುಮಾನನ ಮೈಮೇಲೆ ಕೈಯಾಡಿಸಿ
ಅವನನ್ನು ಗುಣಪಡಿಸಿದನು. ಅಷ್ಟೇ ಅಲ್ಲದೇ, ಹೀಗಾದನಂತರ ವಾಯು ತನ್ನ
ಸಂಚಾರವನ್ನು ಮೊದಲಿನಂತೆ ಪ್ರಾರಂಭಿಸಿದನು.

೧೧೮. ವಾಲಿ

ಋಕ್ಷಪತ್ನಿಯಾದ ವಿರಜಿ ಮತ್ತು ಇಂದ್ರ ಇವರ ಪುತ್ರನೇ ವಾಲಿ. ಈತನ
ಜನ್ಮದ ಕಥೆ ಬಲುವಿಚಿತ್ರ. ಒಮ್ಮೆ ಋಕ್ಷರಜಸ ಎಂಬ ವಾನರನು ಬಾಯಾರಿಕೆಯನ್ನು
ತಣಿಸಲು ಒಂದು ಸರೋವರದ ಬಳಿ ಬಂದು, ನೀರಿನಲ್ಲಿ ತನ್ನ ಪ್ರತಿಬಿಂಬವನ್ನು
ಕಂಡು, ತನ್ನ ಶತ್ರು ಅಲ್ಲಿರುವನೆಂದು ಭಾವಿಸಿ, ಆ ಸರೋವರದಲ್ಲಿ ಧುಮುಕಿದನು.
ಅವನು ನೀರಿನ ಆಚೆ ಬಂದಾಗ ಮೊದಲಿನ ವಾನರನಾಗಿ ಉಳಿಯದೇ ಓರ್ವ
ಸ್ತ್ರೀಯಾಗಿದ್ದನು. ಅದೇ ಕಾಲಕ್ಕೆ ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ಸೂರ್ಯ
ಮತ್ತು ಇಂದ್ರರು ಈ ಸ್ತ್ರೀಯನ್ನು ಕಂಡು ಕಾಮಪರವಶರಾದರು. ಕಾಮೋದ್ರೇಕದಿಂದ
ಇಂದ್ರನ ವೀರ್ಯವು ಆ ಸ್ತ್ರೀಯ ತಲೆಯ ಮೇಲೆ ಬಿದ್ದಿತು. ತಲೆಗೂದಲಿನ
ಮೇಲೆ ಬಿದ್ದ ವೀರ್ಯದಿಂದ ವಾಲಿಯೂ ಮತ್ತು ಗ್ರೀವದ (ಕತ್ತಿನ) ಮೇಲೆ
ಬಿದ್ದ ವೀರ್ಯದಿಂದ ಸುಗ್ರೀವನೂ ಜನ್ನಹೊಂದಿದರು. ಅಂದಿನ ರಾತ್ರಿ ಕಳೆದನಂತರ
ಈ ಸ್ತ್ರೀಯು ಮೊದಲಿನಂತೆ ವಾನರಳಾದಳು. ಆನಂದರಾಮಾಯಣದಲ್ಲಿ ರಾಮನು
ವಾಲಿಯನ್ನು ವಧಿಸಿದ ಕಥೆ ಮತ್ತು ವಾಲಿ ಹಾಗೂ ಸರ್ಪ ಇವರು ಪರಸ್ಪರರಿಗೆ
ಶಾಪಗಳನ್ನು ಕೊಟ್ಟ ಕಥೆಗಳಿವೆ. ಪಂಚಮೇಢ್ರ ಎಂಬ ರಾಕ್ಷಸನು ವಾಲಿಯನ್ನು
ನುಂಗಿದಾಗ ವೀರಭದ್ರನು ಆ ರಾಕ್ಷಸನನ್ನು ಸೀಳಿ ವಾಲಿಯ ಬಿಡುಗಡೆ ಮಾಡಿದನು.
ವಾಲಿ ತನ್ನ ಸಾಮರ್ಥ್ಯದಿಂದ ರಾವಣನನ್ನು ಬೆರಗುಗೊಳಿಸಿದನು; ಅವನೊಡನೆ
ಸ್ನೇಹವನ್ನು ಬೆಳೆಸಿದನು. ತಾರ ಎಂಬಾತನು ಈತನ ಅಮಾತ್ಯನಾಗಿದ್ದನು. ತಾರನ